ಏಪ್ರಿಲ್ 9 &10 ರಂದು ಫ್ರಾನ್ಸ್ ಕ್ರಿಕೆಟ್ ಲೀಗ್ ನ ಅಬ್ಬರ

ಏಪ್ರಿಲ್ 9 &10 ರಂದು ಫ್ರಾನ್ಸ್ ಕ್ರಿಕೆಟ್ ಲೀಗ್ ನ ಅಬ್ಬರ.

ವರನಟ ಡಾ. ರಾಜ್ ಕುಮಾರ್ ಹೇಳಿದಂತೆ ಅಭಿಮಾನಿಗಳೇ ದೇವರು. ಎನ್ನುವ ಹಾಗೇ ಅಭಿಮಾನಿಗಳನ್ನು ಒಗ್ಗೂಡಿಸಿಕೊಂಡು ನಮ್ಮ ಟಾಕೀಸ್ ಭರತ್ ರವರು ಫ್ಯಾನ್ಸ್ ಕ್ರಿಕೆಟ್ ಲೀಗ್ ಪಂದ್ಯಾವಳಿಯನ್ನ ಏಳು ಬಾರಿ ಅದ್ದೂರಿಯಾಗಿ ನಡೆಸಿಕೊಂಡು ಬಂದಿದ್ದಾರೆ.

ಈಗ 08ನೇ ಬಾರಿ ಕೂಡ ಅಷ್ಟೇ ಅಚ್ಚುಕಟ್ಟಾಗಿ ಆಯೋಜನೆ ಮಾಡಿದ್ದು, ಈ ಬಾರಿ ಪಂದ್ಯಾವಳಿಗಳನ್ನು ನಮ್ಮ ನೆಚ್ಚಿನ ಪವರ್ ಸ್ಟಾರ್ ಡಾ.ಪುನೀತ್ ರಾಜ್ ಕುಮಾರ್ ಅವರ ಸವಿನೆನಪಿನಡಿಯಲ್ಲಿ ನಡೆಯಲಿದೆ. ಬೆಂಗಳೂರಿನ ವಿಜಯನಗರದಲ್ಲಿರುವ ಬಿ.ಜಿ.ಎಸ್ ಮೈದಾನದಲ್ಲಿ 9 ಹಾಗೂ 10 ರಂದು 2ದಿನಗಳ ಕಾಲ ಲೀಗ್ ಹಾಗೂ ಸೆಮಿಫೈನಲ್ ಮತ್ತು ಮ್ಯಾಚ್ ಗಳನ್ನು ನಡೆಸಲಿದೆ.

ಅಮೀರ್ ಖಾನ್ ‘PK’ ಹಿಂದಿಕ್ಕಿ ಗಳಿಕೆಯಲ್ಲಿ ದಾಖಲೆ ಬರೆದ ‘RRR’: 10 ದಿನಗಳಲ್ಲಿ 900 ಕೋಟಿ ರೂ. ಕಲೆಕ್ಷನ್

ಒಟ್ಟು 12 ತಂಡಗಳು ಭಾಗವಹಿಸಲಿದ್ದು, ಅದರಲ್ಲಿ 4 ಗುಂಪುಗಳಾಗಿ ತಂಡಗಳನ್ನ ವಿಂಗಡಿಸಿ , ಒಟ್ಟು 16 ಲೀಗ್ ಮ್ಯಾಚ್ ಗಳು ನಡೆಯಲಿವೆ. ಬಹಳ ಅಚ್ಚುಕಟ್ಟಾಗಿ ಪೂರ್ವತಯಾರಿಯೊಂದಿಗೆ ಸಿದ್ಧ ಮಾಡಿರುವ ಈ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪ್ರತಿ ತಂಡಗಳಿಗೆ ಕೊಟ್ಟಿರುವ ಸ್ಟಾರ್ ಕ್ಯಾಂಪೇನರ್ ಕಲಾವಿದರ ಜೆರ್ಸಿ ಹಾಗೂ ಪ್ರತಿ ಒoದು ವ್ಯವಸ್ಥೆ ಪ್ರೊಫೆಷನ್ ಆರ್ಗನೈಸರ್ ರೀತಿಯಲ್ಲಿ ಗಮನ ಸೆಳೆಯುವಂತಿದೆ.

ಈಗಾಗಲೇ ಈ ಫ್ಯಾನ್ಸ್ ಕ್ರಿಕೆಟ್ ಲೀಗ್ ಪಂದ್ಯಾವಳಿಗೆ ಹಲವಾರು ತಾರೆಯರು ಬೆಂಬಲ ವ್ಯಕ್ತಪಡಿಸಿದ್ದು ಜೊತೆಗೆ ಸೋಷಿಯಲ್ ಮೀಡಿಯಾ ಸರಕಾರವು ಈ ಪಂದ್ಯಾವಳಿ ಸಿಕ್ಕಿದೆ. ಸೆಲೆಬ್ರಿಟಿ ಕ್ರಿಕೆಟ್ ಮ್ಯಾಚ್ನಂತೆ ಸಾಗುತ್ತಿರುವ ಈ ಫ್ಯಾನ್ಸ್ ಕ್ರಿಕೆಟ್ ಲೀಗ್ ಪಂದ್ಯಾವಳಿ ಮುಂದಿನ ದಿನಗಳಲ್ಲಿ ಮತ್ತಷ್ಟು ದೊಡ್ಡ ಮಟ್ಟಕ್ಕೆ ಸಾಗಿ ಎಲ್ಲರ ಗಮನ ಸೆಳೆಯುವಂಥ ಆಗಲಿ.

ಆಯಂಕರ್ ಅನುಶ್ರೀ ತಂದೆ ವಿಚಾರ ಮಾಧ್ಯಮದವರಿಗೆ ನೀಡಿದ್ದಕ್ಕೆ ಬೇಸರ..!

ಈ ಕ್ರಿಕೆಟ್ ಪಂದ್ಯಾವಳಿಯ ಉದ್ಘಾಟನಾ ಸಮಾರಂಭಕ್ಕೆ ರಾಜಕೀಯ ಗಣ್ಯರು ಸೇರಿದಂತೆ ಚಿತ್ರೋದ್ಯಮದ ತಾರೆಯರು ಹಾಗೂ ತಂತ್ರಜ್ಞರು ಕೂಡ ಆಗಮಿಸಲಿದ್ದಾರಂತೆ.

 

 

         ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap