ಹಿರಿಯೂರಿನಲ್ಲಿ ಮಾಜಿ ಉಪಪ್ರಧಾನಿ ಬಾಬು ಜಗಜೀವನ್ ರಾಮ್ ಅವರ ಜನ್ಮದಿನ ಆಚರಣೆ ಕಾರ್ಯಕ್ರಮದಲ್ಲಿ ಡಿ.ಕೆ. ಶಿವಕುಮಾರ್ ಅವರ ಮಾತುಗಳು

      ಇಂದು ಪವಿತ್ರವಾದ ದಿನ. ನಾವೆಲ್ಲರೂ ಬಾಬು ಜಗಜೀವನ್ ರಾಮ್‌ಜಿ ಅವರ ಜನ್ಮದಿನದಂದು ಅವರನ್ನು ಸ್ಮರಿಸುತ್ತಿದ್ದೇವೆ. ಕಾಂಗ್ರೆಸ್ ಪಕ್ಷದ ಅಧ್ಯಕ್ಷರು, ದೇಶದ ಉಪಪ್ರಧಾನಿಗಳಾಗಿದ್ದ ಜಗಜೀವನ್ ರಾಮ್ ಅವರ ಜನ್ಮದಿನ ಕಾರ್ಯಕ್ರಮವನ್ನು ರಾಜ್ಯ ಕಾಂಗ್ರೆಸ್ ಕಾರ್ಯಕ್ರಮವಾಗಿ ಆಚರಿಸುತ್ತಿದ್ದೇವೆ. ನಮ್ಮ ಮಾಜಿ ಮಂತ್ರಿಗಳಾದ ಸುಧಾಕರ್ ಅವರು ನನ್ನ ಮನವಿ ಸ್ವೀಕರಿಸಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ.

ಜಗಜೀವನ್ ರಾಮ್ ಅವರು, 50 ವರ್ಷಗಳ ಕಾಲ ಲೋಕಸಭೆಗೆ ಸದಸ್ಯರಾಗಿ, 36 ವರ್ಷಗಳ ಕಾಲ ಮಂತ್ರಿಯಾಗಿದ್ದು, ಎಲ್ಲ ವರ್ಗಗಳಿಗೂ ಸೇವೆ ಮಾಡಿದ್ದಾರೆ. ಅತಿ ಹೆಚ್ಚು ಇಲಾಖೆಗಳ ಜವಾಬ್ದಾರಿ ವಹಿಸಿದ್ದವರು ಯಾರಾದರೂ ಇದ್ದಾರೆ ಅದು ಬಾಬು ಜಗಜೀವನ್ ರಾಮ್ ಅವರು.

 ಬಾಬಾ ಸಾಹೇಬ್ ಅಂತಾ ಯಾರಿಗಾದರೂ ಕರೆದಿದ್ದರೆ ಅದು ಕೇವಲ ಅಂಬೇಡ್ಕರ್ ಅವರಿಗೆ. ಬಾಬು ಎಂದು ಯಾರನ್ನಾದರೂ ಕರೆದಿದ್ದರೆ ಅದು ಕೇವಲ ಜಗಜೀವನ್ ರಾಮ್ ಅವರಿಗೆ ಮಾತ್ರ. ಪರಿಶಿಷ್ಟ ವರ್ಗಕ್ಕೆ ಸೇರಿದ ಈ ಇಬ್ಬರು ನಾಯಕರು ದೇಶಕ್ಕೆ ಅತಿದೊಡ್ಡ ಶಕ್ತಿಯಾಗಿ ನಮ್ಮೆಲ್ಲರಿಗೂ ಮಾರ್ಗದರ್ಶನ ಕೊಟ್ಟಿದ್ದಾರೆ.

ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಶೇ. 2.75 ರಷ್ಟು ಹೆಚ್ಚಳ ಸಿಎಂ ಬೊಮ್ಮಾಯಿ ಆದೇಶ

ಜಗಜೀವನ್ ರಾಮ್ ಅವರು ಕಾರ್ಮಿಕ ಇಲಾಖೆ ಜವಾಬ್ದಾರಿ ಹೊತ್ತಿದ್ದ ಸಂದರ್ಭದಲ್ಲಿ ಕಾರ್ಮಿಕರ ರಕ್ಷಣೆಗೆ, ರೈತರಿಗಾಗಿ ಮಾಡಿದ ಹಸಿರು ಕ್ರಾಂತಿ, ಸಾರಿಗೆ ಹಾಗೂ ರಕ್ಷಣಾ ಇಲಾಖೆಯಲ್ಲಿ ಅವರು ತೆಗೆದುಕೊಂಡ ನಿರ್ಧಾರಗಳು, ಶಾಸನಗಳು ದೇಶದ ದೊಡ್ಡ ಅಡಿಪಾಯ. ಕೈಗಾರಿಕೆ ಕಾರ್ಮಿಕರು ಮಾತ್ರವಲ್ಲದೇ ಕೃಷಿ ಕಾರ್ಮಿಕರನ್ನು ಒಳಗೊಂಡಂತೆ ಅವರ ಹಿತರಕ್ಷಣಗೆ ಕಾಯ್ದೆ ರಚಿಸಿದರು.

ಶ್ರೀಮತಿ ಸೋನಿಯಾಗಾಂಧಿ ಅವರು ಕಾಂಗ್ರೆಸ್ ಪಕ್ಷದ ಸದಸ್ಯತ್ವ ಅಭಿಯಾನಕ್ಕೆ 12 ವರ್ಷಗಳ ನಂತರ ಈ ಅವಕಾಶ ಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ಒಂದು ಘಟನೆ ಸ್ಮರಿಸಲು ಬಯಸುತ್ತೇನೆ. ಮಾಜಿ ಸಚಿವ ಆಂಜನೇಯ ಅವರು ಯೂಥ್ ಕಾಂಗ್ರೆಸ್ ರಾಜ್ಯಾಧ್ಯಕ್ಷರಾಗಿದ್ದಾಗ ನಾನು ಜಿಲ್ಲಾಧ್ಯಕ್ಷನಾಗಿ ಕೆಲಸ ಮಾಡಿದ್ದೆ. ರಾಜೀವ್ ಗಾಂಧಿ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ದೊಡ್ಡ ಸಮ್ಮೇಳನಕ್ಕಾಗಿ ನಾವು ದೆಹಲಿಗೆ ತೆರಳಿದ್ದೆವು.

“ಸೈದ್ಧಾಂತಿಕ ಸ್ಪಷ್ಟತೆ ಮತ್ತು ರಾಜಕೀಯ ಪರಿಣಾಮಕಾರಿತ್ವದ ಸ್ಥಿರ ಮತ್ತು ವಿಶ್ವಾಸಾರ್ಹ ಧ್ರುವ 42 ತುಂಬಿದ ಬಿಜೆಪಿ, ಬಲಿಷ್ಠವಾಗಿ ಮುನ್ನಡೆಯುತ್ತಿದೆ, ಎಸ್.ಎ. ಹೇಮಂತ್

ಆಗ ಅಲ್ಲಿ ಎಲ್ಲ ರಾಜ್ಯಗಳ ಪದಾಧಿಕಾರಿಗಳ ಭೇಟಿ ಮಾಡುವ ಸಂಪ್ರದಾಯವಿತ್ತು. ಸಮ್ಮೇಳನದ ಮರುದಿನ ನಮಗೆ ಭೇಟಿ ಮಾಡುವ ಅವಕಾಶ ಇತ್ತು. ನಾವು ಅವರ ಭೇಟಿಗೆ ಸರದಿ ಸಾಲಿನಲ್ಲಿ ನಿಂತಿದ್ದೆವು. ನಮ್ಮ ರಾಜ್ಯದ ಅವಕಾಶ ಬರುವ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಒಬ್ಬ ಹಿರಿಯರು ಅಲ್ಲಿಗೆ ಆಗಮಿಸಿದರು. ಆಗ ಅಲ್ಲಿ ಸಾಕಷ್ಟು ಗದ್ದಲಗಳಾದವು. ಆಗ ರಾಜೀವ್ ಗಾಂಧಿ ಅವರೇ ಒಳಗಿಂದ ಎದ್ದು ಬಂದು ಆ ಹಿರಿಯ ವ್ಯಕ್ತಿಯನ್ನು ಸ್ವಾಗತಿಸಿ ಒಳಗೆ ಕರೆದುಕೊಂಡು ಹೋದರು. ರಾಜೀವ್ ಗಾಂಧಿ ಅವರನ್ನು ಭೇಟಿ ಮಾಡಲು ಬಂದವರು ಬಾಬು ಜಗಜೀವನ್ ರಾಮ್ ಅವರಾಗಿದ್ದರು.

ಸುಮಾರು 20 ನಿಮಿಷಗಳ ಕಾಲ ಮಾತುಕತೆ ನಡೆಸಿ ಅವರು ಅಲ್ಲಿಂದ ಹೊರಟರು. ಆಗ ನಾವು ರಾಜೀವ್ ಗಾಂಧಿ ಅವರ ಬಳಿ ಯಾರು ಬಂದಿದ್ದರು ಎಂದು ಕೇಳಿದೆವು, ಆಗ ರಾಜೀವ್ ಗಾಂಧಿ ಅವರು ಈಗ ಬಂದಿದ್ದವರು ಬಾಬು ಜಗಜೀವನ್ ರಾಮ್ ಅವರು. ಅವರು ನಮ್ಮ ತಾತನ ಜತೆ ಮಂತ್ರಿಯಾಗಿದ್ದರು, ನಮ್ಮ ತಾಯಿ ಅವರ ಕಾಲದಲ್ಲಿ ಮಂತ್ರಿಯಾಗಿದ್ದರು. 50 ವರ್ಷಗಳ ಕಾಲ ಸಂಸತ್ ಸದಸ್ಯರಾಗಿದ್ದರು. ಅನೇಕ ಕ್ರಾಂತಿ ಮಾಡಿದ್ದಾರೆ.

ಎಲ್ಲ ಎಸ್ಸಿ-ಎಸ್ಟಿ ಸಮುದಾಯಗಳಿಗೆ ಮೊದಲ 75 ಯೂನಿಟ್ ವರೆಗೆ ಉಚಿತ ವಿದ್ಯುತ್ ಪೂರೈಕೆ: ಸಿಎಂ

ಅವರಿಗೂ ನಮ್ಮ ತಾಯಿಗೂ ಭಿನ್ನಾಭಿಪ್ರಾಯವಾದ ಕಾರಣ ಅವರು ಪಕ್ಷ ತೊರೆದಿದ್ದರು. ಆದರೆ ಈಗ ಅವರ ಮನಸಿಗೆ ಸಮಾಧಾನವಿಲ್ಲ. ಪಕ್ಷ ಬಿಟ್ಟಿರುವುದಕ್ಕೆ ನೊಂದಿದ್ದಾರೆ. ಹೀಗಾಗಿ ಅವರು ತಾವು ಸಾಯುವ ಮುನ್ನ ಕಾಂಗ್ರೆಸ್ ಪಕ್ಷಕ್ಕೆ ಸೇರಿ ಕಾಂಗ್ರೆಸಿಗನಾಗಿ ಸಾಯಬೇಕು ಎಂಬ ಇಂಗಿತ ವ್ಯಕ್ತಪಡಿಸಿರುವುದಾಗಿ ಹೇಳಿದರು.

ಇದು ಕಾಂಗ್ರೆಸ್ ಪಕ್ಷದ ಇತಿಹಾಸ. ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲ ವರ್ಗದ ಜನ ಅಧಿಕಾರಕ್ಕೆ ಬಂದಂತೆ. ಕೇವಲ ನಾನು, ಸಿದ್ದರಾಮಯ್ಯನವರು ಹಾಗೂ ವೇದಿಕೆ ಮೇಲಿರುವವರು ಮಾತ್ರವಲ್ಲ, ನೀವೆಲ್ಲರೂ ಅಧಿಕಾರಕ್ಕೆ ಬಂದಂತೆ. ಬಾಬು ಜಗಜೀವನ್ ರಾಮ್ ಅವರು ಕಾಂಗ್ರೆಸ್ ಅಧ್ಯಕ್ಷರಾಗಿದ್ದವರು. ನಂತರ ಅವರು ಮತ್ತೆ ಕಾಂಗ್ರೆಸ್ ಸೇರಿ ಭಾರತೀಯ ವಿದೇಶಾಂಗ ಸೇವೆ ಅಧಿಕಾರಿಯಾಗಿದ್ದ ಅವರ ಪುತ್ರಿ ಮೀರಾ ಕುಮಾರ್ ಅವರನ್ನು ರಾಜೀನಾಮೆ ಕೊಡಿಸಿ ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿದರು. ಅವರು ಲೋಕಸಭೆಯಲ್ಲಿ ಸ್ಪೀಕರ್ ಆಗಿದ್ದರು. ಇಂತಹ ಹಿರಿಯ ನಾಯಕರ ಜಯಂತಿಯನ್ನು ನಾವು ಹಿರಿಯೂರಿನಲ್ಲಿ ಮಾಡುತ್ತಿರುವುದು ಹೆಮ್ಮೆಯ ವಿಚಾರ.

ಜಗಜೀವನ್ ರಾಂ ಅವರದ್ದು ಅಪರೂಪದ ನಾಯಕತ್ವ ಹಾಗೂ ವ್ಯಕ್ತಿತ್ವ: ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ

ಸ್ನೇಹಿತರೆ, ದೇಶ ಈಗ ಕಷ್ಟದ ಪರಿಸ್ಥಿತಿಯಲ್ಲಿದೆ. ದೇಶವನ್ನು ಕೋಮು ಭಾವನೆಯಿಂದ ಒಡೆಯುತ್ತಿದ್ದಾರೆ. ದೇಶದ ಪ್ರಧಾನಿ ನಿಮ್ಮ ಆದಾಯ ಡಬಲ್ ಮಾಡುತ್ತೇವೆ ಎಂದರು. ನಿಮ್ಮ ಆದಾಯ ಡಬಲ್ ಆಯಿತಾ? ಕೇವಲ ದ್ವಿಚಕ್ರ ವಾಹನ ಇಟ್ಟುಕೊಂಡಿರುವವರಿಗೆ ತಿಂಗಳಿಗೆ 3 ಸಾವಿರ ರೂ.ನಷ್ಟು ವೆಚ್ಚ ಹೆಚ್ಚಾಗುತ್ತಿದೆ. ರೈತರು ಬೆಳೆದ ಬೆಲೆಗೆ ಆದಾಯ ಬಂದಿದೆಯಾ?

ರೈತರು ಬಳಸುವ ರಸಗೊಬ್ಬರ ಚೀಲಕ್ಕೆ 150 ರೂ. ಹೆಚ್ಚಿದೆ. ಪದವಿ ಪಡೆದವರಿಗೆ ನಿಮ್ಮ ಜಿಲ್ಲೆಯಲ್ಲಿ ಉದ್ಯೋಗ ಸಿಕ್ಕಿದೆಯಾ? ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ನಾನು ಇಂಧನ ಸಚಿವನಾಗಿದ್ದಾಗ ಪಾವಗಡದಲ್ಲಿ ವಿಶ್ವದ ಅಥಿದೊಡ್ಡ ಸೋಲಾರ್ ಪಾರ್ಕ್ ಮಾಡಿದ್ದೆವು. ಹೊಸದುರ್ಗ ಕ್ಷೇತ್ರದಲ್ಲಿ 15 ಸಾವಿರ ಪಂಪ್ ಸೆಟ್ ನೀಡಿದ ಸಾಧನೆ ಮಾಡಿದೆವು.

7 ಗಂಟೆಗಳ ಕಾಲ ವಿದ್ಯುತ್ ಕೊಟ್ಟೆವು. ಇಂದು ವಿದ್ಯುತ್ ಸೇರಿದಂತೆ ಎಲ್ಲ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ರೈತರ ಆದಾಯ ಕುಸಿಯುತ್ತಿದೆ. ಪ್ರತಿ ಹಂತದಲ್ಲೂ ಲಂಚ ತಾಂಡವವಾಡುತ್ತಿದೆ. ಗುತ್ತಿಗೆದಾರರು 40% ಲಂಚದ ಬಗ್ಗೆ ದೂರು ನೀಡಿದ್ದಾರೆ. ಗಂಗ ಕಲ್ಯಾಣ ಯೋಜನೆಯನ್ನು ಸಮಾಜ ಕಲ್ಯಾಣ ಇಲಾಖೆಯಲ್ಲಿ ಡಬಲ್ ವೆಚ್ಚ ಹಾಕಿದ್ದಾರೆ.

IPL 2022: ರಾಜಸ್ಥಾನ್ ಗೆಲುವಿನ ಓಟಕ್ಕೆ ಬ್ರೇಕ್ ಹಾಕಲು ಮಾಸ್ಟರ್ ಪ್ಲಾನ್ ಮಾಡಿದ ಆರ್​ಸಿಬಿ

ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ. ನಾವೀಗ ಸದಸ್ಯತ್ವ ಮಾಡುತ್ತಿದ್ದು, ರಾಜ್ಯಾದ್ಯಂತ 63 ಲಕ್ಷ ಜನ ಕಾಂಗ್ರೆಸ್ ಸದಸ್ಯರಾಗಿದ್ದಾರೆ. ನಿಮ್ಮ ಜಿಲ್ಲೆಯಲ್ಲಿ ಹಿರಿಯೂರುನಲ್ಲಿ 76 ಸಾವಿರ, ಚಳ್ಳಕೆರೆಯಲ್ಲಿ 72 ಸಾವಿರ ಸದಸ್ಯರಾಗಿದ್ದಾರೆ. ಇಡೀ ಜಿಲ್ಲೆಯಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಈ ಅಭಿಯಾನದಲ್ಲಿ ಯಾರೆಲ್ಲ ಮನೆ ಮನೆಗೆ ಹೋಗಿ ಕಾಂಗ್ರೆಸ್ ಸದಸ್ಯತ್ವ ಮಾಡಿದ್ದೀರೋ ಅವರೆಲ್ಲರಿಗೂ ನಾನು ಸಾಷ್ಟಾಂಗ ನಮನ ಸಲ್ಲಿಸುತ್ತೇನೆ. ರಾಹುಲ್ ಗಾಂಧಿ ಅವರು ಬಂದು ಎಲ್ಲ ನೋಂದಣಿದಾರರ ಜತೆ ಮಾತನಾಡಿದರು.

ಈ ಸರ್ಕಾರ ಯಾವ ವರ್ಗಕ್ಕೂ ನೆರವು ನೀಡಿಲ್ಲ. ರಾಜ್ಯದ ಹಳ್ಳಿ ಹಳ್ಳಿಗೂ ಪ್ರವಾಸ ಮಾಡಿ ನಿಮ್ಮ ನೋವು ನಿಮ್ಮ ಮುಂದೆ ಇಟ್ಟು, ರೈತರು, ಕಾರ್ಮಿಕರು, ದೀನ ದಲಿತರು ಸೇರಿದಂತೆ ಎಲ್ಲ ವರ್ಗದವರ ಧ್ವನಿಯಾಗುತ್ತೇವೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ, ಆಂಜನೇಯ ಅವರು ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿದ್ದ ಸಮಯದಲ್ಲಿ ಪರಿಶಿಷ್ಟ ಜಾತಿ, ವರ್ಗದವರಿಗೆ ಅವರ ಜನಸಂಖ್ಯೆ ಆಧಾರದ ಮೇಲೆ ಅವರಿಗೆ ಬಜೆಟ್ ನಲ್ಲಿ ಅನುದಾನ ನೀಡಿದ್ದರೆ ಅದು ದೇಶದಲ್ಲಿ ಕರ್ನಾಟಕ ರಾಜ್ಯ ಮಾತ್ರವಾಗಿದೆ. ಒಂದು ವರ್ಷಕ್ಕೆ 28 ಸಾವಿರ ಕೋಟಿ ಮೀಸಲಿಟ್ಟಿದ್ದು ಕಾಂಗ್ರೆಸ್ ಪಕ್ಷ ಮಾತ್ರ.

ಆಯಂಕರ್ ಅನುಶ್ರೀ ತಂದೆ ವಿಚಾರ ಮಾಧ್ಯಮದವರಿಗೆ ನೀಡಿದ್ದಕ್ಕೆ ಬೇಸರ..!

ಬೊಮ್ಮಾಯಿ ಅವರೇ ನಿಮಗೆ ರೈತರು, ಹಿಂದುಳಿದವರಿಗೆ ಸಹಾಯ ಮಾಡಲು ಆಗುತ್ತಿಲ್ಲ. ಭತ್ತ, ರಾಗಿ, ಜೋಳಕ್ಕೆ ಬೆಲೆ ಇಲ್ಲ. ಗೊಬ್ಬರ, ಡೀಸೆಲ್ ಬೆಲೆ ಹೆಚ್ಚಾಗಿದೆ. ಜನರೆಲ್ಲ ಸೇರಿ ಮುಂದಿನ ಚುನಾವಣೆಯಲ್ಲಿ ಈ ಸರ್ಕಾರವನ್ನು ಕಿತ್ತೊಗೆಯಬೇಕು.’

       ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap