ಶ್ರೀ ಕವಿರತ್ನ ಕಾಳಿದಾಸ ಪತ್ತಿನ ಸಹಕಾರ ಸಂಘಕ್ಕೆ 5.66 ಲಕ್ಷ ರೂ ನಿವ್ವಳ ಲಾಭ

ತುಮಕೂರು:

              ಶ್ರೀ ಕವಿರತ್ನ ಕಾಳಿದಾಸ ಪತ್ತಿನ ಸಹಕಾರ ಸಂಘವು 1049 ಷೇರುದಾರರನ್ನು ಹೊಂದಿದ್ದು, 2 ಕೋಟಿ 14 ಲಕ್ಷದ 53 ಸಾವಿರ ರೂ.ಗಳ ವಹಿವಾಟು ನಡೆಸಿದ್ದು, ಕಳೆದ ಮೂರು ವರ್ಷಗಳಲ್ಲಿ 5 ಲಕ್ಷ 66 ಸಾವಿರ ರೂ.ಗಳ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಎಂ.ನಾರಾಯಣ್ ತಿಳಿಸಿದರು.
               ಅವರು ನಗರದ ಕಾಳಿದಾಸ ವಿದ್ಯಾವರ್ಧಕ ಸಂಘದ ಆವರಣದಲ್ಲಿ ಭಾನುವಾರ ನಡೆದ ತೃತೀಯ ವರ್ಷದ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಸಂಘದ ಅಭಿವೃದ್ಧಿಗೆ ಸದಸ್ಯರೆಲ್ಲರೂ ಸಹಕರಿಸುವಂತೆ ಮನವಿ ಮಾಡಿದ ಅವರು, ಪ್ರತಿವರ್ಷ ಶಿಕ್ಷಣ ನಿಧಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲು, ಮರಣೋತ್ತರ ನಿಧಿಯಿಂದ ಸದಸ್ಯರು ನಿಧನರಾದಲ್ಲಿ ಅವರ ಕುಟುಂಬಕ್ಕೆ ಹಣ ನೀಡುವಂತೆಯು ಹಾಗೂ ಸಂಘಕ್ಕೆ ಸರ್ಕಾರದಿಂದ (ಸಿ.ಎ. ನಿವೇಶನ) ಸ್ವಂತ ನಿವೇಶನ ಪಡೆಯಲು ತೀರ್ಮಾನಿಸಲಾಯಿತು.
               ಸಂಘದ ಉಪಾಧ್ಯಕ್ಷ ಎಂ.ಧರ್ಮರಾಜ್ ಮಾತನಾಡಿ ಸಂಘದಲ್ಲಿ 550 ಜನ ಸದಸ್ಯರಿಗೆ ಜಂಟಿ ಸಾಲ ನೀಡಲಾಗಿದ್ದು, 15 ಸದಸ್ಯರಿಗೆ ವಾಹನ ಸಾಲ ನೀಡಲಾಗಿದೆ ಎಂದ ಅವರು, ಸಂಘದ ಶ್ರೇಯೋಭಿವೃದ್ಧಿಗೆ ಸರ್ವರೂ ಸಹಕರಿಸುವಂತೆ ತಿಳಿಸಿದರು. ಸಮಾರಂಭವನ್ನು ನಿವೃತ್ತ ಪ್ರಾಂಶುಪಾಲರಾದ ಎನ್.ಈಶ್ವರಯ್ಯ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಎಸ್.ಕಂಬಣ್ಣ, ನಿರ್ದೇಶಕರಾದ ವಿ.ಆರ್.ವೆಂಕಟೇಶಪ್ಪ, ಕೆ.ವಿರೂಪಾಕ್ಷಪ್ಪ, ಕೆ.ರಮೇಶ್, ಎಸ್.ಲಿಂಗಣ್ಣ, ಎಸ್.ಆರ್. ಹರೀಶ್, ನಟರಾಜ್, ಡಿ.ಶಿವರಾಜಯ್ಯ, ಕೆ.ಎಸ್.ರಾಮಚಂದ್ರಯ್ಯ, ಡಾ.ಸಿ.ಡಿ.ಗುರುಪ್ರಕಾಶ್, ಕೆ.ಪುಷ್ಪ, ಎಲ್.ಸುಶೀಲ ಅವರುಗಳು ಉಪಸ್ಥಿತರಿದ್ದರು. ಕು.ಪ್ರಿಯಾಂಕ ಪ್ರಾರ್ಥಿಸಿದರೆ, ಡಿ.ಶಿವರಾಜಯ್ಯ ಸ್ವಾಗತಿಸಿದರು. ಕೆ.ಎಸ್.ರಾಮಚಂದ್ರಯ್ಯ ಕಾರ್ಯಕ್ರಮ ನಿರೂಪಿಸಿದರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap