“ಸೈದ್ಧಾಂತಿಕ ಸ್ಪಷ್ಟತೆ ಮತ್ತು ರಾಜಕೀಯ ಪರಿಣಾಮಕಾರಿತ್ವದ ಸ್ಥಿರ ಮತ್ತು ವಿಶ್ವಾಸಾರ್ಹ ಧ್ರುವ 42 ತುಂಬಿದ ಬಿಜೆಪಿ, ಬಲಿಷ್ಠವಾಗಿ ಮುನ್ನಡೆಯುತ್ತಿದೆ, ಎಸ್.ಎ. ಹೇಮಂತ್


      (ಲೇಖಕರು ಆಗಸ್ಟ್ 1980ರಿಂದ ಬಿಜೆಪಿಯೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ)

ಭಾರತೀಯ ರಾಜಕಾರಣಕ್ಕೆ, ಮಿಗಿಲಾಗಿ ಪ್ರತಿಪಕ್ಷದ ಸ್ಥಾನಕ್ಕೆ ದೇಶಭಕ್ತಿ, ರಾಷ್ಟ್ರೀಯತೆ ಮತ್ತು ವಿಶ್ವಾಸಾರ್ಹತೆಯ ಅಂಶವನ್ನು ಸೇರಿಸಿದ್ದು ಬಿಜೆಪಿಯ ಅತಿದೊಡ್ಡ ಕೊಡುಗೆಯಾಗಿದೆ.ಅಟಲ್ ಬಿಹಾರಿ ವಾಜಪೇಯಿ ಅವರು 1980ರ ಏಪ್ರಿಲ್ 6ರ ಪವಿತ್ರ (ಈಸ್ಟರ್) ಭಾನುವಾರದಂದು ದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ಭಾರತೀಯ ಜನತಾ ಪಾರ್ಟಿ ಸ್ಥಾಪನೆಯನ್ನು ವಿಧ್ಯುಕ್ತವಾಗಿ ಘೋಷಿಸಿದರು.

ಅದಕ್ಕೆ ಎರಡು ದಿನಗಳ ಮುನ್ನ, ಅಂದರೆ ಮಾರ್ಚ್ 4ರ, ಶುಭ ಶುಕ್ರವಾರ, ಜನತಾ ಪಕ್ಷದ ಜನಸಂಘಯೇತರ ಸದಸ್ಯರಿಗೆ ಆರ್.ಎಸ್.ಎಸ್.ನೊಂದಿಗಿನ ತಮ್ಮ ನಂಟನ್ನು ಮುಂದುವರಿಸಲು ಬಯಸುತ್ತೀರೋ ಇಲ್ಲವೋ ಎಂಬುದನ್ನು ನಿರ್ಧರಿಸಲು ಅಂತಿಮ ಗಡುವು ನೀಡಿದರು. ಮೂಲಭೂತವಾಗಿ ಇದೊಂದು ವಿಷಯವೇ ಆಗಿರಲಿಲ್ಲ, ಆದರೂ ಜನತಾ ಪಕ್ಷದೊಳಗಿನ ಕೆಲವು ಶಕ್ತಿಗಳು ಅದನ್ನು ಒಂದು ದೊಡ್ಡ ವಿಷಯವನ್ನಾಗಿ ಮಾಡಿದವು.

ಎಲ್ಲ ಎಸ್ಸಿ-ಎಸ್ಟಿ ಸಮುದಾಯಗಳಿಗೆ ಮೊದಲ 75 ಯೂನಿಟ್ ವರೆಗೆ ಉಚಿತ ವಿದ್ಯುತ್ ಪೂರೈಕೆ: ಸಿಎಂ

ಜನತಾ ಪಕ್ಷದಲ್ಲಿದ್ದ ಜನಸಂಘದ ಸದಸ್ಯರು ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ಸಭೆ ಸೇರಿ ತಮ್ಮ ಸೈದ್ಧಾಂತಿಕ ಮಾರ್ಗದರ್ಶಕ ಆರ್.ಎಸ್.ಎಸ್.ನೊಂದಿಗಿನ ತಮ್ಮ ಸಂಬಂಧವನ್ನು ಕಡಿದುಕೊಳ್ಳುವುದಿಲ್ಲ ಎಂದು ಘೋಷಿಸಿದರು ಮತ್ತು ಬದಲಿಗೆ ಜನಸಂಘದ ಮರು ಹುಟ್ಟನ್ನು ಹೊಸ ಅವತಾರದಲ್ಲಿ ಘೋಷಿಸಿದರು. ಅಂದು ಅಟಲ್ ಬಿಹಾರಿ ವಾಜಪೇಯಿ ಅವರು “ಇಂದು, ಭಾರತೀಯ ಜನಸಂಘವು, ಭಾರತೀಯ ಜನತಾ ಪಾರ್ಟಿಯಾಗಿ ಪುನರ್ಜನ್ಮತಾಳಿದ್ದು, ರಾಷ್ಟ್ರದ ಪುನರ್ ನಿರ್ಮಾಣಕ್ಕಾಗಿ ನಾವು ಅದೇ ಉತ್ಸಾಹ ಮತ್ತು ಧ್ಯೇಯದೊಂದಿಗೆ ಶ್ರಮಿಸುವುದನ್ನು ಮುಂದುವರಿಸುತ್ತೇವೆ” ಎಂದು ಘೋಷಿಸಿದರು.

ತಾತ್ವಿಕವಾಗಿ ಹೇಳುವುದಾದರೆ, ಶುಭ ಶುಕ್ರವಾರದಂದು, ಯೇಸು ಕ್ರಿಸ್ತನನ್ನು ಶಿಲುಬೆಗೇರಿಸಲಾಯಿತು; ಅದೇ ರೀತಿ ಭಾರತೀಯ ಜನಸಂಘವನ್ನೂ ಶಿಲುಬೆಗೇರಿಸಲಾಯಿತು. ಈಸ್ಟರ್ ಭಾನುವಾರದಂದು, ಯೇಸು ಕ್ರಿಸ್ತನು ಪುನರ್ಜನ್ಮ ಪಡೆದನೆಂದು ನಂಬಲಾಗಿದೆ; ಅದೇ ರೀತಿ, ಭಾರತೀಯ ಜನಸಂಘವು ಈಸ್ಟರ್ ಭಾನುವಾರದಂದು ಭಾರತೀಯ ಜನತಾ ಪಾರ್ಟಿಯಾಗಿ ಮರುಹುಟ್ಟು ಪಡೆಯಿತು.

ಜಗಜೀವನ್ ರಾಂ ಅವರದ್ದು ಅಪರೂಪದ ನಾಯಕತ್ವ ಹಾಗೂ ವ್ಯಕ್ತಿತ್ವ: ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ

ಹೀಗೆ ವ್ಯಾಖ್ಯಾನಿಸಿದವರು ಬೇರೆ ಯಾರೂ ಅಲ್ಲ, ಬಿಜೆಪಿಯ ಮೇರು ನಾಯಕ ಲಾಲ್ ಕೃಷ್ಣ ಆಡ್ವಾಣಿ. ಅವರು ಜ್ಞಾನದ ಮೂರ್ತರೂಪವಾಗಿ ಮತ್ತು ಅನುಭವದ ಸಾಕಾರಮೂರ್ತಿಯಾಗಿ ಇಂದಿಗೂ ಮಾರ್ಗದರ್ಶನ ಮಾಡುತ್ತಿದ್ದಾರೆ. ಪ್ರಾಯಶಃ, ಕರಾಚಿಯ ಸೇಂಟ್ ಪ್ಯಾಟ್ರಿಕ್ಸ್ ಶಾಲೆಯಲ್ಲಿ ಅವರು ವಿದ್ಯಾಭ್ಯಾಸ ಮಾಡಿದ್ದರಿಂದಲೇ, ಯೇಸುಕ್ರಿಸ್ತನ ಈ ಸಾದೃಶ್ಯವನ್ನು ನೀಡಲು ಅವರಿಗೆ ಸಹಾಯಮಾಡಿರಬಹುದು.

ವಾಜಪೇಯಿ ಮತ್ತು ಆಡ್ವಾಣಿ ಇಬ್ಬರೂ ಭಾರತದ ಉದ್ದಗಲ ಪ್ರವಾಸ ಮಾಡಿ, ಕಾರ್ಯಕರ್ತರನ್ನು ಪ್ರೇರೇಪಿಸಿದರು.
ಯಾವುದೇ ಕಾರಣಕ್ಕೂ ತನ್ನ ಅಸ್ಮಿತೆಯನ್ನು ಕಳೆದುಕೊಳ್ಳುವುದಿಲ್ಲ ಎಂದು ಬಿಜೆಪಿ ಸ್ಪಷ್ಟಪಡಿಸಿತು. ಆದರೆ ವಿರೋಧ ಪಕ್ಷಗಳ ಮತಗಳು ವಿಭಜನೆಯಾಗುವುದನ್ನು ತಪ್ಪಿಸಲು ಸಮಾನ ಮನಸ್ಕ ಪಕ್ಷಗಳೊಂದಿಗೆ ಚುನಾವಣಾ ಮೈತ್ರಿಗೆ ಬಿಜೆಪಿ ಮುಕ್ತವಾಗಿತ್ತು.

IPL 2022: ರಾಜಸ್ಥಾನ್ ಗೆಲುವಿನ ಓಟಕ್ಕೆ ಬ್ರೇಕ್ ಹಾಕಲು ಮಾಸ್ಟರ್ ಪ್ಲಾನ್ ಮಾಡಿದ ಆರ್​ಸಿಬಿ

ಆಡ್ವಾಣಿಯವರ ಗಮನ ಪಕ್ಷದ ನಾಯಕರು ಮತ್ತು ಕಾರ್ಯಕರ್ತರ ಅನುಕರಣೀಯ ನಡವಳಿಕೆ ಮತ್ತು ಘನತೆಯ ಮೇಲೆ ಕೇಂದ್ರೀಕೃತವಾಗಿತ್ತು. “ನಾಯಕರು ಸಾರ್ವಜನಿಕವಾಗಿ ಜಗಳವಾಡಿದ್ದರಿಂದ ಜನತಾ ಪಕ್ಷವು ಜನರ ವಿಶ್ವಾಸವನ್ನು ಕಳೆದುಕೊಂಡಿತು. ಇದು ಜನತಾ ಪಕ್ಷದ ವಿಶ್ವಾಸಾರ್ಹತೆಯನ್ನು ಹಾಳುಮಾಡಿತು; ಅದರ ವರ್ಚಸ್ಸನ್ನು ಛಿದ್ರಗೊಳಿಸಿತು ಮತ್ತು ಅದರ ಖ್ಯಾತಿಯನ್ನು ನಾಶಮಾಡಿತು. ಬಿಜೆಪಿಯಲ್ಲಿ ಇದು ಪುನರಾವರ್ತನೆಯಾಗಲು ನಾವು ಅವಕಾಶ ನೀಡಬಾರದು.

ಆದ್ದರಿಂದ, ಸಾರ್ವಜನಿಕ ಮತ್ತು ಖಾಸಗಿಯಾಗಿ ಎರಡೂ ಕಡೆ ನಮ್ಮ ನಡವಳಿಕೆಯು ಅನುಕರಣೀಯವಾಗಿರಬೇಕು ಮತ್ತು ನಡವಳಿಕೆ ಆದರ್ಶಪ್ರಾಯವಾಗಿ, ಘನತೆಯಿಂದ ಕೂಡಿರಬೇಕು.” ಎಂದು ಪ್ರತಿಪಾದಿಸಿದ್ದರು. ಆಡ್ವಾಣಿಯವರು ತಮ್ಮ ಎಲ್ಲಾ ಭಾಷಣಗಳಲ್ಲಿ,ಅದರಲ್ಲೂ ವಿಶೇಷವಾಗಿ ಕಾರ್ಯಕರ್ತರ ಸಭೆಗಳಲ್ಲಿ ಇದನ್ನು ಒತ್ತಿ ಹೇಳುತ್ತಿದ್ದರು.

ಆಯಂಕರ್ ಅನುಶ್ರೀ ತಂದೆ ವಿಚಾರ ಮಾಧ್ಯಮದವರಿಗೆ ನೀಡಿದ್ದಕ್ಕೆ ಬೇಸರ..!

1980ರ ಡಿಸೆಂಬರ್ ನಲ್ಲಿ ಬಾಂಬೆಯಲ್ಲಿ (ಈಗಿನ ಮುಂಬಯಿ) ನಡೆದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ದೇಶದ ಮಹಾನ್ ವ್ಯಕ್ತಿ ಹಿರಿಯರಾಗಿದ್ದ ಮುಹಮ್ಮದ್ ಕರಿಂಭಾಯಿ ಚಗ್ಲಾ ಅವರು ಶ್ರೀಮತಿ ಇಂದಿರಾ ಗಾಂಧಿಯವರ ಕಾಂಗ್ರೆಸ್ಸಿಗೆ “ತಕ್ಕ ಪ್ರತ್ಯುತ್ತರ ನೀಡಬಲ್ಲ ಮತ್ತು ವಿಶ್ವಾಸಾರ್ಹ” ಪರ್ಯಾಯವಾಗಿ ಬಿಜೆಪಿಗೆ ಬಂದಿದೆ ಎಂದು ಹೆಮ್ಮೆಯಿಂದ ಘೋಷಿಸಿದರು. ಇದು ಭವಿಷ್ಯದ ಪಕ್ಷ” ಎಂದೂ ಸಾರಿದರು.

1982 ರಲ್ಲಿ, ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರದ ಸನಿಹಕ್ಕೆ ಬಂದಿತು, ಬಹುಮತಕ್ಕೆ ಕೇವಲ ಮೂರು ಸ್ಥಾನ ಮಾತ್ರ ಕಡಿಮೆ ಇತ್ತು; ಥಾಣೆ ಮತ್ತು ಸಾಗರ್ (ಎಂಪಿ) ಲೋಕಸಭೆ ಉಪಚುನಾವಣೆಗಳಲ್ಲಿ ಬಿಜೆಪಿ ಭಾರೀ ಅಂತರದಿಂದ ಗೆದ್ದಿತ್ತು.
1983ರ ವಿಧಾನಸಭಾ ಚುನಾವಣೆಯಲ್ಲಿ, ಕರ್ನಾಟಕದಲ್ಲಿ ಬಿಜೆಪಿ 18 ಸ್ಥಾನಗಳನ್ನು ಗೆದ್ದುಕೊಂಡಿತು ಮತ್ತು ಆರ್. ಗುಂಡೂರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಪದಚ್ಯುತಗೊಳಿಸಲು ತನ್ನದೇ ಆದ ರೀತಿಯಲ್ಲಿ ಕೊಡುಗೆ ನೀಡಿತು. ಆಂಧ್ರಪ್ರದೇಶದಲ್ಲಿ, ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯಲು ಬಿಜೆಪಿ ತನ್ನ ಶಕ್ತಿಯನ್ನು ನೀಡಿತು ಮತ್ತು ಎನ್.ಟಿ.ಆರ್ ನೇತೃತ್ವದ ಟಿಡಿಪಿ ಸರ್ಕಾರವನ್ನು ಸ್ಥಾಪಿಸಲು ಸಹಾಯ ಮಾಡಿತು.

ಆಜಾನ್‌ ವೇಳೆ ಮೈಕ್ ಬಳಕೆ: ಹೊಸ ಆದೇಶ ಹೊರಡಿಸಿಲ್ಲ ಎಂದ ಸಿಎಂ

ಹೀಗಾಗಿ ಇಡೀ ದೇಶದಲ್ಲಿ ಉತ್ಸಾಹ, ಸ್ಫೂರ್ತಿ ಮತ್ತು ಆಶಾಭಾವನೆ ಮೂಡಿತು, ಶ್ರೀಮತಿ ಇಂದಿರಾ ಗಾಂಧಿಯವರನ್ನು ಸೋಲಿಸುವ ಮೂಲಕ ಬಿಜೆಪಿ ಕೇಂದ್ರದಲ್ಲಿ ಕಾಂಗ್ರೆಸ್ ಅನ್ನು ಕಿತ್ತೊಗೆಯುತ್ತದೆ ಎಂಬ ಭರವಸೆ ಜನರಲ್ಲಿತ್ತು.ಆದಾಗ್ಯೂ, 1984ರ ಅಕ್ಟೋಬರ್ ನಲ್ಲಿ ಶ್ರೀಮತಿ ಇಂದಿರಾ ಗಾಂಧಿಯವರನ್ನು ಅವರ ಭದ್ರತಾ ಸಿಬ್ಬಂದಿಯೇ ಭೀಕರವಾಗಿ ಹತ್ಯೆ ಮಾಡಿದ್ದು ಇಡೀ ರಾಜಕೀಯ ಚಿತ್ರಣವನ್ನೇ ತೀವ್ರವಾಗಿ ಬದಲಾಯಿಸಿತು.

ಆ ದುರಂತದಿಂದ ಉಂಟಾದ ಅನುಕಂಪದ ಅಲೆಯ ಮೇಲೆ ಕಾಂಗ್ರೆಸ್ ಸವಾರಿ ಮಾಡಿತು ಮತ್ತು ಲೋಕಸಭಾ ಚುನಾವಣೆಯಲ್ಲಿ 416 ಸ್ಥಾನಗಳನ್ನು ಗೆದ್ದಿತು. ಗುಜರಾತ್ ನ ಮೆಹ್ಸಾನಾ (ಡಾ. ಎ. ಕೆ. ಪಟೇಲ್) ಮತ್ತು ಆಂಧ್ರಪ್ರದೇಶದ ಹನಮಕೊಂಡ (ಜಂಗ ರೆಡ್ಡಿ) ಎರಡು ಸ್ಥಾನಗಳನ್ನು ಮಾತ್ರ ಗೆಲ್ಲುವ ಮೂಲಕ ಬಿಜೆಪಿ ಭಾರಿ ಹಿನ್ನಡೆ ಅನುಭವಿಸಿತು. ಗ್ವಾಲಿಯರ್ ನಲ್ಲಿ ಸ್ವತಃ ವಾಜಪೇಯಿ ಅವರೇ ಸೋಲನುಭವಿಸಿದರು. ದೇಶಾದ್ಯಂತ ಇಡೀ ಕಾರ್ಯಕರ್ತರ ಆತ್ಮಸ್ಥೈರ್ಯ ಕುಗ್ಗಿಹೋಯಿತು.

ಬಿಎ, ಬಿಕಾಂಗೂ ಎಂಟ್ರೆನ್ಸ್ ಎಕ್ಸಾಂ: ಪಿಯು ಅಂಕವಿನ್ನು ಲೆಕ್ಕಕ್ಕಿಲ್ಲ; ಪದವಿ ಪ್ರವೇಶಕ್ಕೆ ರಾಷ್ಟ್ರೀಯ ಪರೀಕ್ಷೆ

ಆದರೆ ವಾಜಪೇಯಿ ಮತ್ತು ಆಡ್ವಾಣಿ ಇಬ್ಬರೂ “ಎಂದಿಗೂ ಧ್ರುತಿಗೆಡಬೇಡಿ” ಎಂಬ ಮನೋಭಾವದಿಂದ, ಕಾರ್ಯಕರ್ತರ ನೈತಿಕ ಸ್ಥೈರ್ಯವನ್ನು ಹೆಚ್ಚಿಸುವ ಕೆಲಸವನ್ನು ಮಾಡಿದರು. ಅವರು ದೇಶ ಪರ್ಯಟನೆ ಮಾಡಿದರು. ಬೆಂಗಳೂರಿನ ಗಾಯನ ಸಮಾಜದಲ್ಲಿ ನಡೆದ ಒಂದು ಸಭೆಯಲ್ಲಿ ವಾಜಪೇಯಿಯವರ ಸಿಂಹಧ್ವನಿ ಹೀಗಿತ್ತು, “ನಾ ದೈನ್ಯಂ- ನಾ ಪಾಲಯನಮ್” (ನಾನು ಭಿಕ್ಷೆ ಯಾಚಿಸುವುದಿಲ್ಲ ಅಥವಾ ನಾನು ಯುದ್ಧಭೂಮಿಯಿಂದ ಹೆದರಿ ಓಡಿಹೋಗುವುದಿಲ್ಲ). ಆ ಸಭೆಯ ವೇದಿಕೆಯಲ್ಲಿ ವಾಜಪೇಯಿ ಅವರ ಪಕ್ಕದಲ್ಲಿ ಕುಳಿತು, ಅವರ ಆತ್ಮಸ್ಥೈರ್ಯ ತುಂಬುವ ಮಾತುಗಳನ್ನು ಆಲಿಸುವ ಸೌಭಾಗ್ಯ ನನ್ನದಾಗಿತ್ತು.

1986 ಮೇ 9ರಂದು ದೆಹಲಿಯ ಇಂದ್ರಪ್ರಸ್ಥ ಕ್ರೀಡಾಂಗಣದಲ್ಲಿ ಆಡ್ವಾಣಿ ಅವರು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಬಿಜೆಪಿಯ ಅದೃಷ್ಟರೇಖೆ ಬದಲಾಯಿತು. ಪಕ್ಷವು ಹರಿಯಾಣದಲ್ಲಿ ಗೆಲುವು ಸಾಧಿಸಿತು, ಲೋಕದಳದೊಂದಿಗೆ ಸರ್ಕಾರವನ್ನೂ ರಚಿಸಿತು. ಇದರ ಫಲವಾಗಿ ಪಕ್ಷದಲ್ಲಿ ನೈತಿಕ ಸ್ಥೈರ್ಯ ಹೆಚ್ಚಿತು, 1988ರಲ್ಲಿ ಗುಲಬರ್ಗಾ (ಡಾ.ಎಂ.ಆರ್.ತಂಗ), ಶಿವಮೊಗ್ಗ (ಡಿ.ಎಚ್.ಶಂಕರಮೂರ್ತಿ) ಬೆಂಗಳೂರು (ರಾಮಚಂದ್ರಗೌಡ) ಪದವೀಧರರ ಕ್ಷೇತ್ರದಲ್ಲಿ ಗೆದ್ದು, ಬಿಜೆಪಿಯಿಂದ ಎಂಎಲ್ಸಿಗಳಾಗಿ ವಿಧಾನಪರಿಷತ್ ಪ್ರವೇಶಿದರು.

“ಏನು? ಕರ್ನಾಟಕದಲ್ಲಿ ಬಿಜೆಪಿ ನಿಜವಾಗಿಯೂ ಮೂರು ಸ್ಥಾನಗಳಲ್ಲಿ ಗೆದ್ದಿದೆಯೇ? ಇದು ನಿಜವೇ”? ಎಂದು ಉತ್ತರ ಭಾರತದ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ನನ್ನನ್ನು ಕೇಳುತ್ತಿದ್ದರು. ದೇಶಾದ್ಯಂತ ಈ ಚುನಾವಣಾ ಫಲಿತಾಂಶ ಅಚ್ಚರಿ ಮೂಡಿಸಿತ್ತು, ಬಿಜೆಪಿಗೆ ಇದು ಬಹಳ ಅಗತ್ಯ ಚೈತನ್ಯವಾಗಿತ್ತು. ಬಿಜೆಪಿ ದೇಶದಲ್ಲಿ ಬಲಿಷ್ಠವಾಗಿ ಬೆಳೆಯುವ ನಿಟ್ಟಿನಲ್ಲಿ ಪುಟಿದೇಳುತ್ತಿತ್ತು.

ಬಿಎ, ಬಿಕಾಂಗೂ ಎಂಟ್ರೆನ್ಸ್ ಎಕ್ಸಾಂ: ಪಿಯು ಅಂಕವಿನ್ನು ಲೆಕ್ಕಕ್ಕಿಲ್ಲ; ಪದವಿ ಪ್ರವೇಶಕ್ಕೆ ರಾಷ್ಟ್ರೀಯ ಪರೀಕ್ಷೆ

1989ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 86 ಸ್ಥಾನಗಳನ್ನು ಗೆದ್ದ ಬಿಜೆಪಿ ಅತಿದೊಡ್ಡ ಗೆಲುವು ಸಾಧಿಸಿತ್ತು. ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಸೋತಿತ್ತು. ವಿಶ್ವನಾಥ್ ಪ್ರತಾಪ್ ಸಿಂಗ್ ಅವರನ್ನು ರಾಷ್ಟ್ರೀಯ ರಂಗದಿಂದ ಪ್ರಧಾನಮಂತ್ರಿಯನ್ನಾಗಿಸಿ ಮಾಡಿ ಕಾಂಗ್ರೆಸೇತರ ಸರ್ಕಾರವನ್ನು ಸ್ಥಾಪಿಸುವ ಲೆಕ್ಕಾಚಾರದೊಂದಿಗೆ ವ್ಯೂಹಾತ್ಮಕ ನಿರ್ಧಾರವನ್ನು ಬಿಜೆಪಿ ತೆಗೆದುಕೊಂಡಿತು. ವಿ.ಪಿ. ಸಿಂಗ್ ಅವರು ದುರಂತ ಎಂದು ಸಾಬೀತು ಮಾಡಿದರು, ಇದು ಸಂಪೂರ್ಣವಾಗಿ ಬೇರೆ ವಿಷಯ.

1990ರ ಸೆಪ್ಟೆಂಬರ್ ನಲ್ಲಿ ಆಡ್ವಾಣಿಯವರು ಕೈಗೊಂಡ ಸೋಮನಾಥ-ಅಯೋಧ್ಯಾ ರಾಮ ರಥಯಾತ್ರೆ ಬಿಜೆಪಿಯ ಚುನಾವಣಾ ಭವಿಷ್ಯಕ್ಕೆ ಮತ್ತೊಂದು ವಿಶಿಷ್ಟ ತಿರುವು ನೀಡಿತು. ಸ್ವತಂತ್ರ ಭಾರತದ ರಾಜಕೀಯ ಇತಿಹಾಸದಲ್ಲಿ ಆ ಹೊಸ ಮನ್ವಂತರ ಒಂದು ಪ್ರಮುಖ ಘಟನೆಯಾಗಿತ್ತು. ಜಾತ್ಯತೀತ, ಕೋಮುವಾದ, ರಾಷ್ಟ್ರೀಯತೆಯ ಪರಿಕಲ್ಪನೆ ಸೇರಿದಂತೆ ಹಲವು ಮಾನಸಿಕ ಗೊಂದಲಗಳನ್ನು ಆಡ್ವಾಣಿಯವರು ತಮ್ಮ ರಥಯಾತ್ರೆಯ ಸಂದರ್ಭದಲ್ಲಿ ಪರಿಣಾಮಕಾರಿಯಾಗಿ ನಿವಾರಿಸಿದ್ದರು.

ಶಿಕ್ಷಕಿಯರು ತರಗತಿಯಲ್ಲಿ ಹಿಜಾಬ್ ಧರಿಸಲು ನಿಷೇಧ : ಸಚಿವ ಬಿ.ಸಿ.ನಾಗೇಶ್

1991 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಮೇ 1991 ರಲ್ಲಿ ರಾಜೀವ್ ಗಾಂಧಿ ಅವರ ದುರಂತ ಹತ್ಯೆ ನಡೆಯಿತು. ಕೇಸರಿ ಪಕ್ಷವು 119 ಸ್ಥಾನಗಳನ್ನು ಗೆಲ್ಲುವಲ್ಲಿ ಮಾತ್ರ ಯಶಸ್ವಿಯಾಯಿತು. 1996ರ ಲೋಕಸಭಾ ಚುನಾವಣೆಯಲ್ಲಿ, ಬಿಜೆಪಿ 136 ಸ್ಥಾನಗಳೊಂದಿಗೆ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು ಮತ್ತು ವಾಜಪೇಯಿ ಅವರು 13 ದಿನಗಳ ಕಾಲ ಮೊದಲ ಬಾರಿಗೆ ಪ್ರಧಾನಿಯಾದರು.

ದೇಶ 1996 ಮತ್ತು 1998ರ ಅವಧಿಯಲ್ಲಿ ಎಚ್.ಡಿ.ದೇವೇಗೌಡ ಮತ್ತು ಐ.ಕೆ.ಗುಜ್ರಾಲ್ ನೇತೃತ್ವದ ಸರ್ಕಾರಗಳನ್ನು ಕಂಡಿತು. 1998 ಮತ್ತು 1999ರ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿ ಗಣನೀಯವಾದ ಸ್ಥಾನಗಳೊಂದಿಗೆ ಜಯಗಳಿಸಿತು ಮತ್ತು ಅದರ ಎನ್.ಡಿ.ಎ ಮಿತ್ರಪಕ್ಷಗಳ ಸಹಾಯದಿಂದ ಸರ್ಕಾರವನ್ನೂ ರಚಿಸಿತು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಮಾಧ್ಯಮ ಪ್ರತಿಕ್ರಿಯೆ

ಬಿಜೆಪಿಗೆ ಅನಿರೀಕ್ಷಿತ ಸೋಲು – ಮುಖ್ಯವಾಗಿ ಅತಿಯಾದ ಆತ್ಮವಿಶ್ವಾಸ, ಕಾರ್ಯಕರ್ತರು ಮತ್ತು ನಾಯಕರ ಆಲಸ್ಯ ಮತ್ತು ಇಂಡಿಯಾ ಶೈನಿಂಗ್ ಘೋಷವಾಕ್ಯದ ತಪ್ಪು ಪ್ರಚಾರ – ಕಾರ್ಯಕರ್ತರ ನೈತಿಕ ಸ್ಥೈರ್ಯ ಕುಗ್ಗಿಸಿತು. 10 ವರ್ಷಗಳ ಕಾಲ, ಡಾ. ಮನಮೋಹನ್ ಸಿಂಗ್ ಅವರನ್ನು ಪ್ರಧಾನಮಂತ್ರಿಯನ್ನಾಗಿ ಮಾಡಿ ಕಾಂಗ್ರೆಸ್ ನೇತೃತ್ವದ ಯುಪಿಎ ದೇಶ ಆಳುವಂತಾಯಿತು.

ಗುಜರಾತ್ ಮಾದರಿ ಅಭಿವೃದ್ಧಿಯಿಂದಲೇ ಖ್ಯಾತರಾಗಿದ್ದ ನರೇಂದ್ರ ಮೋದಿಯವರು ಪ್ರಧಾನಿಯಾಗಿ ಭವ್ಯ ಮತ್ತು ಅದ್ಭುತ ಪ್ರವೇಶ ಮಾಡಿದರು, ಇದರಿಂದಾಗಿ ದೇಶದ ಜನರಲ್ಲಿ ಭರವಸೆ, ವಿಶ್ವಾಸ ಮೂಡಿತು, ದೇಶದಲ್ಲಿ ಉಜ್ವಲ ಭವಿಷ್ಯದ ವಾತಾವರಣ ಮೂಡಿತು. ದೇಶವು ಈಗ ಹೊಸ ಮತ್ತು ಆತ್ಮವಿಶ್ವಾಸದ ನಾಳೆಗಳಿಗೆ ಸಾಕ್ಷಿಯಾಗಬಹುದು ಎಂಬ ಭಾವನೆ ಎಲ್ಲರಲ್ಲೂ ಮೂಡಿದೆ.

ಏಪ್ರಿಲ್ 9 &10 ರಂದು ಫ್ರಾನ್ಸ್ ಕ್ರಿಕೆಟ್ ಲೀಗ್ ನ ಅಬ್ಬರ

2014 ರಿಂದ 2022ರ ಇಲ್ಲಿಯವರೆಗೆ, ಮೋದಿ ಜನರನ್ನು ನಿರಾಶೆಗೊಳಿಸಿಲ್ಲ. ಅಭಿಯಾನದೋಪಾದಿಯಲ್ಲಿ ಹುರುಪಿನಿಂದ ಹಾಗೂ, ಅವರ ಪ್ರಗತಿಪರ ಚಿಂತನೆಗಳು, ಸಕಾರಾತ್ಮಕ ಮನೋಭಾವ ಮತ್ತು ದೃಢವಾದ ರಾಷ್ಟ್ರೀಯತೆ ಮತ್ತು ದೇಶಭಕ್ತಿ ಮಿಶ್ರಿತ ಮುಂದಾಲೋಚನೆಯ ದೃಷ್ಟಿಕೋನದಿಂದ ಕೆಲಸ ಮಾಡುವ ಮೂಲಕ ಬಿಜೆಪಿಗೆ ರಾಷ್ಟ್ರೀಯ ಮತ್ತು ರಾಷ್ಟ್ರೀಯವಾದಿ ಪಕ್ಷ ಎಂಬ ಖ್ಯಾತಿ ಉಳಿಯುವಂತೆ ಶ್ರಮಿಸುತ್ತಿದ್ದಾರೆ.

ವಾಸ್ತವವಾಗಿ, 1980ರಲ್ಲಿ ವಾಜಪೇಯಿ ಮತ್ತು ಆಡ್ವಾಣಿ ಅವರು ಘೋಷಿಸಿದ ಗುರಿ ಮತ್ತು ಯೋಜನೆಗಳನ್ನು ಮೋದಿಯವರು ಕಾರ್ಯಗತಗೊಳಿಸುತ್ತಿದ್ದಾರೆ – ಆರ್ಥಿಕ, ರಾಜಕೀಯ ಅಥವಾ ಸಾಮಾಜಿಕ ಯಾವುದೇ ಆಗಿರಲಿ,ಬಿಜೆಪಿ ತನ್ನ ಎಲ್ಲಾ ಪ್ರಯತ್ನಗಳಲ್ಲಿ ದೇಶಪ್ರೇಮ ಮತ್ತು ರಾಷ್ಟ್ರೀಯತೆಯಿಂದ ಮಾರ್ಗದರ್ಶನ ಪಡೆಯುತ್ತದೆ – ಅದುಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವೇ ಇರಲಿ,

ಅಮೀರ್ ಖಾನ್ ‘PK’ ಹಿಂದಿಕ್ಕಿ ಗಳಿಕೆಯಲ್ಲಿ ದಾಖಲೆ ಬರೆದ ‘RRR’: 10 ದಿನಗಳಲ್ಲಿ 900 ಕೋಟಿ ರೂ. ಕಲೆಕ್ಷನ್

ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಿ 370 ರದ್ದುಗೊಳಿಸುವುದಾಗಿರಲಿ, ಏಕರೂಪ ನಾಗರಿಕ ಸಂಹಿತೆಯನ್ನು ರೂಪಿಸುವುದೇ ಇರಲಿ ಬಿಜೆಪಿಯ ಬದ್ಧತೆ ಅಚಲವಾಗಿದೆ. ರಾಮ ಮಂದಿರ ಮತ್ತು ವಿಧಿ 370 ರದ್ದುಗೊಳಿಸುವ ಮೂಲಕ ಮೊದಲ ಎರಡು ಸಾಧನೆಗಳನ್ನು ಮೋದಿ ಮಾಡಿದ್ದಾರೆ. ದೇಶವು ಏಕರೂಪ ನಾಗರಿಕ ಸಂಹಿತೆಯನ್ನು ಹೊರತರಲು ಸಜ್ಜಾಗುತ್ತಿದೆ, ಸಿದ್ಧತೆ ಸದ್ದಿಲ್ಲದೆ ನಡೆಯುತ್ತಿದೆ.

1980ರ ಏಪ್ರಿಲ್ 8 ರಿಂದ ಏಪ್ರಿಲ್ 6, 2022 ರವರೆಗೆ, ಬಿಜೆಪಿ ತನ್ನ ಬದ್ಧತೆ ಮತ್ತು ತತ್ವಗಳಲ್ಲಿ ಎಂದಿಗೂ ರಾಜಿ ಮಾಡಿಕೊಂಡಿಲ್ಲ. ಅದು ತನ್ನ ಗುರುತು ಮಸುಕಾಗಲು ಬಿಟ್ಟಿಲ್ಲ; ಆದಾಗ್ಯೂ, ಅದು ಎನ್.ಡಿ.ಎ ಒಂದು ಅಥವಾ ಎನ್.ಡಿ.ಎ ಎರಡು ಚುನಾವಣಾ ಹೊಂದಾಣಿಕೆಗಳಿಗೆ ತನ್ನನ್ನು ತಾನು ತೆರೆದುಕೊಂಡಿತು.

ಚಿರಂಜೀವಿ ಸರ್ಜಾ ನಟನೆಯ ‘ರಾಜ ಮಾರ್ತಾಂಡ’ ಸಿನಿಮಾ ಪೋಸ್ಟರ್ ಬಿಡುಗಡೆ

ಅದು ತನ್ನ ಬಲವಾದ ರಾಷ್ಟ್ರೀಯತೆ ಮತ್ತು ದೇಶಭಕ್ತಿಯ ವಿಚಾರದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳಲಿಲ್ಲ. ಈ ಎರಡು ತತ್ವಗಳಿಂದ ಮೋದಿ ಮಾರ್ಗದರ್ಶನವನ್ನು ಮುಂದುವರಿಸಿದ್ದಾರೆ. ಜನರ ಕಲ್ಯಾಣವನ್ನು ಗುರಿಯಾಗಿಟ್ಟುಕೊಂಡು ಬಿಜೆಪಿ ತನ್ನ ಎಲ್ಲಾ ನೀತಿಗಳು ಮತ್ತು ಕಾರ್ಯಕ್ರಮಗಳೊಂದಿಗೆ ಜನರ ಪಕ್ಷವೆಂದೇ ಸಾಬೀತಾಗಿದೆ.

ಹೀಗಾಗಿ, ಬಿಜೆಪಿ “ಸೈದ್ಧಾಂತಿಕ ಸ್ಪಷ್ಟತೆ ಮತ್ತು ರಾಜಕೀಯ ಪರಿಣಾಮಕಾರಿತ್ವದ ಸ್ಥಿರ ಮತ್ತು ವಿಶ್ವಾಸಾರ್ಹ ಧ್ರುವವಾಗಿದೆ. ಮತ್ತು 42 ವರ್ಷ ಪೂರೈಸಿರುವ ಬಿಜೆಪಿ, ಇನ್ನೂ ಬಲವಾಗಿ ಮುನ್ನಡೆಯುತ್ತಿದೆ. ರಾಷ್ಟ್ರಮಟ್ಟದಲ್ಲಿ ವಿರೋಧ ಪಕ್ಷಗಳ ದಯನೀಯ ಸ್ಥಿತಿಯನ್ನು ನೋಡಿದರೆ, ಸಾಮಾನ್ಯವಾಗಿ ಬಿಜೆಪಿಗೆ ಮತ್ತು ವಿಶೇಷವಾಗಿ ಮೋದಿಯವರಿಗೆ ಸವಾಲೆಸೆಯಲು ಯಾರೂ ಇಲ್ಲವೇ ಇಲ್ಲ ಎಂದು ತೋರುತ್ತದೆ.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap