ಶಿಫಾರಸ್ಸು ಬಿಟ್ಟು ಅರ್ಹರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲು ತೀರ್ಮಾನ

 ಕೊರಟಗೆರೆ:

      ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಆಯೋಜನೆಗೆ ಪ್ರತಿಯೊಂದು ಇಲಾಖೆಯ ಅಧಿಕಾರಿಗಳು ಹೆಚ್ಚಿನ ಜವಾಬ್ದಾರಿ ವಹಿಸುವುದರ ಜೊತೆಗೆ ಕೊರಟಗೆರೆಯ ಕನ್ನಡಪರ ಸಂಘಟನೆಗಳ ಹೆಚ್ಚಿನ ಸಹಕಾರ ಅಗತ್ಯವಾಗಿದೆ ಎಂದು ತಹಸೀಲ್ದಾರ್ ನಾಗರಾಜು ತಿಳಿಸಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಮಂಗಳವಾರ ಏರ್ಪಡಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

      ಪೂರ್ವಭಾವಿ ಸಭೆಯಲ್ಲಿ ಸೂಚಿಸಿರುವ ಇಲಾಖೆಗಳು ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು. ಸಂಘ ಸಂಸ್ಥೆ, ಕನ್ನಡಪರ ಸಂಘಟನೆ ಸೇರಿದಂತೆಇತರೆ ಹೋರಾಟಗಾರರ ಸಲಹೆ ಮತ್ತು ಸೂಚನೆಗಳಿದ್ದರೆ ನೇರವಾಗಿ ತಿಳಿಸಲು ಅವಕಾಶ ಕಲ್ಪಿಸಲಾಗಿದೆ. ಅರ್ಹ ವ್ಯಕ್ತಿಗಳಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡುವ ಕುರಿತು ಆಯ್ಕೆ ಸಮಿತಿಯೊಂದಿಗೆ ಚರ್ಚಿಸಿ ಮುಂದಿನ ತಿರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.

      ಕರವೇ ಅಧ್ಯಕ್ಷ ಕೆ.ಎನ್.ನಟರಾಜು ಮಾತನಾಡಿ, ತುಮಕೂರು ಜಿಲಾ ್ಲಕನ್ನಡ ರಾಜ್ಯೋತ್ಸವ ಪ್ರಶಸ್ತಿಯು ಕೊರಟಗೆರೆ ಕನ್ನಡ ಪರ ಹೋರಾಟಗಾರರಿಗೆ ಇನ್ನೂ ವ್ಮರೀಚಿಕೆ ಆಗಿದೆ. ತಾಲ್ಲೂಕು ಮಟ್ಟದ ಹೋರಾಟಗಾರರನ್ನು ಗುರುತಿಸುವ ಕೆಲಸವನ್ನು ಜಿಲ್ಲಾಡಳಿತ ಮಾಡಬೇಕು. ರಾಜ್ಯೋತ್ಸವ ಪ್ರಶಸ್ತಿ ನೀಡುವ ವೇಳೆ ಕನ್ನಡಪರ ಹೋರಾಟಗಾರರಿಗೆ ಹೆಚ್ಚಿನ ಆದ್ಯತೆ ನೀಡಬೇಕು. ರಾಜಕಾರಣಿಗಳ ಒತ್ತಡದಿಂದ ಪ್ರಶಸ್ತಿಯನ್ನು ನೀಡುವ ವ್ಯವಸ್ಥೆ ಬದಲಾಗಬೇಕು ಎಂದು ಆಗ್ರಹ ಮಾಡಿದರು.

      ಇಬ್ಬರಿಗೆ ಮಾತ್ರ ಅವಕಾಶ: ಕನ್ನಡಪರ ಹೋರಾಟಗಾರ, ಸಾಹಿತ್ಯ, ಕ್ರೀಡೆ, ಪತ್ರಕರ್ತ, ರಂಗಭೂಮಿ, ಕೃಷಿಕ್ಷೇತ್ರ, ಪೌರಕಾರ್ಮಿಕ ಸೇವೆ, ಕಲಾವಿದ, ಸಮಾಜ ಮತ್ತು ಸರಕಾರಿ ಸೇವೆ ವಿಭಾಗದಲ್ಲಿ ಸೇವೆ ಸಲ್ಲಿಸಿರುವ ತಲಾ ಇಬ್ಬರು ಉತ್ತಮ ವ್ಯಕ್ತಿಗಳಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕು. ಕಳೆದ ವರ್ಷ ಪ್ರಶಸ್ತಿ ಪಡೆದ ಮತ್ತು ಜಿಲ್ಲಾ ಪ್ರಶಸ್ತಿ ಪಡೆದಿರುವ ವ್ಯಕ್ತಿಗಳಿಗೆ ಮತ್ತೊಮ್ಮೆ ತಾಲ್ಲೂಕು ಪ್ರಶಸ್ತಿ ಪ್ರದಾನ ಮಾಡುವುದು ಬೇಡ ಎಂದು ಕನ್ನಡಪರ ಸಂಘಟನೆಗಳ ಹೋರಾಟಗಾರರು ಸಭೆಯಲ್ಲಿ ಒತ್ತಾಯ ಮಾಡಿದರು.

      ಕನ್ನಡ ರಾಜ್ಯೋತ್ಸವ ಪ್ರಶಸ್ತಿಯು ಕನ್ನಡ ನಾಡಿನ ನಾಡು ನುಡಿಯ ವಿಚಾರದಲ್ಲಿ ಹೆಚ್ಚಿನ ಸೇವೆ ಸಲ್ಲಿಸಿದ ವ್ಯಕ್ತಿಗಳಿಗೆ ನೀಡಬೇಕು. ಕೇವಲ ಪ್ರಶಸ್ತಿ ಪಡೆಯುವ ಉದ್ದೇಶದಿಂದ ರಾಜಕಾರಣಿಗಳಿಂದ ದೂರವಾಣಿ ಕರೆ ಮಾಡಿಸಿ ಅವರ ಪತ್ರ ಪಡೆದು ನೀಡುವ ವ್ಯಕ್ತಿಗಳಿಗೆ ನೀಡುವುದು ಬೇಡ. ಕಳೆದ ವರ್ಷ 36 ಜನರಿಗೆ ಕನ್ನಡ ರಾಜ್ಯೊತ್ಸವ ಪ್ರಶಸ್ತಿ ನೀಡುವ ಮೂಲಕ ಕನ್ನಡಪರ ಸಂಘಟನೆಗಳಿಗೆ ಹಿನ್ನಡೆ ಉಂಟಾಗಿತ್ತು. ಮತ್ತೊಮ್ಮೆ ಇದು ಮುಂದುವರೆಯುವುದು ಬೇಡ ಎಂದು ಆಗ್ರಹ ಮಾಡಿದರು.

      ಪೂರ್ವಭಾವಿ ಸಭೆಯಲ್ಲಿ ಬಿಇಓ ಚಂದ್ರಶೇಖರ್, ಬೆಸ್ಕಾಂ ಎಇಇ ನಾಗರಾಜು, ಕೃಷಿ ಇಲಾಖೆ ನಾಗರಾಜು, ಪಪಂ ಸದಸ್ಯರಾದ ಓಬಳರಾಜು, ಕಲೀಂವುಲ್ಲಾ, ಗಣೇಶ್, ನಟರಾಜು, ಪುಟ್ಟನರಸಪ್ಪ, ನಾರಾಯಣ್, ಮುಖಂಡರಾದ ಮಯೂರ ಗೋವಿಂದರಾಜು, ದೇವರಾಜು, ಹರೀಶ್, ಪವನಕುಮಾರ್, ವಿನಯಕುಮಾರ್, ಲಾರಿಸಿದ್ದಪ್ಪ, ಕಾರುಮಹೇಶ್, ತಿಮ್ಮರಾಜು, ಮೈಲಾರಪ್ಪ, ಜಮೀರ್, ಚಾಂದ್‍ಪಾಷ, ಸ್ಭೆರಿದಂತೆ ಇತರರು ಇದ್ದರು.

     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap