ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳು ಅಗತ್ಯ

ಚಿತ್ರದುರ್ಗ

     ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ, ಕೌಶಲ್ಯತೆ, ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಲು ಶಿಕ್ಷಣ ಜೊತೆಗೆ ಪಠ್ಯೇತರ ಚಟುವಟಿಕೆಗಳು ಅಗತ್ಯವಾಗಿದೆ ಎಂದು ಶಿವಮೊಗ್ಗದ ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕರಾದ ಪ್ರೊ. ಕೆ. ಪ್ರಸಾದ್ ತಿಳಿಸಿದರು.

         ಚಂದ್ರವಳ್ಳಿಯ ಎಸ್.ಜೆ.ಎಂ. ಪದವಿಕಾಲೇಜು ವತಿಯಿಂದ ಶನಿವಾರ ಜಯದೇವ ಸಭಾಂಗಣ ದಲ್ಲಿ ನಡೆದ ಕ್ರೀಡಾ, ಸಾಂಸ್ಕøತಿಕ, ಎನ್.ಎಸ್.ಎಸ್. ಹಾಗೂ ಎನ್.ಸಿಸಿ. ಹಾಗೂ ಮಹಿಳಾ ಸಬಲೀಕರಣ ಹಾಗೂ ವಿವಿಧ ಕೋಶಗಳ ಚಟುವಟಿಕೆಗಳ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ ಸದೃಢವಾದ ಸಮಾಜ ನಿರ್ಮಿಸುವಲ್ಲಿ ಯುವಶಕ್ತಿಯ ಪಾತ್ರ ಬಹಳ ಮುಖ್ಯವಾಗಿರುವುದರಿಂದ ಉತ್ತಮ ನಡತೆ, ಶಿಸ್ತು, ಶಿಕ್ಷಣ ಕೌಶಲ್ಯತೆ, ಜ್ಞಾನಾರ್ಜನೆ ಅಗತ್ಯವಾಗಿದೆ. ಹಲವರು ಅಹಿತಕರ ಘಟನೆಗಳಿಗೆ ಕಾರಣವಾಗಿ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗಿಲ್ಲ. ಪದವಿ ಶಿಕ್ಷಣ ಆಯ್ಕೆ ಮಾಡಿಕೊಂಡಿದ್ದು, ಉತ್ತಮ ಬೆಳವಣಿಗೆಯಾಗಿದೆ. ಮೊಬೈಲ್ ಹಾಗು ದುಶ್ಚಟಗಳಿಂದ ದೂರವಿದ್ದು ಶಿಕ್ಷಣ ಹಾಗೂ ಪಠ್ಯೇತರ ಚಟುವಟಿಕೆಗೆ ಆದ್ಯತೆ ನೀಡಿ ಜೀವನ ಸಾರ್ಥಕ ಮಾಡಿಕೊಳ್ಳಬೇಕು. ಉತ್ತಮ ಚಿಂತನೆ ಆಲೋಚನೆಗೆ ಆದ್ಯತೆ ನೀಡಿ ಸಮಾಜದಲ್ಲಿ ಉನ್ನತ ವ್ಯಕ್ತಿಗಳಾಗಿ ಬಾಳಬೇಕೆಂದು ತಿಳಿಸಿದರು.

         ಮುಖ್ಯ ಅತಿಥಿಗಳಾಗಿ ಆಗಮಿಸಿದ ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ . ಜಿ . ಎನ್ . ಮಲ್ಲಿಕಾರ್ಜುನಪ್ಪ ಮಾತನಾಡಿ ವಿದ್ಯಾರ್ಥಿಗಳು ಮೊಬೈಲ್ ಮತ್ತು ದುಶ್ಚಟಗಳಿಂದ ದೂರವಿದ್ದು, ಉತ್ತಮ ಪುಸ್ತಕಗಳನ್ನು ಓದುವ ಅಭ್ಯಾಸ ಮಾಡಿಕೊಳ್ಳಬೇಕು. ಶಿಕ್ಷಣಕ್ಕೆ ಆದ್ಯತೆ ನೀಡಿ ನಾಳಿನ ಬದುಕಿನ ಚಿಂತನೆ ಮಾಡಬೇಕು.

        ವೃತ್ತಿ ಕೌಶಲ್ಯತೆ ಆತ್ಮವಿಶ್ವಾಸ, ಕಲೆ ಕೌಶಲ್ಯ ಬೆಳೆಸಿಕೊಳ್ಳಬೇಕು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಹಾಗೂ ಜೀವನಕ್ಕೆ ಉದ್ಯೋಗದ ಭದ್ರತೆ ಮಾಡುವುದು ಶಿಕ್ಷಕರ ಜವಾಬ್ದಾರಿಯಾಗಿದೆ ಉಪಯೋಗವಿಲ್ಲದ ಶಿಕ್ಷಣ ಹಾಗೂ ಜೀವನದ ಭದ್ರತೆ ಇಲ್ಲದಿದ್ದರೇ ಹಲವು ದುಶ್ಚಟಗಳಿಗೆ ಕಾರಣವಾಗುತ್ತಾರೆ ಅವರಿಗೆ ಅವರಿಗೆ ಸಂಧೇಶಗಳು ತಿಳಿಸದರೇ ಉತ್ತಮ ವ್ಯಕ್ತಿಯಾಗುತ್ತಾನೆ ವೃತ್ತಿಕೌಶಲ್ಯ ಅತ್ಮವಿಶ್ವಾಸ ಉತ್ತಮ ಚಿಂತನೆ ನಾಳಿನ ಬದುಕಿನ ಬಗ್ಗೆ ಮಾರ್ಗದರ್ಶನ ನೀಡಬೇಕು ಜೀವನದಲ್ಲಿ ತಂದೆ ತಾಯಿ ಶ್ರಮ ಇರುತ್ತದೆ ಯೋಚಿಸಿ ಮುಂದಿನ ಹೆಜ್ಚೆ ಹಾಕಬೇಕು ದಾರಿ ಸುಗವಾಗಿದ್ದೆರೇ ಬದುಕು ಸುಂದರವಾಗಿರುತ್ತದೆ ಶಿಕ್ಷಣ ಮುಗಿದ ನಂತರ ಪ್ರತಿಯೊಬ್ಬರಿಗೂ ಉದ್ಯೋಗವಿದೆ ಅದರೇ ಕೌಶಲ್ಯತೆ ಬೆಳಸಿಕೊಂಡರೇ ಯಶಸ್ವಿ ಜೀವನ ಸಾದ್ಯ ನಿರುದ್ಯೋಗ ಎನ್ನುವುದು ಯಾವುದೇ ಕೆಲಸ ಮಾಡಲಾಗದೇ ಮನಸ್ಥಿತಿ ಕಾರಣ ನಮ್ಮಲ್ಲಿರುವ ಸನಾಲುಗಳನ್ನು ಅರಿತುಕೊಂಡು ಶಿಕ್ಷಕರು ಹಾಗೂ ಅರಿತುಕೊಂಡು ಕೆಲಸ ನಿರ್ವಹಿಸಿದರೇ ಸಾರ್ಥಕತೆಯಾಗುತ್ತದೆ ಎಂದು ತಿಳಿಸಿದರು.

        ಕಾರ್ಯಕ್ರಮದಲ್ಲಿ ಸರ್ಕಾರಿ ಕಲಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ. ಪಿ.ಎಸ್. ಗಂಗಾಧರ್ ಮಾತನಾಡಿ ವಿದ್ಯಾರ್ಥಿಗಳಲ್ಲಿ ಸಾಕಷ್ಟು ಪ್ರತಿಭೆಗಳಿವೆ. ಅವುಗಳನ್ನು ಆಯ್ಕೆ ಮಾಡಿಕೊಂಡು ಯಶಸ್ವಿಯಾಗಿ ಶ್ರಮಿಸಬೇಕು. ಶ್ರೀಮುರುಘಾಮಠ ಶಿಕ್ಷಣಕ್ಕೆ ಹಾಗೂ ಸಾಮಾಜಿಕ ಚಟುವಟಿಕೆಗಳಿಗೆ ಆದ್ಯತೆ ನೀಡಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

         ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಜೆ.ಎಂ. ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಕೆ.ಸಿ.ರಮೇಶ್ ರವರು ವಹಿಸಿದ್ದರು. ವೇದಿಕೆಯಲ್ಲಿ ನ್ಯಾಕ್ ಸಂಯೋಜಕರಾದ ಶ್ರೀ ಸಿ.ತಿಪ್ಪೇಸ್ವಾಮಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಕು. ಸ್ನೇಹಾ ಸ್ವಾಗತಿಸಿದರು ಕು. ಲತಾ ವಂದಿಸಿದರು. ವಿದ್ಯಾರ್ಥಿನಿಯರಾದ ಕು. ಜೆ. ಮಧು, ಭೂಮಿಕ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap