ಶಿಥಿಲಗೊಂಡ ನೀರಿನ ಟ್ಯಾಂಕ್ : ಜೀವ ಭಯದಲ್ಲಿ ಸಾರ್ವಜನಿಕರು

ಹಾವೇರಿ:

     ಆ ಗ್ರಾಮದ ದಲಿತ ಕೇರಿಯಲ್ಲಿ ದಶಕಗಳ ಹಿಂದೆ ನಿರ್ಮಾಣಗೊಂಡಿದ್ದ ನೀರು ಸಂಗ್ರಹಣೆಯ ಟ್ಯಾಂಕ್ ಶಿಥಿಲಗೊಂಡು ಇಂದು ನಾಳೆ ಬೀಳುವ ಸ್ಥಿತಿಯಲ್ಲಿದ್ದು. ಸ್ಥಳೀಯ ನಿವಾಸಿಗಳು ಜೀವ ಭಯದಲ್ಲಿ ಜೀವನ ಸಾಗಿಸುತ್ತಿದ್ದಾರೆ. ತಾಲೂಕಿನ ನೆಗಳೂರ ಗ್ರಾಮದ ದಲಿತಕೇರಿಯ ನಿವಾಸಿಗಳ ಕಥೆಯಿದು.

ಏನಿದು ಸಮಸ್ಯೆ:

         ನೆಗಳೂರಿನ ದಲಿತಕೇರಿಯ ಜನರ ಕುಡಿಯುವ ನೀರು ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ದಶಕದ ಹಿಂದೆಯೇ ಒಂದು ನೀರು ಸಂಗ್ರಹ ಟ್ಯಾಂಕ್ ನಿರ್ಮಾಣ ಮಾಡಲಾಗಿತ್ತು. ಆದರೆ ಕಳೆದ ಮೂರು ವರ್ಷಗಳಿಂದ ಅದು ಶಿಥಲಗೊಂಡಿದ್ದು ಯಾವ ಸಮಯದಲ್ಲಿ ಬೇಕಾದರೂ ಧರೆಗೆ ಉರಳಿ ಬೀಳುವ ಪರಿಸ್ಥಿತಿಯಲ್ಲಿದೆ.ಇದರ ಪಕ್ಕದಲ್ಲಿಯೇ ಸರಕಾರಿ ಪ್ರಾಥಮಿಕ ಶಾಲೆಯಿದ್ದು.ಮಕ್ಕಳು ಈ ಸ್ಥಳದಲ್ಲೇ ಆಟವಾಡುತ್ತಾರೆ.ಇದರಿಂದ ದಲಿತ ಕೇರಿಯ ನಿವಾಸಿಗಳು ಆಂತಕದಲ್ಲಿಯೇ ದಿನ ಕಳೆಯುತ್ತಿದ್ದಾರೆ.

ಗ್ರಾ.ಪಂ.ಅಧಿಕಾರಿಗಳ ನಿರ್ಲಕ್ಷ್ಯ:

      ಶಿಥಲಗೊಂಡಿರುವ ನೀರಿನ ಟ್ಯಾಂಕ್ ನ್ನು ನೆಲಸಮಗೊಳಿಸಿ ನೂತನ ಟ್ಯಾಂಕ್ ನಿರ್ಮಾಣ ಮಾಡುವಂತೆ ಗ್ರಾ.ಪಂ ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ಸ್ಥಳೀಯರು ಮನವಿ ಮಾಡಿದರು ಅಧಿಕಾರಿಗಳು ಯಾವುದೇ ರೀತಿಯ ಕ್ರಮಕೈ ಮುಂದಾಗದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸ್ಥಳಿಯ ನಿವಾಸಿಗಳ ಆರೋಪವಾಗಿದೆ.

      ಸಂಜಯಗಾಂಧಿ ಸಂಜೀವಣ್ಣನವರ ಮಾತನಾಡಿ ನಮ್ಮ ಕೇರಿಯಲ್ಲಿ ನಿರ್ಮಾಣ ಗೊಂಡಿರುವ ನೀರು ಸಂಗ್ರಹ ಟ್ಯಾಂಕ್ ಕಳೆದ ಮೂರು ವರ್ಷಗಳಯಿಂದ ಸಂಪೂರ್ಣವಾಗಿ ಶಿಥಲಗೊಂಡಿದ್ದು.ಬೀಳುವ ಸ್ಥಿತಿಯಲ್ಲಿದ್ದು,ನಿವಾಸಿಗಳು ತಮ್ಮ ಮಕ್ಕಳನ್ನು ಆ ಟ್ಯಾಂಕ ಬಳಿ ಬೀಡದಂತೆ ನೋಡಿಕೊಳ್ಳುವುದೇ ಕೆಲಸವಾಗಿಬಿಟ್ಟಿದೆ.ಯಾವ ಸಮಯದಲ್ಲಿಯಾದರೂ ಕೆಳಗೆ ಬಿಳುವ ಸ್ಥಿತಿ ತಲುಪಿದ ಹಿನ್ನಲೆಯಲ್ಲಿ ಜನರು ಆಂತಕದಲ್ಲಿಯೇ ದಿನ ಕಳೆಯುತ್ತಿದ್ದೇವೆ.ಈ ವಿಷಯವಾಗಿ ಹಲವಾರು ಬಾರಿ ಗ್ರಾ.ಪಂ.ಅಧಿಕಾರಿಗಳ ಗಮನಕ್ಕೆ ತಂದರೂ ಯಾವ ಪ್ರಯೋಜನವಾಗಿಲ್ಲ.ಶೀಘ್ರವಾಗಿ ಈ ನೀರಿನ ಟ್ಯಾಂಕನ್ನು ನೆಲಸಮಮಾಡಿ ನೂತನವಾಗಿ ನೀರಿನ ಸಂಗ್ರಹ ಟ್ಯಾಂಕನ್ನು ನಿರ್ಮಾಣ ಮಾಡಿ ಸ್ಥಳೀಯರ ಆಂತಕವನ್ನು ದೂರು ಮಾಡುವಂತಾಗಲಿ ಎಂದು ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link