ಶಿಗ್ಗಾವಿ :
ಶಿಗ್ಗಾವಿ ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಪಟ್ಟಣದ ಸಾಯಿ ನಗರದಲ್ಲಿ ವಿದ್ಯುತ್ ಶಾರ್ಟ ಸಕ್ರ್ಯೂಟ್ನಿಂದ ಹಲವಾರು ಮನೆಗಳಲ್ಲಿಯ ಟಿವಿ, ಪ್ರಿಜ್, ವಾಷಿಂಗ್ ಮಷಿನ್, ಮಿಕ್ಸ್ರ್ ಸೇರಿದಂತೆ ಮನೆಗಳಲ್ಲಿಯ ವಿದ್ಯುತ್ ಬೋರ್ಡಗಳು ಸುಟ್ಟು ಮನೆಗಳಲ್ಲಿಯ ಪೂರ್ಣ ಪ್ರಮಾಣದ ಒಳ ಕೇಬಲ್ಗಳು ಸುಟ್ಟು ಕರಲಾಗಿ ಲಕ್ಷಗಟ್ಟಲೆ ಹಾನಿ ಸಂಭವಿಸಿದೆ
ಕಳೆದ ಕೆಲ ದಿನಗಳ ಹಿಂದೆ ಘಟನೆ ನಡೆದಿತ್ತು ಈ ಕುರಿತು ಹೆಸ್ಕಾಂ ಅಧಿಕಾರಿಗಳಿಗೆ ಹಲವಾರು ಬಾರಿ ಟಿಸಿ ಬದಲಾಯಿಸುವಂತೆ ಸಾಯಿನಗರದ ನಿವಾಸಿಗಳು ಮನವಿ ಹಾಗೂ ಮೌಖಿಕವಾಗಿ ತಿಳಿಸುತ್ತ ಬಂದಿದ್ದರೂ ಅಧಿಕಾರಿಗಳು ಮಾತ್ರ ಎಚ್ಚೆತ್ತುಕೊಂಡಂತೆ ಕಾಣಲಿಲ್ಲ ಅದರ ಪರಿಣಾಮವಾಗಿ ಶುಕ್ರವಾರ ಸಾಯಿ ನಗರದಲ್ಲಿ ಘಟನೆ ಮರುಕಳಿಸಿದೆ.
ನಗರದ ಮನೆಗಳಲ್ಲಿದ್ದ ಜನರಿಗೆ ಸಾಯಿ ಬಾಬಾ ದೇವಸ್ಥಾನ ಪಕ್ಕದಲ್ಲಿಯೇ ಇರುವ ಟಿಸಿ ಯಿಂದ ದೊಡ್ಡ ಪ್ರಮಾಣದ ಶಬ್ದವಾಗಿದೆ ಕೂಡಲೇ ಹೊರಬಂದು ಅಕ್ಕಪಕ್ಕದಲ್ಲಿಯ ಮನೆಗಳನ್ನು ನೋಡುವಷ್ಟರಲ್ಲಿಯೇ ವಿದ್ಯುತ್ ಶಾರ್ಟ ಸಕ್ರ್ಯೂಟ್ನಿಂದ ಅವರವರ ಮನೆಗಳಲ್ಲಿ ವಿದ್ಯುತ್ ಬೋರ್ಡಗಳು ಸುಟ್ಟು ದಟ್ಟ ಹೊಗೆ ಆವರಿಸಿರುವುದನ್ನು ನೋಡಿ ಕೂಡಲೇ ಮನೆಯಿಂದ ಹೊರಬಂದ ಅಲ್ಲಿನ ನಿವಾಸಿಗಳು ಹೆಸ್ಕಾಂ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದಾರೆ
ನಂತರ ಸ್ಥಳಕ್ಕೆ ಆಗಮಿಸಿದ ತಾಲೂಕಾ ಎಇಇ ರಮೇಶ, ಘಟನೆಗೆ ನಿಖರ ಮಾಹಿತಿ ತಿಳಿಯುತ್ತಿಲ್ಲ ಆದರೆ ಪರೀಶಿಲಿಸಿ ನೋಡುತ್ತೇನೆ ಎಂದಾಗ ಸಾಯಿನಗರದ ನಿವಾಸಿಗಳು ಅಕ್ರೋಷಗೊಂಡು ಸ್ಥಳಕ್ಕೆ ಆಗಮಿಸಿದ ರಮೇಶ ಅವರನ್ನ ತರಾಟೆಗೆ ತೆಗೆದುಕೊಂಡು ಈಗಾಗಲೇ ಹಲವಾರು ಬಾರಿ ಕೆಇಬಿಯವರಿಗೆ ಟಿಸಿ ಬದಲಾಯಿಸುವಂತೆ ಮನವಿ ಮಾಡಿದ್ದೇವೆ
ಘಟನೆ ಇದೇ ಮೊದಲನೆ ಬಾರಿಯಲ್ಲ ಕಳೆದ ಕೆಲ ದಿನಗಳ ಹಿಂದೆ ಘಟನೆಯಾಗಿತ್ತು ಆದಾಗಲೂ ಎಚೆತ್ತುಕೊಳ್ಳದ ನಿಮ್ಮ ಅಧಿಕಾರಿಗಳು ಬೇಜವಾಬ್ದಾರಿಯಿಂದ ಮತ್ತೆ ಘಟನೆ ಸಂಭವಿಸಿದೆ ಇದು ನಿಮ್ಮ ಅಧಿಕಾರಿಗಳ ನಿರ್ಲಕ್ಷ್ಯದಿಂದ ಆಗಿರುವುದರಿಂದ ಸುಟ್ಟ ಸಾಮಗ್ರಿಗಳ ಹಾನಿಯ ವ್ಯಚ್ಚವನ್ನು ಕೆಇಬಿಯವರೇ ಭರಿಸಿಕೊಡಬೇಕೆಂದು ಪಟ್ಟು ಹಿಡಿದಾಗ ಎಇಇ ರಮೇಶ ಆಗಲಿ ಘಟನೆಗೆ ಕಾರಣವೇನೆಂದು ತಿಳಿದು ಹಾನಿಯಾದ ವರದಿಯನ್ನೂ ಸಹಿತ ಮೇಲಾಧಿಕಾರಿಗಳಿಗೆ ರವಾನಿಸಲಾಗುವುದು ಎಂದು ತಿಳಿಸಿದರು.
ಇದಕ್ಕೆ ಅಲ್ಲಿನ ನಿವಾಸಿಗಳು ಘಟನೆಗೆ ನಿಮ್ಮ ಹಾರಿಕೆ ಉತ್ತರಗಳು ಬೇಡ, ಈಗಾಗಲೇ ಮನವಿಗೆ ಸ್ಪಂದಿಸದ ನೀವುಗಳು ಸತ್ತ ಮೇಲೆ ಬುದ್ದಿ ಬಂತು ಎಂಬಂತೆ ಕಾಟಾಚಾರದ ಮಾತುಗಳನ್ನು ಹೇಳಿ ಕಾಲು ಕೀಳುವ ಕೆಲಸ ಮಾಡುತ್ತೀರಿ ಎಂದು ಅಸಮಾಧಾನವನ್ನು ಹೊರ ಹಾಕಿದರು.ಈ ಸಂದರ್ಭದಲ್ಲಿ ಹೆಸ್ಕಾಂ ಅಧಿಕಾರಿಗಳು ಹಾಗೂ ಸಾಯಿ ನಗರ ನಿವಾಸಿಗಳು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








