ದಾವಣಗೆರೆ :
ಪರಿಸ್ಥಿತಿಯ ಮಹತ್ವವನ್ನು ಅರಿತು ಎಂತಹ ಸಂಕಷ್ಟದಲ್ಲಿಯೂ ತನ್ನವರನ್ನು ಪಾರು ಮಾಡುತ್ತಿದ್ದ ಮಹಾನ್ ರಾಜತಂತ್ರಜ್ಞ ಹಾಗೂ ಸಂದರ್ಭ ನಿರ್ವಹಣಾ ತಂತ್ರಜ್ಞ ಶ್ರೀ ಕೃಷ್ಣ ಎಂದು ಸಾಹಿತಿ ಮಲ್ಲಿಕಾರ್ಜುನ ಕಲಮರಹಳ್ಳಿ ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ, ಜಿ.ಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ, ಜಿಲ್ಲಾ ಗೊಲ್ಲರ (ಯಾದವ) ಸಂಘದಿಂದ ಆಯೋಜಿಸಲಾಗಿದ್ದ ಶ್ರೀ ಕೃಷ್ಣ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ದೈವಿಪುರುಷನೊಬ್ಬ ಸಾಮಾನ್ಯ ಮಾನವರ ಜೊತೆ ಬಾಳಿ ಬದುಕಿ ಕೊನೆಯಲ್ಲಿ ದೈಮತ್ವಕ್ಕೇರಿದ ಪವಾಡ ಪುರುಷ ಶ್ರೀ ಕೃಷ್ಣ ಎಂದರು.
ಯಾವುದೇ ವ್ಯಕ್ತಿಯ ವ್ಯಕ್ತಿತ್ವ ನಿರ್ಧಾರವಾಗುವುದು ಬಾಲ್ಯದಲ್ಲಿ, ಬಾಲ್ಯದ ಬದುಕೇ ಮುನುಷ್ಯನ ನಿರ್ಧಾರಣ ಶಕ್ತಿ. ಅದಕ್ಕೆ ಇಂದಿಗೂ ಕೃಷ್ಣನನ್ನು ಅವನ ಬಾಲ ಲೀಲೆಗಳಿಂದ ಗುರುತಿಸುತ್ತೇವೆ. ಮಕ್ಕಳಿಗೆ ಕೃಷ್ಣ ವೇಷ ಸ್ಫರ್ಧೇ ಏರ್ಪಡಿಸುತ್ತೇವೆ. ವೇಷ ಭೂಷಣ ಹಾಕುತ್ತೇವೆ. ಕೃಷ್ಣ ಬಾಲ್ಯದಲ್ಲಿ ಆಟಗಳು ಅವನು ಬೆಳೆದ ಪರಿಸರ ಅವನು ಸೃಷ್ಠಿಸಿದ ಪವಾಡಗಳು ಜಗದ್ವಿಖ್ಯಾತಿಯಾಗಿವೆ. ಹಾಗಾಗಿ ಬಾಲಕೃಷ್ಣ ಭಾರತೀಯ ಪರಂಪರೆಯಲ್ಲಿ ಹೆಚ್ಚು ಆಪ್ತನಾಗುತ್ತಾನೆ ಎಂದರು.
ದಾಸ ಪರಂಪರೆಯಲ್ಲಿಯೂ ಕನಕದಾಸ, ಪುರಂದರದಾಸರು ಬಹಳಷ್ಟು ಸುಂದರವಾಗಿ ಹಾಡಿ ಹೊಗಳಿದ್ದಾರೆ. ಕೃಷ್ಣನನ್ನು ಪ್ರಮುಖವಾಗಿ 2 ರೀತಿಯಲ್ಲಿ ನೋಡುತ್ತೇವೆ. ಒಂದು ಕಾಡು, ಕೊಳಲು, ನವಿಲುಗರಿ, ಹಸು ಹಾಲು, ಬೆಣ್ಣೆ, ಮೊಸರು, ಮಜ್ಜಿಗೆ, ಗೋಪಾಲಕರು ಹೀಗೆ ಮತ್ತೋಂದು ಚಕ್ರ, ಶಂಖ, ಕಿರೀಟ, ಗಧೆ, ಸಿಂಹಾಸನದ ಜೊತೆ ಕಾಣುವ ಕೃಷ್ಣ ಒಂದು ರೀತಿ ಅಧಿಕಾರಿ ಕೇಂದ್ರಿತ ಕೃಷ್ಣ, ಸದಾ ನಗು ಮೊಗದ ಸಮಸ್ಯೆ ನಿವಾರಕನಾಗಿ ಎಲ್ಲರಿಗೂ ಹೆಚ್ಚು ಆಪ್ತನಾಗುತ್ತಾನೆ. ಸಮಯ ಸಂದರ್ಭಗಳನ್ನು ತುಂಬಾ ನಾಜೂಕಿನಿಂದ ನಿರ್ವಹಿಸುವುದರಲ್ಲಿ ಕೃಷ್ಣ ಎತ್ತಿದ ಕೈ. ಅವನ ತುಂಟುತನಗಳು ಎಷ್ಟು ಆಪ್ತವಾಗುತ್ತಿದ್ದವರೆಂದರೆ ಮಹಿಳೆಯರು ಅವನು ಬೀದಿಯಲ್ಲಿ ಬಂದನೆಂದರೆ ಎಲ್ಲಿ ಗೋಳುಹುಯ್ದು ಕೊಳ್ಳುತ್ತಾನೋ ಎಂದು ಹೆದರುತ್ತಿದ್ದರು. ಅಷ್ಟೊಂದು ತುಂಟತನ ಶ್ರೀ ಕೃಷ್ಣನದು ಎಂದರು.
ಕೃಷ್ಣನ ಜೀವನದಲ್ಲಿ ಹೆಚ್ಚು ಪ್ರಭಾವ ಬೀರಿದವರು ರಾಧೆ, ಯಶೋಧ ಮತ್ತು ಮಾವ ಕಂಸ, ಕೃಷ್ಣ, ರಾಧೆಯರ ಅನ್ಯೋನತೆಯನ್ನು ನಾವೆಲ್ಲಾ ತುಂಬಾ ಗೌರವಿಸುತ್ತೇವೆ. ಆದರೆ ರಾಧೆ ಹೆಚ್ಚು ಸಂಕಟದಿಂದ ಬದುಕಿದ್ದಳೆಂಬುದನ್ನು ಇತಿಹಾಸ ಹೇಳುತ್ತದೆ. ಇಂದಿನ ನಮ್ಮ ಹೆಣ್ಣು ಮಕ್ಕಳು ರಾಧೆಯ ಒಳ ಸಂಕಟಗಳನ್ನು ಅರ್ಥ ಮಾಡಿಕೊಳ್ಳಬೇಕು.
ಅವನ ಮಾವ ಕಂಸನೂ ಚರಿತ್ರೆಯಲ್ಲಿ ಇರುವಂತೆ ಅಷ್ಟೊಂದು ಕೆಟ್ಟವನಲ್ಲ. ಅಶರೀರವಾಣಿ ಹಾಗೂ ನಾರದರ ಮಾತು ಕೇಳಿ ತನ್ನ ತಂಗಿ ಭಾವನನ್ನು ಜೈಲುಗಟ್ಟಿದ ಆಗಿನ ಕಾಲದಲ್ಲಿಯೇ ವೈದಿಕಶಾಹಿ ಎಷ್ಟು ಪ್ರಬಲವಾಗಿತ್ತೆಂಬುದನ್ನು ತೋರಿಸುತ್ತದೆ. ಅವನೊಬ್ಬ ಮಾನವೀಯತೆ ತುಂಬಿದ್ದ ರಾಜ ಭಾರತದ ಇತಿಹಾಸದಲ್ಲಿ ಗಂಡ ಹೆಂಡತಿಯನ್ನು ಜೈಲಿನ ಒಂದೆ ಕೋಣೆಯಲ್ಲಿಟ್ಟ ನಿರ್ದಶನವಿಲ್ಲ. ಆದರೆ ಮಾನವೀಯತೆ ಇದ್ದ ಕಂಸ ಗಂಡ ಹೆಂಡರಿರಬ್ಬರನ್ನು ಒಂದೇ ಕೋಣೆಯಲ್ಲಿರಿಸಿದ್ದ. ಪರಿಸ್ಥತಿಯ ಕೈಗೊಂಬೆಯಾಗಿ ಕೆಟ್ಟ ಹೆಸರನ್ನು ಮೈಮೇಲೆ ಎಳೆದುಕೊಂಡ. ಶ್ರೀ ಕೃಷ್ಣ ದೇವರು. ನಿಪುಣ ರಾಜತಂತ್ರಜ್ಞ, ದಯಾಮಯಿ ಕಷ್ಟದಲ್ಲಿರುವವರ ಕರೆಗೆದ ಓಗೋಡುವ ರಕ್ಷಕನಾಗಿ ನಿಲ್ಲುತ್ತಾನೆ ಎಂದರು.
ಜಿ.ಪಂ ಅಧ್ಯಕ್ಷರಾದ ಕೆ.ಆರ್ ಜಯಶೀಲ ಅವರು ಮಾತನಾಡಿ ಶ್ರೀ ಕೃಷ್ಣನನ್ನು ಒಂದು ಧರ್ಮಕ್ಕೆ ಒಂದು ಜಾತಿಗೆ ಒಂದು ಕೋಮಿಗೆ ಸಿಮೀತಗೊಳಿಸುವುದು ಬೇಡ, ಅವನು ಲೋಕ ರಕ್ಷಕ ದೇವನಾಗಿ ಮಾನವನಾಗಿ ಮತ್ತೇ ದೈಮತ್ವಕ್ಕೇರಿದ ಮಹಾಪುರುಷ. ಅವನ ಸಾಮಾಜಿಕ ನ್ಯಾಯ ಧರ್ಮದ ತಳಹದಿಯ ಮೇಲೆ ನಿಂತಿತ್ತು. ಎಂದಿಗೂ ಧರ್ಮದ ಪರವಾಗಿ ನಿಂತು ಧರ್ಮದ ರಕ್ಷಣೆದಗೆ ಕಟಿಬದ್ದವಾಗಿದ್ದವನು ಶ್ರೀ ಕೃಷ್ಣ. ದೇಶಾದಾದ್ಯಂತ ಎಲ್ಲಾ ಕೋಮಿನವರು ಬಹು ವಿಧ ರೀತಿಯಲ್ಲಿ ಕೃಷ್ಣ ಜಯಂತಿ ಆಚರಿಸುವುದೇ ಇದಕ್ಕೆ ಸಾಕ್ಷಿ ಎಂದರು.
ಅಪರ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ ಮಾತನಾಡಿ ಕೃಷ್ಣ ಸರ್ವರನ್ನೂ ಒಳಗೊಳ್ಳುವವನು. ಧರ್ಮವನ್ನು ಎತ್ತಿಹಿಡಿದು ಧರ್ಮವಿರುವಲ್ಲಿ ತಾನಿರುತ್ತೇನೆಂದು ಸಾರಿದ ಪುಣ್ಯ ಪುರುಷ. ನೀನು ನಿನ್ನ ಕರ್ಮವನ್ನಷ್ಠೇ ಮಾಡು. ಫಲಾಪಲಗಳನ್ನು ನನಗೆ ಬಿಡು ಎಂದು ಕಾಯಕ ಪ್ರಜ್ಞೆ ನೀಡಿದ ದಾರ್ಶನಿಕ. ಕೃಷ್ಣ ತತ್ವವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಕಷ್ಟಗಳೇ ಬರುವುದಿಲ್ಲ, ಸದಾ ಬಡವರ, ದುರ್ಬಲರ ಪರವಾಗಿದ್ದವನು ಶ್ರೀ ಕೃಷ್ಣ ಎಂದರು.
ಕಾರ್ಯಕ್ರಮ ಜಿ.ಪಂ ಸದಸ್ಯರಾದ ಶಾಂತಕುಮಾರಿ, ತಹಶೀಲ್ದಾರ್ ಸಂತೋಷಕುಮಾರ್, ವಾರ್ತಾಧಿಕಾರಿ ಅಶೋಕ್‍ಕುಮಾರ್ ಡಿ. ಕನ್ನಡ ಮತ್ತು ಸಂಸ್ಕೃತಿ ಗಾಧರಪ್ಪ ಉಪಸ್ಥತರಿದ್ದರು.