ಜೆಡಿಎಸ್ ಟಿಕೆಟ್ ಹಂಚಿಕೆ ಮೇಲೆ ನಿಂತಿರುವ ಕ್ಷೇತ್ರದ ರಾಜಕಾರಣ
-ಬರಗೂರು ವಿರೂಪಾಕ್ಷ
ಶಿರಾ :
2023 ರ ಸಾರ್ವತ್ರಿಕ ಚುನಾವಣೆಯ ವಾಸನೆ ಮೂಗಿಗೆ ಬಡಿಯುತ್ತಿದ್ದಂತೆ ಶಿರಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್, ಬಿ.ಜೆ.ಪಿ. ಹಾಗೂ ಜೆ.ಡಿ.ಎಸ್. ಪಕ್ಷದ ಟಿಕೆಟ್ ಆಕಾಂಕ್ಷಿಗಳು ಮತ್ತು ಆ ಪಕ್ಷಗಳ ಮುಖಂಡರಲ್ಲಿ ಈಗಾಗಲೇ ಒಂದು ರೀತಿಯ ಸಂಚಲನ ಆರಂಭಗೊAಡಿದೆ.
ಕಾAಗ್ರೆಸ್ ಪಕ್ಷದ ಭಾರತ್ ಜೋಡೋ ಮತ್ತು ಪ್ರಜಾಧ್ವ್ವನಿ ಯಾತ್ರೆ, ಬಿ.ಜೆ.ಪಿ. ಪಕ್ಷದ ವಿಜಯಸಂಕಲ್ಪ ಯಾತ್ರೆ ಹಾಗೂ ಜೆ.ಡಿ.ಎಸ್. ಪಕ್ಷದ ಪಂಚರತ್ನ ರಥಯಾತ್ರೆಗಳು ಬರದ ನಾಡಿನ ಪಕ್ಷದ ಕಾರ್ಯಕರ್ತರಲ್ಲಿ ಒಂದಷ್ಟು ಹುರುಪನ್ನು ಹೆಚ್ಚಿಸಿವೆ.
ಚುನಾವಣೆಯು ಇನ್ನೂ ಎರಡು ಮೂರು ತಿಂಗಳು ಇರುವಾಗಲೇ ಕ್ಷೇತ್ರದಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಚುನಾವಣೆಯ ಯುದ್ಧ ತಾಲೀಮನ್ನು ನಡೆಸುತ್ತಿದ್ದಾರೆ. ಟಿಕೆಟ್ ಪಡೆಯುವ ಹಂಬಲದಿAದ ಹಾಗೂ ಟಿಕೆಟ್‌ಗಾಗಿ ತಾವೂ ಕೂಡ ಟವೆಲ್ ಹಾಕಿಕೊಂಡಿದ್ದೇವೆ ಎಂದು ಸಾಬೀತು ಮಾಡಿಕೊಳ್ಳಲು ಹುಟ್ಟಿದ ಹಬ್ಬದವನ್ನು ಟಿಕೆಟ್ ಆಕಾಂಕ್ಷಿಗಳು ಅದ್ದೂರಿಯಾಗಿ ಆಚರಿಸಿಕೊಳ್ಳುವ ಪರಿಪಾಠಕ್ಕಂತೂ ಕೊನೆಯೇ ಇಲ್ಲವಾಗಿದೆ.
ಹುಟ್ಟಿದ ಹಬ್ಬದ ನೆಪದಲ್ಲಿ ರಸ್ತೆ, ವೃತ್ತಗಳಲ್ಲಿ ಫ್ಲ್ಲೆಕ್ಸ್ ಮತ್ತು ಬಂಟಿAಗ್ಸ್ಗಳನ್ನು ಕಟ್ಟುವುದು, ಅಭಿಮಾನಿಗಳ ಹೆಸರಲ್ಲಿ ಹುಟ್ಟಿದ ಹಬ್ಬದಂದು ಸಾವಿರಾರು ಮಂದಿ ಜನರನ್ನು ಕೂಡಿ ಹಾಕಿಕೊಂಡು ಹುಟ್ಟಿದ ಹಬ್ಬ ಆಚರಿಸಿ ಕಾರ್ಯಕ್ರಮಕ್ಕೆ ಸೇರಿದ ಜನರ ದಂಡು ತೋರಿಸಿ ಟಿಕೆಟ್ ಆಕಾಂಕ್ಷಿಗಳು ಬೀಗುವ ಪರಿಪಾಠ ವಿವಿಧ ಪಕ್ಷಗಳ ಮುಖಂಡರಲ್ಲಿ ಎಗ್ಗುಸಿಗ್ಗಿಲ್ಲದೆ ನಡೆಯುತ್ತಿದೆ.
ಅಧಿಕಾರದ ಆಸೆಗಾಗಿ, ಟಿಕೆಟ್ ಪಡೆಯಬೇಕೆಂಬ ಕಾತುರತೆಯಿಂದಷ್ಟೇ ಅಲ್ಲದೆ ಹಣದ ಆಮಿಷಕ್ಕೂ ಬಲಿಯಾಗಿ ಕಳೆದ ಉಪ ಚುನಾವಣೆಯಲ್ಲಿ ಪಕ್ಷಾಂತರಗೊAಡವರಿAದ ಹಿಡಿದು ಅನೇಕ ಮಂದಿ ವಿವಿಧ ಪಕ್ಷಗಳ ಧುರೀಣರು ಮತ್ತೊಮ್ಮೆ ಪಕ್ಷಾಂತರಿಗಳಾಗಲು ಹಾತೊರೆಯುತ್ತಿರುವುದು ಕ್ಷೇತ್ರದಲ್ಲಿ ಸಹಜವಾಗಿಯೇ ಕಾಣತೊಡಗಿದೆ.
ಮೊಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಟಿಕೆಟ್ ಪಡೆಯುವ ಉದ್ದೇಶದಿಂದ ಒಂದಿಬ್ಬರು ಪ್ರಬಲ ಮುಖಂಡರು ಕಾಂಗ್ರೆಸ್ ಮತ್ತು ಬಿ.ಜೆ.ಪಿ. ಪಕ್ಷ ತೊರೆದು ಜೆ.ಡಿ.ಎಸ್. ಸೇರ್ಪಡೆಗೊಂಡಿದ್ದು, ಸದ್ಯಕ್ಕೆ ಇನ್ನಷ್ಟು ಪಕ್ಷಾಂತರ ಪರ್ವ ಆಗುವುದಿಲ್ಲವೆಂಬ ಕನಸು ಕಂಡ ಪಕ್ಷಗಳ ಟಿಕೆಟ್ ಆಕಾಂಕ್ಷಿಗಳಿಗೆ ಕೆಲವೇ ದಿನಗಳಲ್ಲಿ ಕಾದಿದೆ ಬಿಗ್‌ಶಾಕ್ ..!
ಕ್ಷೇತ್ರದಲ್ಲಿ ಜೆ.ಡಿ.ಎಸ್. ಪಕ್ಷದ ಒಬ್ಬನೇ ಒಬ್ಬ ಕಾರ್ಯಕರ್ತನೂ ಕೂಡ ಪಕ್ಷಾಂತರಗೊಳ್ಳದೆ ಸದ್ಯಕ್ಕೆ ತಟಸ್ಥವಾಗಿದ್ದು, ಕಾಂಗ್ರೆಸ್ ಹಾಗೂ ಬಿ.ಜೆ.ಪಿ. ಪಕ್ಷದಲ್ಲಿ ಮಾತ್ರ ಪಕ್ಷಾಂತರ ಪರ್ವಗಳು ಆರಂಭಗೊಳ್ಳುವ ಎಲ್ಲಾ ಸೂಚನೆಗಳು ಕಾಣಬರುತ್ತಿವೆ. ಹುಲಿಕುಂಟೆ ಹೋಬಳಿಯ ಕಾಂಗ್ರೆಸ್ ಮುಖಂಡರನ್ನು ಸೆಳೆಯಲು ಬಿ.ಜೆ.ಪಿ. ಮುಖಂಡರು ಈಗಾಗಲೇ ಕಾರ್ಯತಂತ್ರ ರೂಪಿಸಿದ್ದು, ಎಷ್ಟರಮಟ್ಟಿಗೆ ಪಕ್ಷಾಂತರ ನಡೆಯುವುದೋ ಕಾದು ನೋಡಬೇಕಿದೆ.
ಆಯಾ ಪಕ್ಷಗಳ ವರಿಷ್ಠರು ಪಕ್ಷದ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದ್ದರೆ ಇಷ್ಟೊತ್ತಿಗೆ ಪಕ್ಷಾಂತರವು ಅಬ್ಬರದಿಂದಲೇ ನಡೆಯುತ್ತಿತ್ತು. ಆದರೆ ಅಭ್ಯರ್ಥಿಗಳಲ್ಲಿಯೇ ಟಿಕೆಟ್ ಗೊಂದಲಗಳುAಟಾಗಿ ಕ್ಷೇತ್ರದಲ್ಲಿನ ಪಕ್ಷಗಳ ಸಂಘಟನಾತ್ಮಕ ಚಟುವಟಿಕೆಗಳು ಬಿಗುವಿನ ವಾತಾವರಣದಿಂದ ಕೂಡಿವೆ.
ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ ಮುಂಬರುವ ಕ್ಷೇತ್ರದ ಸಾರ್ವತ್ರಿಕ ಚುನಾವಣೆಯು ಜೆ.ಡಿ.ಎಸ್. ಪಕ್ಷದ ಟಿಕೆಟ್ ಹಂಚಿಕೆಯ ಮೇಲೆ ಸ್ಥಿರವಾಗಿ ನಿಂತಿದೆ. ಕಾಂಗ್ರೆಸ್-ಬಿ.ಜೆ.ಪಿ. ಪಕ್ಷದ ಅಭ್ಯರ್ಥಿಗಳಿಗಿಂತಲೂ ಹೆಚ್ಚಾಗಿ ಜೆ.ಡಿ.ಎಸ್. ಪಕ್ಷದ ಅಭ್ಯರ್ಥಿ ಯಾರು ಎಂಬ ಸ್ಪಷ್ಟ ಚಿತ್ರಣಕ್ಕಾಗಿ ರಾಜಕೀಯ ಧುರೀಣರು ಕಾಯುವುದು ಅನಿವಾರ್ಯವಾಗಿದೆ.
ಎಲ್ಲರ ಚಿತ್ತ ಇದೀಗ ಜೆ.ಡಿ.ಎಸ್. ಟಿಕೆಟ್ ಹಂಚಿಕೆಯತ್ತ ನೆಟ್ಟಿದೆ. ಜೆ.ಡಿ.ಎಸ್. ಪಕ್ಷದ ತತ್ವ-ಸಿದ್ಧಾಂತಗಳನ್ನು ಮುಂದಿಟ್ಟುಕೊAಡರೆ ತಾಲ್ಲೂಕು ಜೆ.ಡಿ.ಎಸ್. ಅಧ್ಯಕ್ಷ ಆರ್.ಉಗ್ರೇಶ್, ಬಿ.ಸತ್ಯಪ್ರಕಾಶ್ ಹಾಗೂ ಸಿ.ಆರ್.ಉಮೇಶ್ ಈ ಮೂವರಲ್ಲೊಬ್ಬರಿಗೆ ಟಿಕೆಟ್ ಲಭ್ಯವಾಗಬೇಕು ನಿಜ. ಆದರೆ ಈ ಮೂವರನ್ನೂ ಹೊರತುಪಡಿಸಿ ಜೆ.ಡಿ.ಎಸ್. ತೊರೆದು ಬಿ.ಜೆ.ಪಿ. ಸೇರಿ ಮತ್ತೆ ಮರಳಿಗೂಡಿಗೆ ಬಂದಿರುವ ಎಸ್.ಆರ್.ಗೌಡ, ಇತ್ತೀಚೆಗೆ ಪಕ್ಷಕ್ಕೆ ಸೇರಿದ ಶ್ರೀರಾಮೇಗೌಡ…ಹೀಗೆ ಹಲವು ಆಕಾಂಕ್ಷಿಗಳ ಪಟ್ಟಿ ಜೆ.ಡಿ.ಎಸ್.ನಲ್ಲಿ ಉದ್ದವಾಗುತ್ತಲೇ ಸಾಗಿದೆ. ಕಳೆದ ಕೆಲ ದಿನಗಳ ಹಿಂದೆ ಜೆ.ಡಿ.ಎಸ್. ವರಿಷ್ಠರು ಜಿಲ್ಲೆಯ ತಿಪಟೂರು, ಶಿರಾ ಕ್ಷೇತ್ರಗಳನ್ನು ಬಿಟ್ಟು ಉಳಿದ ೯ ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದಾರೆ.
ಶಿರಾ ಕ್ಷೇತ್ರದಲ್ಲಿ ಈ ತನಕವೂ ಜೆ.ಡಿ.ಎಸ್. ಪಕ್ಷದ ಅಭ್ಯರ್ಥಿ ಯಾರು ಎಂಬ ಸಣ್ಣದೊಂದು ಸುಳಿವನ್ನು ಕೂಡ ಗೌಡರ ಕುಟುಂಬ ಬಿಟ್ಟುಕೊಟ್ಟಿಲ್ಲ. ಅತ್ಯಂತ ಅಚ್ಚರಿಯ ಸಂಗತಿ ಎಂದರೆ ಈ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಘೋಷಣೆಯಾಗುವವರೆಗೂ ಜೆ.ಡಿ.ಎಸ್. ಪಕ್ಷದ ಅಭ್ಯರ್ಥಿಯ ಹೆಸರನ್ನು ಫೈನಲ್ ಮಾಡುವುದಿಲ್ಲ ಎಂಬ ಖಚಿತ ಮಾಹಿತಿಯೂ ಹರಿದಾಡುತ್ತಿದೆ.
ಜೆ.ಡಿ.ಎಸ್. ಪಕ್ಷವು ತನ್ನ ಅಭ್ಯರ್ಥಿಯನ್ನು ಅಂತಿಮಗೊಳಿಸದೆ ಇರಲು ಪ್ರಮುಖ ಕಾರಣವಿದೆ ಎನ್ನಲಾಗುತ್ತಿದೆ. ಕಾಂಗ್ರೆಸ್ ಪಕ್ಷದಿಂದ ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರಿಗೆ ಟಿಕೆಟ್ ಖಚಿತ ಅನ್ನುವಂತಿದ್ದರೂ, ಒಂದು ವೇಳೆ ಜಯಚಂದ್ರ ಅವರಿಗೆ ಕಾಂಗ್ರೆಸ್ ಟಿಕೆಟ್ ತಪ್ಪಿದಲ್ಲಿ ಜೆ.ಡಿ.ಎಸ್.ನಿಂದ ಟಿಕೆಟ್ ನೀಡಲು ಆ ಪಕ್ಷದ ವರಿಷ್ಠರು ತಂತ್ರ ಹೆಣೆದಿದ್ದಾರೆಂಬ ಸುದ್ದಿ ಕ್ಷೇತ್ರದಲ್ಲಿ ಹರಿದಾಡುತ್ತಿದೆ.
ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾಗಿ ಸಾಸಲು ಸತೀಶ್ ಮತ್ತು ಶಿವಕುಮಾರ್ ಸಹ ಕೆ.ಪಿ.ಸಿ.ಸಿ.ಗೆ ಅರ್ಜಿ ಸಲ್ಲಿಸಿದ್ದಾರೆ. ಇಷ್ಟಕ್ಕೂ ಕಾಂಗ್ರೆಸ್‌ನಿAದ ತನಗೇ ಟಿಕೆಟ್ ನೀಡುವುದಾಗಿ ವರಿಷ್ಠರೇ ಹೇಳಿದ್ದಾರೆಂದು ಸಾಸಲು ಸತೀಶ್ ಸೋಷಿಯಲ್ ಮೀಡಿಯಾಗಳಲ್ಲಿ ಕಳೆದ ಐದಾರು ತಿಂಗಳಿAದಲೂ ಹೇಳಿಕೊಳ್ಳುತ್ತಿದ್ದು, ಸ್ಥಳೀಯ ಕಾಂಗ್ರೆಸ್ಸಿಗರಲ್ಲಿ ಈ ವಿಚಾರ ಗೊಂದಲಕ್ಕೂ ಕಾರಣವಾಗಿದೆ.
ಕಾಂಗ್ರೆಸ್ ಪಕ್ಷದಿಂದ ಜಯಚಂದ್ರ ಅವರಿಗೆ ಟಿಕೆಟ್ ತಪ್ಪಿಸಲು ವಿವಿಧ ರಾಜಕೀಯ ಧುರೀಣರೇ ತೆರೆ ಮರೆಯ ಕಸರÀತ್ತು ನಡೆಸುತ್ತಿದ್ದಾರೆಂಬ ಸುದ್ದಿ ಕ್ಷೇತ್ರದಲ್ಲಿ ನಿರಂತರವಾಗಿ ಹರಿದಾಡುತ್ತಲೇ ಇದೆ. ಕಾಂಗ್ರೆಸ್ ಪಕ್ಷದ ಟಿಕೆಟ್ ಜಯಚಂದ್ರಗೂ ಇಲ್ಲ, ಸತೀಶ್ ಸಾಸಲುಗೂ ಇಲ್ಲ, ಹಾಲಿ ಬಿ.ಜೆ.ಪಿ. ಪಕ್ಷದ ಶಾಸಕ ಡಾ.ಸಿ.ಎಂ.ರಾಜೇಶ್‌ಗೌಡರದ್ದು ಎಂಬ ವದಂತಿ ಹರಿದಾಡುತ್ತಿದೆ. ಹಾಲಿ ಶಾಸಕರ ತಂದೆ ಮಾಜಿ ಸಂಸದ ಸಿ.ಪಿ.ಮೂಡಲಗಿರಿಯಪ್ಪ ಅವರು ದೆಹಲಿಯಲ್ಲಿ ಕೂತು ಮಗನಿಗೆ ಕಾಂಗ್ರೆಸ್ ಟಿಕೆಟ್ ಕೊಡಿಸಲು ದಾಳ ಉರುಳಿಸುತ್ತಿದ್ದಾರೆಂಬುದು ಸಹಜವಾಗಿಯೇ ಪ್ರಚಾರದಲ್ಲಿರುವ ಮಾತಾಗಿದೆ.
ಇತ್ತ ಬಿ.ಜೆ.ಪಿ. ಪಕ್ಷದ ಟಿಕೆಟ್ ಹಾಲಿ ಶಾಸಕರಿಗೆ ಖಚಿತ ಎಂಬ ವಾತಾವರಣವಿದ್ದರೂ ಈ ಹಿಂದೆ ಎರಡು ಬಾರಿ ಈ ಪಕ್ಷದಿಂದ ಪರಾಜಯಗೊಂಡಿದ್ದ ಬಿ.ಕೆ.ಮಂಜುನಾಥ್ ತಮಗೇ ಟಿಕೆಟ್ ಬೇಕೆಂದು ಪಟ್ಟು ಹಿಡಿಯುವ ಎಲ್ಲಾ ಸೂಚನೆಗಳೂ ಇವೆ. ಈ ನಡುವೆ ವಿ.ಪ. ಸದಸ್ಯ ಚಿದಾನಂದ್ ಎಂ ಗೌಡ ಸಹ ಪಕ್ಷವು ಟಿಕೆಟ್ ನೀಡಿದರೆ ಒಂದು ಕೈ ನೋಡೋಣ ಎಂಬ ಚಿಂತನೆ ನಡೆಸಿದ್ದಾರೆ.
ಅತ್ತ ಕಾಂಗ್ರೆಸ್, ಬಿ.ಜೆ.ಪಿ. ಹಾಗೂ ಜೆ.ಡಿ.ಎಸ್. ಪಕ್ಷಗಳಲ್ಲಿ ಟಿಕೆಟ್‌ಗಾಗಿ ಕಸರತ್ತು ನಡೆಯುತ್ತಿದ್ದರೆ, ಇತ್ತ ಅಮ್‌ಆದ್ಮಿ ಹಾಗೂ ಕೆ.ಆರ್.ಎಸ್. ಪಕ್ಷಗಳ ಕಾರ್ಯಕರ್ತ-ಮುಖಂಡರು ಕೂಡ ಪಕ್ಷಗಳ ಬಲವರ್ಧನೆಯನ್ನು ವ್ಯಾಪಕವಾಗಿ ನಡೆಸತೊಡಗಿದ್ದಾರೆ. ಈ ಎರಡೂ ಪಕ್ಷಗಳ ಅಭ್ಯರ್ಥಿಗಳು ಬರುವ ಚುನಾವಣೆಯಲ್ಲಿ ಕಣದಲ್ಲಿರುವುದು ಹಗಲಿನಷ್ಟೇ ಸತ್ಯವೂ ಹೌದು.ಒಟ್ಟಾರೆ ಕ್ಷೇತ್ರದ ವಿವಿಧ ಪಕ್ಷಗಳ ಟಿಕೆಟ್ ಆಕಾಂಕ್ಷಿಗಳು ಮಾತೃ ಪಕ್ಷದಿಂದ ಟಿಕೆಟ್ ಲಭ್ಯವಾಗದೆ ಇದ್ದಲ್ಲಿ ಮತ್ತೊಂದು ಪಕ್ಷಕ್ಕೆ ಮರಕೋತಿಯಾಟವಾಡಿ ಟಿಕೆಟ್ ಪಡೆಯುವ ಎಲ್ಲಾ ಲಕ್ಷಣಗಳು ಮುಗುಮ್ಮಾಗಿ ನಡೆಯುತ್ತಿವೆ.