ಶಾಂತಿಯುತವಾದ ಚುನಾವಣೆ

ಮಧುಗಿರಿ
            ಸ್ಥಳೀಯ ಪುರಸಭೆಯ ಒಟ್ಟು 23 ವಾರ್ಡ್‍ಗಳಿಗೆ ನಡೆದ ಚುನಾವಣೆ ಬಹುತೇಕ ಶಾಂತಿಯುತವಾಗಿ ನಡೆದಿದೆ. ಮಧುಗಿರಿ ಪುರಸಭಾ ವ್ಯಾಪ್ತಿಯಲ್ಲಿನ 23518 ಒಟ್ಟು ಮತದಾರರಲ್ಲಿ 12075 ಮಹಿಳೆಯರು 11433 ಪುರುಷ ಮತದಾರರಿದ್ದು ಅಂತಿಮವಾಗಿ ನಡೆದ ಚುನಾವಣೆಯಲ್ಲಿ ಒಟ್ಟು 19058 ಮತಗಳು ಚಲಾವಣೆಯಾಗಿ ಮಹಿಳೆಯರು 9610 ಪುರುಷರು 9448 ಮತ ಚಲಾಯಿಸಿ ಪುರಸಭಾ ಚುನಾವಣಾ ಫಲಿತಾಂಶದಲ್ಲಿ 19 ವಾರ್ಡುಗಳಲ್ಲಿ ಪುರುಷ ಮತದಾರರು ಪ್ರಮುಖ ಪಾತ್ರ ವಹಿಸಿದ್ದರೆ, ಇನ್ನುಳಿದ 4 ವಾರ್ಡ್‍ಗಳಲ್ಲಿ ಮಾತ್ರ ಮಹಿಳೆಯರು ಅತೀ ಕಡಿಮೆ ಪ್ರಮಾಣದ ಮತದಾನದಲ್ಲಿ ಭಾಗವಹಿಸಿದ್ದು ಒಟ್ಟಾರೆಯಾಗಿ ಪಟ್ಟಣದಲ್ಲಿ ಶೇ.81.04ರಷ್ಟು ಮತ ಚಲಾಯಿಸಿ ಮತದಾನದಲ್ಲಿ ಪಾಲ್ಗೊಂಡಿದ್ದಾರೆ.
            1ನೇ ವಾರ್ಡ್ ಸಾಮಾನ್ಯ ಮಹಿಳೆ : ಮುಬಾಶಿರಾ ಬಾನು (ಕಾಂಗ್ರೆಸ್) ಶಕೀಲಾ ಬಾನು (ಜೆಡಿಎಸ್) ಅಸ್ಮತ್ ವುನ್ನೀಸಾಷರೀóಫ್(ಪಕ್ಷೇತರರು) ಒಟ್ಟು ಮತಗಳು 977 ಚಲಾವಣೆಯಾದ ಮತಗಳು 829 ಪುರುಷರೆ ಮೇಲುಗೈ ಶೇ. 99.99 ಸಾಧಿಸಿದ್ದು ಮಹಿಳೆಯರು ಶೇ. 79.50 ಮತ ಚಲಾಯಿಸಿ ಒಟ್ಟಾರೆ ಶೇ. 84.85ರಷ್ಟು ಮತದಾನವಾಗಿದೆ.
           2ನೇ ವಾರ್ಡ್ ಪರಿಶಿಷ್ಟ ಜಾತಿ: ಎಂ.ವಿ.ಗೋವಿಂದರಾಜು (ಕಾಂಗ್ರೆಸ್) ಸುಬ್ರಮಣ್ಯ (ಜೆಡಿಎಸ್) ಟಿ.ಹೆಚ್ ದಿಲೀಪ್ ಮತ್ತು ಹನುಮಂತರಾಯಪ್ಪ (ಪಕ್ಷೇತರರು) ಒಟ್ಟು ಮತಗಳು 925 ಚಲಾವಣೆಯಾದ ಮತಗಳು 738 ಪುರುಷರೆ ಮೇಲುಗೈ ಶೇ.81.37 ಸಾಧಿಸಿದ್ದು, ಮಹಿಳೆಯರು ಶೇ. 78.27 ಮತದಾನ ಮಾಡಿದ್ದಾರೆ. ಒಟ್ಟಾರೆ ಶೇ.79.78 ಮತದಾನವಾಗಿದೆ.
             3ನೇ ವಾರ್ಡ್ ಹಿಂದುಳಿದ ವರ್ಗ ಎ ಮಹಿಳೆ: ನಸೀಮಾಬಾನು (ಕಾಂಗ್ರೆಸ್) ರುಕಿಬೀ ಷರೀಫ್ (ಜೆಡಿಎಸ್) ಅಸೀನಾ ಬಾನು (ಬಿಜೆಪಿ) ಜಯಮ್ಮ (ಪಕ್ಷೇತರು) ಒಟ್ಟು ಮತಗಳು 817 ಚಲಾವಣೆಯಾದ ಮತಗಳು 694 ಪುರುಷರೆ ಮೇಲುಗೈ 100.52 ಸಾಧಿಸಿದ್ದು, ಮಹಿಳೆಯರು 71.06 ಮತದಾನ ಮಾಡಿದ್ದಾರೆ. ಒಟ್ಟಾರೆ ಶೇ.84.94 ಮತದಾನವಾಗಿದೆ.
             4ನೇ ವಾರ್ಡ್ ಸಾಮಾನ್ಯ: ಆಲೀಮುಲ್ಲಾ (ಕಾಂಗ್ರೆಸ್) ಸೈಯದ್‍ಕರೀಂ (ಜೆಡಿಎಸ್), ಆರ್.ಡಿ.ಅಭಿಷೇಕ್ ಜೈನ್ (ಬಿಜೆಪಿ) ಅಬ್ದುಲ್‍ಲತೀಫ್ (ಪಕ್ಷೇತರು) ಒಟ್ಟು ಮತಗಳು 1001 ಚಲಾವಣೆಯಾದ ಮತಗಳು 856 ಪುರುಷರೆ ಮೇಲುಗೈ 87.99 ಸಾಧಿಸಿದ್ದು, ಮಹಿಳೆಯರು 82.96 ಮತದಾನ ಮಾಡಿದ್ದಾರೆ. ಒಟ್ಟಾರೆ ಶೇ.85.51 ಮತದಾನವಾಗಿದೆ.
             5ನೇ ವಾರ್ಡ್ ಸಾಮಾನ್ಯ: ಎಸ್.ದಯಾನಂದ್ (ಕಾಂಗ್ರೆಸ್), ಎಂ.ಎಲ್.ಗಂಗರಾಜು (ಜೆಡಿಎಸ್), ಬಿ.ಹಿತೇಷ್ (ಬಿಜೆಪಿ) ಒಟ್ಟು  ಮತಗಳು 712 ಚಲಾವಣೆಯಾದ ಮತಗಳು 538 ಪುರುಷರೆ ಮೇಲುಗೈ 75.65 ಸಾಧಿಸಿದ್ದು, ಮಹಿಳೆಯರು 75.48 ಮತದಾನ ಮಾಡಿದ್ದಾರೆ. ಒಟ್ಟಾರೆ ಶೇ.75.56 ಮತದಾನವಾಗಿದೆ.
              6ನೇ ವಾರ್ಡ್ ಹಿಂದುಳಿದ ವರ್ಗ ಬಿ: ಚಿಕ್ಕಣ್ಣ (ಜೆಡಿಎಸ್) ಸಿ.ನಟರಾಜು (ಕಾಂಗ್ರೆಸ್) ಒಟ್ಟು ಮತಗಳು 950 ಚಲಾವಣೆಯಾದ ಮತಗಳು 810 ಮಹಿಳೆಯರು ಮೇಲುಗೈಯಿಂದಾಗಿ ಶೇ. 85.42 ಪುರುಷರು ಶೇ. 85.11 ಸಾಧಿಸಿ ಮತದಾನ ಮಾಡಿದ್ದಾರೆ. ಒಟ್ಟಾರೆಯಾಗಿ ಒಟ್ಟಾರೆ ಶೇ.85.26 ಮತದಾನವಾಗಿದೆ.
               7ನೇ ವಾರ್ಡ್ ಪರಿಶಿಷ್ಟ ಜಾತಿ ಮಹಿಳೆ: ಪುಟ್ಟಮ್ಮ(ಕಾಂಗ್ರೆಸ್) ಭವಾನಿ (ಜೆಡಿಎಸ್). ಒಟ್ಟು ಮತಗಳು 1265 ಚಲಾವಣೆಯಾದ ಮತಗಳು 1031 ಪುರುಷರು ಶೇ. 82.69 ಮೇಲುಗೈ ಆಗಿದ್ದು ಮಹಿಳೆಯರು ಶೇ. 80.37 ಸಾಧಿಸಿ ಮತದಾನ ಮಾಡಿದ್ದಾರೆ. ಒಟ್ಟಾರೆಯಾಗಿ ಒಟ್ಟಾರೆ ಶೇ.81.50 ಮತದಾನವಾಗಿದೆ.
               8ನೇ ವಾರ್ಡ್ ಪರಿಶಿಷ್ಟ ಪಂಗಡ ಮಹಿಳೆ: ಪಾರ್ವತಮ್ಮ (ಜೆಡಿಎಸ್) ಯಶೋಧ ಅಂಜಿನಪ್ಪ (ಕಾಂಗ್ರೆಸ್), ಒಟ್ಟು ಮತಗಳು 1005 ಚಲಾವಣೆಯಾದ ಮತಗಳು 874 ಪುರುಷರು ಶೇ. 88.41 ಮೇಲುಗೈ ಆಗಿದ್ದು ಮಹಿಳೆಯರು ಶೇ. 85.63 ಸಾಧಿಸಿ ಮತದಾನ ಮಾಡಿದ್ದಾರೆ. ಒಟ್ಟಾರೆಯಾಗಿ ಶೇ.86.97 ಮತದಾನವಾಗಿದೆ.
                9ನೇ ವಾರ್ಡ್ ಹಿಂದುಳಿದ ವರ್ಗ ಎ: ಎಂ.ಇ.ಕರಿಯಣ್ಣ (ಕಾಂಗ್ರೆಸ್) ಎಂ.ವಿ.ಮಂಜುನಾಥ್ (ಜೆಡಿಎಸ್). ಎಲ್ ರವಿ ಕಿರಣ್ (ಬಿಜೆಪಿ) ಎಸ್.ಶಂಕರಲಿಂಗ (ಪಕ್ಷೇತರ) ಒಟ್ಟು ಮತಗಳು 924 ಚಲಾವಣೆಯಾದ ಮತಗಳು 767 ಪುರುಷರು ಶೇ. 85.02 ಮೇಲುಗೈ ಆಗಿದ್ದು, ಮಹಿಳೆಯರು ಶೇ. 81.22 ಸಾಧಿಸಿ ಮತದಾನ ಮಾಡಿದ್ದಾರೆ. ಒಟ್ಟಾರೆಯಾಗಿ ಒಟ್ಟಾರೆ ಶೇ.83.01 ಮತದಾನವಾಗಿದೆ.
               10ನೇ ವಾರ್ಡ್ ಹಿಂದುಳಿದ ವರ್ಗ ಎ ಮಹಿಳೆ: ಗಿರಿಜಾ (ಕಾಂಗ್ರೆಸ್) ಸುಜಾತ ಪಿ.ಭಾಸ್ಕರ್ (ಜೆಡಿಎಸ್), ಒಟ್ಟು ಮತಗಳು 823 ಚಲಾವಣೆಯಾದ ಮತಗಳು 663 ಪುರುಷರು ಶೇ.83.61 ಮೇಲುಗೈ ಸಾಧಿಸಿದ್ದರೆ, ಮಹಿಳೆಯರು 78.12 ಮತದಾನ ಮಾಡಿದ್ದಾರೆ. ಒಟ್ಟಾರೆಯಾಗಿ ಒಟ್ಟಾರೆ ಶೇ.80.56 ಮತದಾನವಾಗಿದೆ.
            11ನೇ ವಾರ್ಡ್ ಸಾಮಾನ್ಯ ಮಹಿಳೆ: ಶಾಹೀನಾ ಕೌಸರ್ ಶಕೀಲ್ (ಕಾಂಗ್ರೆಸ್) ಎನ್.ಟಿ.ಸಿದ್ದಲಕ್ಷ್ಮಮ್ಮ (ಜೆಡಿಎಸ್), ಪೈರೋಜ್ ಖಾನ್ (ಪಕ್ಷೇತರ) ಒಟ್ಟು ಮತಗಳು 992 ಚಲಾವಣೆಯಾದ ಮತಗಳು 812 ಮಹಿಳೆಯರು ಶೇ.83.67 ಮೇಲುಗೈ ಸಾಧಿಸಿದ್ದರೆ ಪುರುಷರು ಶೇ. 80.00 ಮತದಾನ ಮಾಡಿದ್ದಾರೆ. ಒಟ್ಟಾರೆಯಾಗಿ ಒಟ್ಟಾರೆ ಶೇ.81.85 ಮತದಾನವಾಗಿದೆ.
               12ನೇ ವಾರ್ಡ್ ಸಾಮಾನ್ಯ ಮಹಿಳೆ: ಎನ್.ಶೋಭಾರಾಣಿ (ಕಾಂಗ್ರೆಸ್) ಸಲೀಂವುನ್ನೀಸಾ ಆಲ್ತಾಫ್ (ಜೆಡಿಎಸ್) ಒಟ್ಟು ಮತಗಳು 770 ಚಲಾವಣೆಯಾದ ಮತಗಳು 671 ಪುರುಷರು ಶೇ.88.77 ಮೇಲುಗೈ ಆಗಿದ್ದು, ಮಹಿಳೆಯರು ಶೇ. 85.68 ಸಾಧಿಸಿ ಮತದಾನ ಮಾಡಿದ್ದಾರೆ. ಒಟ್ಟಾರೆ ಶೇ.87.14 ಮತದಾನವಾಗಿದೆ.
                13ನೇ ವಾರ್ಡ್ ವಾರ್ಡ್ ಹಿಂದುಳಿದ ವರ್ಗ ಎ: ನರಸಿಂಹಮೂರ್ತಿ (ಜೆಡಿಎಸ್) ಪಿ.ಆರ್.ಶ್ರೀರಂಗರಾಜು (ಕಾಂಗ್ರೆಸ್) ಒಟ್ಟು ಮತಗಳು 843 ಚಲಾವಣೆಯಾದ ಮತಗಳು 668 ಪುರುಷರು ಶೇ.81.11 ಮೇಲುಗೈ ಆಗಿದ್ದು ಮಹಿಳೆಯರು ಶೇ.77.44 ಸಾಧಿಸಿ ಮತದಾನ ಮಾಡಿದ್ದಾರೆ. ಒಟ್ಟಾರೆ ಶೇ.79.24 ಮತದಾನವಾಗಿದೆ.
                 14ನೇ ವಾರ್ಡ್ ಸಾಮಾನ್ಯ ಮಹಿಳೆ: ಎನ್.ಬಿ.ಗಾಯತ್ರಿ (ಕಾಂಗ್ರೆಸ್) ರಾಧ ಜೆಡಿಎಸ್. ಒಟ್ಟು ಮತಗಳು 932 ಚಲಾವಣೆಯಾದ ಮತಗಳು 788 ಪುರುಷರು ಶೇ.85.52 ಮೇಲುಗೈ ಆಗಿದ್ದು ಮಹಿಳೆಯರು ಶೇ. 83.64 ಸಾಧಿಸಿ ಮತದಾನ ಮಾಡಿದ್ದಾರೆ. ಒಟ್ಟಾರೆ ಶೇ.84.55 ಮತದಾನವಾಗಿದೆ.
                 15ನೇ ವಾರ್ಡ್ ಸಾಮಾನ್ಯ : ನಾರಾಯಣ್ ಜೆಡಿಎಸ್, ಕೆ.ಪ್ರಕಾಶ್ ಕಾಂಗ್ರೆಸ್, ಎಂ.ರಾಜೇಶ್ ಬಿಜೆಪಿ, ಎಂ.ಎಸ್.ಬದ್ರಿನಾಥ್ (ಪಕ್ಷೇತರರು) ಒಟ್ಟು ಮತಗಳು 1051 ಚಲಾವಣೆಯಾದ ಮತಗಳು 827 ಪುರುಷರು ಶೇ.78.88 ಮೇಲುಗೈ ಆಗಿದ್ದು, ಮಹಿಳೆಯರು ಶೇ. 78.50 ಸಾಧಿಸಿ ಮತದಾನ ಮಾಡಿದ್ದಾರೆ. ಒಟ್ಟಾರೆ ಶೇ.78.69ರಷ್ಟು ಮತದಾನವಾಗಿದೆ.
                   16ನೇ ವಾರ್ಡ್ ಸಾಮಾನ್ಯ: ಎಂ.ಆರ್.ಜಗನ್ನಾಥ್ ಎಂ.ಇ. ದೀಕ್ಷಿತ್ ಬಿಜೆಪಿ, ಜೆ.ಡಿ.ಎಸ್ ವೆಂಕಟೇಶ್ ಕಾಂಗ್ರೆಸ್, ಒಟ್ಟು ಮತಗಳು 932 ಚಲಾವಣೆಯಾದ ಮತಗಳು 795 ಪುರುಷರು ಶೇ.84.65 ಮೇಲುಗೈ ಆಗಿದ್ದು ಮಹಿಳೆಯರು ಶೇ.85.89 ಸಾಧಿಸಿ ಮತದಾನ ಮಾಡಿದ್ದಾರೆ. ಒಟ್ಟಾರೆ ಶೇ.85.30ರಷ್ಟು ಮತದಾನವಾಗಿದೆ.
                    17ನೇ ವಾರ್ಡ್ ಪರಿಶಿಷ್ಟ ಜಾತಿ: ಎಂ.ಎಸ್.ಚಂದ್ರಶೇಖರ್ (ಕಾಂಗ್ರೆಸ್) ಎಂ.ವಿ.ಬಾಲಾಜಿ ಬಾಬು ಜೆಡಿಎಸ್. ಮಂಜುನಾಥ ಬಿಜೆಪಿ. ಎಂ.ಎಸ್.ರಾಘವೇಂದ್ರ ಪಕ್ಷೇತರ. ಒಟ್ಟು ಮತಗಳು 1049 ಚಲಾವಣೆಯಾದ ಮತಗಳು, 915 ಪುರುಷರು ಶೇ.88.01 ಮೇಲುಗೈ ಆಗಿದ್ದು, ಮಹಿಳೆಯರು ಶೇ.86.47 ಸಾಧಿಸಿ ಮತದಾನ ಮಾಡಿದ್ದಾರೆ. ಒಟ್ಟಾರೆ ಶೇ.87.23ರಷ್ಟು ಮತದಾನವಾಗಿದೆ.
                     18 ವಾರ್ಡ್ ಪರಿಶಿಷ್ಟ ಜಾತಿ ಮಹಿಳೆ: ನಾಗಲತಾಲೋಕೇಶ್ ಕಾಂಗ್ರೆಸ್, ಪ್ರೇಮ ಜೆಡಿಎಸ್. ಒಟ್ಟು ಮತಗಳು 1405 ಚಲಾವಣೆಯಾದ ಮತಗಳು. 1034 ಪುರುಷರು ಶೇ.73.91 ಮೇಲುಗೈ ಆಗಿದ್ದು ಮಹಿಳೆಯರು ಶೇ.73.29 ಸಾಧಿಸಿ ಮತದಾನ ಮಾಡಿದ್ದಾರೆ. ಒಟ್ಟಾರೆ ಶೇ.73.59ರಷ್ಟು ಮತದಾನವಾಗಿದೆ.
                     19ನೇ ವಾರ್ಡ್ ಸಾಮಾನ್ಯ: ಚಂದ್ರಶೇಖರ್ (ಜೆಡಿಎಸ್) ನರಸಿಂಹಮೂರ್ತಿ (ಕಾಂಗ್ರೆಸ್) ಆರ್.ಭರತೇಶ್ ಬಿಜೆಪಿ. ಸಿ.ರಾಜು ಪಕ್ಷೇತರ. ಒಟ್ಟು ಮತಗಳು 952 ಚಲಾವಣೆಯಾದ ಮತಗಳು 811 ಪುರುಷರು ಶೇ.86.23 ಮೇಲುಗೈ ಆಗಿದ್ದು, ಮಹಿಳೆಯರು ಶೇ.84.17 ಸಾಧಿಸಿ ಮತದಾನ ಮಾಡಿದ್ದಾರೆ. ಒಟ್ಟಾರೆ ಶೇ.85.19 ರಷ್ಟು ಮತದಾನವಾಗಿದೆ.
                      20ನೇ ವಾರ್ಡ್ ಸಾಮಾನ್ಯ ಮಹಿಳೆ: ಇಂದ್ರಮ್ಮ(ಜೆಡಿಎಸ್), ರಾಧಿಕ ಆನಂದಕೃಷ್ಣ ಕಾಂಗ್ರೆಸ್. ಒಟ್ಟು ಮತಗಳು 1365 ಚಲಾವಣೆಯಾದ ಮತಗಳು 1003 ಪುರುಷರು ಶೇ.74.89 ಮೇಲುಗೈ ಆಗಿದ್ದು ಮಹಿಳೆಯರು ಶೇ.72.08 ಸಾಧಿಸಿ ಮತದಾನ ಮಾಡಿದ್ದಾರೆ. ಒಟ್ಟಾರೆ ಶೇ.73.48 ರಷ್ಟು ಮತದಾನವಾಗಿದೆ.
                      21ನೇ ವಾರ್ಡ್ ಪರಿಶಿಷ್ಟ ಪಂಗಡ: ತಿಮ್ಮರಾಜು(ಜೆಡಿಎಸ್) ಎಂ.ಎನ್.ಮಾರುತಿ(ಕಾಂಗ್ರೆಸ್) ಒಟ್ಟು ಮತಗಳು 998 ಚಲಾವಣೆಯಾದ ಮತಗಳು 803 ಪುರುಷರು ಶೇ.81.54 ಮೇಲುಗೈ ಆಗಿದ್ದು ಮಹಿಳೆಯರು ಶೇ.79.46 ಸಾಧಿಸಿ ಮತದಾನ ಮಾಡಿದ್ದಾರೆ. ಒಟ್ಟಾರೆ ಶೇ.80.46ರಷ್ಟು ಮತದಾನವಾಗಿದೆ.
                      22ನೇ ವಾರ್ಡ್ ಸಾಮಾನ್ಯ ಮಹಿಳೆ: ಲಲಿತಾ (ಜೆಡಿಎಸ್). ಜಿ.ಆರ್.ಸುಜಾತ (ಕಾಂಗ್ರೆಸ್) ಸಾವಿತ್ರಮ್ಮ ಪಕ್ಷೇತರ. ಒಟ್ಟು ಮತಗಳು 1291 ಚಲಾವಣೆಯಾದ ಮತಗಳು 955 ಪುರುಷರು ಶೇ.75.63 ಮೇಲುಗೈ ಆಗಿದ್ದು ಮಹಿಳೆಯರು ಶೇ.72.35 ಸಾಧಿಸಿ ಮತದಾನ ಮಾಡಿದ್ದಾರೆ. ಒಟ್ಟಾರೆ ಶೇ.73.97ರಷ್ಟು ಮತದಾನವಾಗಿದೆ.
                        23ನೇ ವಾರ್ಡ್ ಹೆಚ್ಚುವರಿ ಮತಗಟ್ಟೆ ಸೇರಿದಂತೆ ಸಾಮಾನ್ಯ: ಪಿ.ಎಲ್.ನರಸಿಂಹಮೂರ್ತಿ (ಬಿಜೆಪಿ) ಜಿ.ಎ.ಮಂಜುನಾಥ್ (ಜೆಡಿಎಸ್) ಲಕ್ಷ್ಮೀನಾರಾಯಣ (ಕಾಂಗ್ರೆಸ್) ಶ್ರೀ ಹರಿಗಣೇಶ್ (ಬಿಎಸ್‍ಪಿ) ಯಿಂದ ಸ್ಪರ್ಧಿಸಿ ಚುನಾವಣಾ ಕಣದಲ್ಲಿದ್ದಾರೆ. ಒಟ್ಟು ಮತಗಳು 1539 ಚಲಾವಣೆಯಾದ ಮತಗಳು 1176 ಮಹಿಳೆಯರು 76.97 ಮೇಲುಗೈ ಸಾಧಿಸಿ ಪುರುಷರು ಶೇ.75.59ರಷ್ಟು ಮತದಾನ ಮಾಡಿದ್ದಾರೆ. ಒಟ್ಟಾರೆ ಶೇ.76.26ರಷ್ಟು ಮತದಾನವಾಗಿದೆ.
ಪಟ್ಟಣದ 14 ನೇ ವಾರ್ಡಿಗೆ ಸೇರಿದ ಪ್ರಥಮ ದರ್ಜೆ ಕಾಲೇಜಿನ ಮತಗಟ್ಟೆಯಲ್ಲಿ ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾದ ಕೆ.ಎನ್ ರಾಜಣ್ಣ ಮತ್ತು ಕುಟುಂಬದವರು ಮತ ಚಲಾಯಿಸಿದರೆ, 15 ನೇ ವಾರ್ಡಿನ ಸರಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಮತಗಟ್ಟೆಯಲ್ಲಿ ಕ್ಷೇತ್ರದ ಹಾಲಿ ಶಾಸಕ ಎಂ.ವಿ.ವೀರಭದ್ರಯ್ಯ ತಮ್ಮ ಮಗನ ಜತೆ ಮತ ಚಲಾಯಿಸಿ ಸ್ಥಳೀಯ ಚುನಾವಣೆಯಲ್ಲಿ ಭಾಗವಹಿಸಿ ಮತದಾರರಿಗೆ ಹುರುಪು ತುಂಬಿದರು.

Recent Articles

spot_img

Related Stories

Share via
Copy link