ಶಿಗ್ಗಾವಿ:
ಪಟ್ಟಣದ ವಿರಕ್ತಮಠ ಓಣಿ ನಿವಾಸಿಗಳು ಶ್ರಾವಣ ಮಾಸ ನಿಮಿತ್ತ ಗ್ರಾಮದೇವತೆಗೆ ಉಡಿ ತುಂಬಿದರು. ಜೊತೆಗೆ ಪಟ್ಟಣದ ಪ್ರಮುಖ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಡೊಳ್ಳು ಮತ್ತು ಭಜಂತ್ರಿ ಮಂಗಲ ವಾದ್ಯಗಳು ಗಮನ ಸೆಳೆದವು.
ಇದಕ್ಕೂ ಮುನ್ನ ವಿರಕ್ತಮಠದ ಶ್ರೀ ಸಂಗನಬಸವ ಮಹಾಸ್ವಾಮೀಜಿ ಸಾನ್ನಿಧ್ಯದಲ್ಲಿ ರಾಚನಕಟ್ಟೆ ಕೆರೆಗೆ ಬಾಗಿನ ಅರ್ಪಿಸಲಾಯಿತು.
ವಿವಿಧ ಧಾರ್ಮಿಕ ಕಾರ್ಯಗಳು ಪೂರ್ಣಗೊಂಡ ಬಳಿಕ ಆರತಿಯೊಂದಿಗೆ ಆಗಮಿಸಿದ್ದ ಸುಮಂಗಲೆಯರು ವಿರಕ್ತಮಠದಲ್ಲಿ ಪೂಜೆ ಸಮಾಪ್ತಿಗೊಳಿಸಿದರು.
ಶಂಭಣ್ಣ ಹಾವೇರಿ, ಶಂಕ್ರಪ್ಪ ಯಲವಿಗಿ, ರುದ್ರಪ್ಪ ಕಾರಡಗಿ, ಈರಪ್ಪ ಹೊಟ್ಟೂರ, ರಾಜಣ್ಣ ವಿರಕ್ತಮಠ, ಸಿದ್ದಪ್ಪ ಮಳ್ಳೂರ, ರಾಜು ಮಾಮಲೇದೇಸಾಯಿ, ನಾಗಪ್ಪ ಜವಳಗಟ್ಟಿ, ರಾಮಣ್ಣ ಕಬನೂರ, ಬಸಣ್ಣ ಹತ್ತಿಮತ್ತೂರ, ಗದಿಗೆಪ್ಪ ಕುಂದಗೋಳ, ಬಸಪ್ಪ ಕಬನೂರ, ಮಹಾದೇವಪ್ಪ ಓಲಿ, ಪ್ರಭುಗೌಡ ಪಾಟೀಲ, ಈರಪ್ಪ ಕಾರಡಗಿ, ಸಂಗಪ್ಪ ಕಾರಡಗಿ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ