ತುಮಕೂರು:
ಕೋಮುವಾದಿ,ಸಂವಿಧಾನ ವಿರೋಧಿ ಬಿಜೆಪಿಯೂ ಈ ಹಿಂದೆ ಅಬ್ಬರದಿಂದ ದೇಶದ ಅನ್ಯಾಯಗಳನ್ನು ತಡೆದು ದೇಶವನ್ನು ಬಿಲಿಷ್ಟ ದೇಶವನ್ನಾಗಿ ಮಾಡುತ್ತೇವೆ ಎಂದು ದೇಶದ ಜನತೆಗೆ ಹೇಳಿದ್ದು,2019ರ ಲೋಕಸಭಾ ಚುನಾವಣೆ ಬಂದರು ಯಾವುದೇ ಅಭಿವೃದ್ಧಿ ಇಲ್ಲ ಎಂದು ಕಾರ್ಮಿಕ ಘಟಕದ ರಾಜ್ಯ ಉಪಾಧ್ಯಕ್ಷರು ಡಾ.ಇಂತಿಯಾಜ್ ಅಹಮದ್ ಆರೋಪಿಸಿದರು.
ನಗರದಲ್ಲಿ ಏರ್ಪಡಿಸಿದ್ದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು,ಜಿಲ್ಲೆಯ ಜನತೆ ಎಚ್ಚೇತ್ತುಕೊಳ್ಳಬೇಕಿದೆ.ಈ ಹಿಂದೆ ಬಿಜೆಪಿ ಪಕ್ಷದ ಪ್ರಧಾನಿ ನರೇಂದ್ರ ಮೋದಿಯವರು ನಮ್ಮ ದೇಶದಲ್ಲಿರುವ ಭ್ರಷ್ಟಚಾರಗಳನ್ನು ಕಂಡು ಹಿಡಿದು ಶಿಕ್ಷಿಸಿ,ದೇಶವನ್ನು ಬಲಿಷ್ಟದೇಶವನ್ನಾಗಿ ಮಾಡುತ್ತೇನೆ ಎಂದು 2014 ಲೋಕಸಭಾ ಚುನಾಚಣೆಯ ಸಂದರ್ಭದಲ್ಲಿ ಹೇಳಿದ್ದರು.ಇದುವರೆವಿಗೂ ಯಾವುದೇ ಬದಲಾವಣೆ ಇಲ್ಲ ಎಂದರು.
ದೇಶದ 130 ಕೋಟಿ ಜನರಿಗೂ ಹಂಚಿದರೆ ಪ್ರತಿಯೋಬ್ಬ ನಾಗರೀಕನ ಖಾತಗೆ ತಲಾ 15 ಲಕ್ಷ ರೂ.ಗಳಂತೆ ಹಂಚುವಷ್ಟು ಕಪ್ಪು ಹಣ ಸ್ವಿಸ್ ಬ್ಯಾಂಕಲ್ಲಿದೆ.ನಾನು ಪ್ರಧಾನಿಯಾದರೆ ಕಪ್ಪು ಹಣವನ್ನು ನಮ್ಮ ದೇಶಕ್ಕೆ ತರುತ್ತೇನೆ ಎಂದು ಹೇಳಿದ್ದರು.ಆದರೆ 2019ನೇ ಲೋಕಸಭಾ ಚುನಾಚಣೆ ಬಂದರೂ ಕಪ್ಪು ಹಣ ತಂದಿಲ್ಲ.ದೇಶದವನ್ನು ಅಭಿವೃದ್ಧಿ ಮಾಡಿಲ್ಲ.ಹಾಗಾಗಿ ದೇಶದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರಧಾನಿ ಮಾಡುವ ಉದ್ದೇಶದಿಂದ ಜಿಲ್ಲೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಗೆ ಮತದಾರರು ಮತಗಳನ್ನು ಹಾಕಬೇಕು ಎಂದು ಕರೆ ನೀಡಿದರು.
ಕಾರ್ಮಿಕ ಘಟಕದ ಜಿಲ್ಲಾ ಅಧ್ಯಕ್ಷ ಜ್ಞಾನಚಂದ್ರ ಮಾತನಾಡಿ,ಕಳೆದ 70 ವರ್ಷಗಳಿಂದ ದೇಶದಲ್ಲಿ ಯಾವ ಪ್ರಗತಿಯೂ ಆಗಿಲ್ಲವೆಂದು ನಿದ್ರೆಯಲ್ಲಿಯೂ ಜಪಿಸುತ್ತಿರುವವರಂತೆ ವರ್ತಿಸುತ್ತಿರುವ ಮೋದಿಜಿಯವರು ಜಗತ್ತೇ ಇಂದು ಭಾರತದ ಪ್ರಗತಿಯನ್ನು ಒಪ್ಪಿಕೊಂಡಿದೆ ಎಂದು ಸುಳ್ಳು ಹೇಳುತ್ತಿದ್ದಾರೆ.ಈ ದೇಶದಲ್ಲಿ ಸೈನಿಕರನ್ನು ರಾಜಕಾರಣಕ್ಕಾಗಿ ಯಾವ ಪ್ರಧಾನಿಗಳು ಬಳಸಿಕೊಳ್ಳದೆ ಇರುವ ಮೌನ ಹಾಗೂ ಮೌಲ್ಯಗಳಿಗೆ ಬೆಲೆಕಟ್ಟಿದ್ದಾರೆ ಇದು ದೇಶಕ್ಕೆ ಒಳಿತಲ್ಲ ಎಂದರು.
ದೇಶದಲ್ಲಿ ದಿನಬಳಕೆಯ ವಸ್ತುಗಳು,ಇಂಧನಗಳಾದ ಪೆಟ್ರೋಲ್,ಡೀಸೆಲ್ ದರಗಳನ್ನು ದಿನದಿಂದ ದಿನಕ್ಕೆ ಗಗನಮುಖಿಯಾಗಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ.ಇಲ್ಲಿ ಜನ ಸಾಮಾನ್ಯರು ಬದುಕು ಕಟ್ಟಿಕೊಳ್ಳುವುದು ಬಹಳ ಕಷ್ಟವಾಗಿದೆ.ವಿದ್ಯಾವಂತ ನಿರುದ್ಯೋಗಿಗಳ ಸಂಖ್ಯೆ ಹೆಚ್ಚುತ್ತಿದ್ದರೂ ಕೇಂದ್ರದ ಬಿಜೆಪಿ ಸರಕಾರ ಮೌನ ವಹಿಸಿರುವುದು ಯುವ ಉದ್ಯೋಗಿಗಳ ಕೆಂಗಣ್ಣಿಗೆ ಗುರಿಯಾಗಿದೆ.ಹಾಗಾಗಿ ಯುವ ಉದ್ಯೋಗಿಗಳಿಗೆ ಉದ್ಯೋಗದ ಭದ್ರತೆಯನ್ನು ಒದಗಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಕಾರ್ಮಿಕ ಘಟಕವು ಮೈತ್ರಿ ಅಭ್ಯರ್ಥಿ ಮಾಜಿ ಪ್ರಧಾನಿಗಳಾದ ಹೆಚ್.ಡಿ ದೇವೇಗೌಡರಿಗೆ ಬೆಂಬಲ ಸೂಚಿಸುತ್ತೇವೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಎಂ.ಎಲ್.ಸಿ ತಿಪ್ಪೇಸ್ವಾಮಿ,ಗೊಲ್ಲ ಜನಾಂಗದ ಮುಖಂಡ ಗಂಗಾಧರ್ ಇನ್ನು ಮುಂತಾದವರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
