ಶಿರಾ:
ಶಿಕ್ಷಣ ಒಂದು ದೇಶದ ನಾಗರೀಕತೆಯನ್ನು ಪವಿತ್ರಗೊಳಿಸುತ್ತದೆ, ಪ್ರಾಥಮಿಕ ಶಿಕ್ಷಣ ಹಂತದಲ್ಲಿಯೇ ವಿಧ್ಯಾರ್ಥಿಗಳನ್ನು ಸರಿ ಮಾರ್ಗದಲ್ಲಿ ಮುನ್ನಡೆಸಿ ದೇಶಕ್ಕೆ ಉತ್ತಮ ಪ್ರಜೆಯಾಗಿ ರೂಪಿಸುವುದು ಪ್ರತಿಯೊಬ್ಬ ಗುರುವಿನ ಜವಾಬ್ದಾರಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿಜಯಕುಮಾರ್ ಹೇಳಿದರು.
ಶಿರಾ ತಾಲೂಕಿನ ಗ್ರಾಮ ಅಪ್ಪಿಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪೋಷಕರು ಬುದವಾರ ಆಯೋಜಿದ್ದ ಶಿಕ್ಷಕರ ದಿನಾಚರಣೆ ಹಾಗೂ ಗುರುವಂದನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಶಿಕ್ಷಕ ಈ ಸಮಾಜವನ್ನು ಪರಿಣಾಮಕಾರಿಯಾಗಿ ಬದಲಾವಣೆ ಮಾಡುವಂತ ಸಾರ್ಮಥ್ಯ ಹೊಂದಿದ್ದು, ಮಕ್ಕಳಿಗೆ ಗುರುಗಳು ನೀಡುವಂತ ಭೋದನೆಯಷ್ಟೆ ಮುಖ್ಯವಲ್ಲ, ಜೊತೆಗೆ ತಂದೆ ತಾಯಿಯನ್ನು ಗೌರವದಿಂದ ಕಾಣುವಂತ ಸಂಸ್ಕಾರ ಮಕ್ಕಳಲ್ಲಿ ಬೆಳಸುವ ಮೂಲಕ ಈ ನಾಡಿನ ಸಂಸ್ಕøತಿ ಪರಂಪರೆಯನ್ನು ಕಾಪಾಡ ಬೇಕೆಂದರು.ಸರ್ವಪಲ್ಲಿ ಡಾ.ರಾಧಾಕೃಷ್ಣರವರ ಭಾವಚಿತ್ರ ಆನಾವರಣಗೊಳಿಸಿ ಮಾತನಾಡಿದ ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ ಹೆಚ್.ಬಾನುಮತಿ ಸರ್ಕಾರಿ ಶಾಲೆಗಳಲ್ಲಿ ಸೇವೆ ಮಾಡುತ್ತಿರುವ ಶಿಕ್ಷಕರು ಅತ್ಯಂತ ಕ್ರಿಯಾಶೀಲರಾಗಿದ್ದು, ಗ್ರಾಮೀಣ ಪ್ರದೇಶ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಮಕ್ಕಳ ಪೋಷಕರಿಂದ ಗುರುವಂದನೆ ಸ್ವೀಕರಿಸುತ್ತಿರುವುದು ಗುರುವಿನ ಸ್ಥಾನದ ಮಹತ್ವ ಸಾರುತ್ತದೆ. ಶಿಕ್ಷಕರ ಪರಿಶ್ರಮ ವಿಧ್ಯಾರ್ಥಿಯೆಂಬ ಕಲ್ಲಿಗೆ ಸುಂದರ ಮೂರ್ತಿ ನೀಡಬಲ್ಲದು. ಗುರುವಿನ ಸ್ಥಾನದಲ್ಲಿ ಮಾಡಿದ ಪ್ರಮಾಣಿಕ ಸೇವೆ, ಸರ್ವಪಲ್ಲಿ ಡಾ.ರಾಧಾಕೃಷ್ಣರವರಿಗೆ ರಾಷ್ಟ್ರಪತಿ ಸ್ಥಾನ ಅಲಂಕರಿಸಲು ಸಾಧ್ಯವಾಯಿತು. ಇಂತಹ ಗುರು ಶಿಕ್ಷಕರಿಗೆ ಆದರ್ಶವೆಂದರು.
ಇದೇ ಸಂಧರ್ಭದಲ್ಲಿ ಅಪ್ಪಿಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸೇವೆ ಮಾಡುತ್ತ ಜನಮನ್ನಣೆಗಳಿಸಿದ ಶಿಕ್ಷಕ ಕೆ.ಮುರಳಿಧರ ಹಾಗೂ ಹೆಚ್.ಜಿ.ಮಂಜುನಾಥ್‍ರಿಗೆ ವಿಧ್ಯಾರ್ಥಿಗಳು ಮತ್ತು ಪೋಷಕರು ಗುರುವಂದನೆ ಸಲ್ಲಿಸಿದರು. ವಿಧ್ಯಾರ್ಥಿ ಸಂತೋಷ್ ಸವಿನೆನಪಿಗಾಗಿ ಪೋಷಕರು ಶಾಲೆಗೆ ಪಾಠ್ಯ ಸಲಕರಣೆ ಕೊಡಿಗೆಯಾಗಿ ನೀಡಿದರು.
ಶಿಕ್ಷಕ ಕೆ.ಮುರಳಿಧರ, ಮುಖ್ಯ ಶಿಕ್ಷಕ ಹೆಚ್.ಜಿ.ಮಂಜುನಾಥ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಹೊನ್ನೇಶಯ್ಯ, ಉಪಾಧ್ಯಕ್ಷೆ ಲತಮ್ಮ, ಸಿಆರ್‍ಪಿ ಅಜೀಜ್ ಸೇರಿದಂತೆ ಹಲವಾರು ಮಖಂಡರು ಉಪಸ್ಥಿರಿದ್ದರು.