ಶಿಗ್ಗಾವಿ:
ಪಟ್ಟಣದ ಯಲಿಗಾರ ಓಣಿ ವೀರಗಲ್ಲಿಯಲ್ಲಿರುವ ವೀರಭದ್ರೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಶ್ರಾವಣ ಮಾಸದ ಅಂಗವಾಗಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ಜರುಗಿದವು.
ಶಾಲಿವಾಹನ ಶಕೆ 1940ನೇ ವಿಳಂಬಿನಾಮ ಸಂವತ್ಸರ, ಶ್ರಾವಣ ಮಾಸ ಆರಂಭದಿಂದ ಭಕ್ತ ಸಮೂಹದ ಸಂಕಲ್ಪದೊಂದಿದೆ. ವೀರಭದ್ರೇಶ್ವರ ದೇವರಿಗೆ ನಿತ್ಯ ರುದ್ರಾಭಿಷೇಕ, ಭಜನೆ, ಹೋಮವಹನಗಳು ಜರುಗಿದವು. ನಂತರ ಇಡೀ ಭಕ್ತ ಸಮೂಹಕ್ಕೆ ಅನ್ನಪ್ರಸಾದ ವಿತರಣೆ ಮಾಡಲಾಯಿತು.
ದೇವಸ್ಥಾನ ಸಮಿತಿ ಸದಸ್ಯರಾದ ಶಂಕರಗೌಡ್ರ ಪಾಟೀಲ, ಎಸ್.ವಿ.ದೇಶಪಾಂಡೆ, ಸಿ.ಎನ್.ಮತ್ತಿಗಟ್ಟಿ, ಶಂಕ್ರಪ್ಪ ವನಹಳ್ಳಿ, ಬಸಣ್ಣ ಹಾವೇರಿ, ಬಸಣ್ಣ ಬೂದಿಹಾಳ, ಎಸ್.ಆರ್.ಪಾಟೀಲ, ಬಸನಗೌಡ ಪಾಟೀಲ, ಸತೀಶ ಯಲಿಗಾರ, ಶಿವಪ್ಪ ಗಂಜೀಗಟ್ಟಿ, ಮಲ್ಲಿಕಾರ್ಜುನ ಯಲಿಗಾರ, ಅಪ್ಪಣ್ಣ ಮುಂಡಗೋಡ, ಉಮೇಶ ಗೌಳಿ, ರಮೇಶ ವನಹಳ್ಳಿ, ವೀರಣ್ಣ ಬಡ್ಡಿ, ವೀರಣ್ಣ ನವಲಗುಂದ, ಶಿವಯೋಗೆಪ್ಪ ನವಲಗುಂದ, ಉಮಾಶಂಕರ ನವಲಗುಂದ, ಶಿದ್ರಾಮಗೌಡ ಮೇಳ್ಳಾಗಟ್ಟಿ ಸೇರಿದಂತೆ ಅನೇಕರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ