ಬ್ಯಾಡಗಿ:
ಎಲ್ಲ ಧರ್ಮಗಳ ನೀತಿ ಸಮಾಜದ ಉದ್ದಾರ ಮಾಡುವುದಾಗಿದೆ. ಮಂದಿರ, ಚುರ್ಚು ಹಾಗೂ ಮಸಿದಿಗಳು ಸದ್ವಿಚಾರ ಬಿತ್ತುವ ಕೇಂದ್ರಗಳಾಗಿವೆ. ಈ ದೇಶ ಕಂಡ ಅತ್ಯಂತ ಕುಶಾಗ್ರಮತಿ, ಪರಮಪ್ರತಾಪಿ, ಶ್ರೇಷ್ಠರಲ್ಲಿ ಅತೀ ಶ್ರೇಷ್ಠನಾದ ಪುರದೊಡೆಯ ಶ್ರೀ ಕೃಷ್ಣನು ಮನಸ್ಸು ಮಾಡಿದ್ದರೇ ಅಖಂಡ ಶ್ರೀ ಕೃಷ್ಣ ಸಾಮ್ರಾಜ್ಯವನ್ನು ಕಟ್ಟಿ, ಧರೆಯಲ್ಲಿ ಏಕ ಚಕ್ರಾಧಿಪತಿಯಾಗಿ ಮೆರೆದು ಸುಖಃದ ಸುಪ್ಪತ್ತಿಗೆಯಲ್ಲಿ ತೇಲಾಡಬಹುದಾಗಿತ್ತೆಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು.
ಮಂಗಳವಾರ ಅವರು ತಾಲೂಕಿನ ತಹಶೀಲದಾರರ ಸಭಾಭವನದಲ್ಲಿ ತಾಲೂಕಾ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಜರುಗಿದ ಶ್ರೀ ಕೃಷ್ಣ ಜನ್ಮಾಷ್ಠಮಿ ಮಹೋತ್ಸವ ಕಾರ್ಯಕ್ರದ ಜ್ಯೋತಿ ಬೇಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶ್ರೀ ಕೃಷ್ಣನು ತನ್ನ ಜೀವನದುದ್ದಕೂ ಗೋವುಗಳ ಸೇವೆ ಮಾಡುತ್ತ ತನ್ನ ಗೆಳೆಯ ಪಾರ್ಥನ ಸಾರಥಿಯಾಗಿ ಉಳಿದುಕೊಂಡ, ಯುದ್ದಗಳ ಮೇಲೆ ಯುದ್ದ ಗೆದ್ದರೂ, ರಾಜ್ಯಗಳ ಮೇಲೆ ಅಧಿಪತ್ಯೆ ಪಡೆದರೂ ತಾನೂ ಮಾತ್ರಸಿಂಹಾಸನದಿಂದ ದೂರ ಉಳಿದು ಮಾರ್ಗದರ್ಶಕನ ಭೂಮಿಕೆಯನ್ನು ನೀಭಾಯಿಸುವ ಮೂಲಕ ಅಧಿಕಾರದ ವಾಂಛೆ ತ್ನನ ಬಳಿ ಬರದಂತೆ ಎಚ್ಚರಿಕೆ ವಹಿಸಿ ಧರ್ಮದ ಕಾರ್ಯದಲ್ಲಿ ಮುಂದುವರಿದನೆಂದರು. ಆದ್ದರಿಂದ ಪ್ರತಿಯೊಬ್ಬರೂ ಶ್ರೀ ಕೃಷ್ಣ ಜನ್ಮಾಷ್ಠಮಿ ಮಹೋತ್ಸವವದಲ್ಲಿ ಭಾಗವಹಿಸಿ ಆಚರಿಸುವ ಮೂಲಕ ಸಮಾಜದಲ್ಲಿ ಸಮಾನತೆಯಿಂದ ಬದುಕಬೇಕೆಂದರು.
ತಾ.ಪಂ.ಅಧ್ಯಕ್ಷೆ ಸವಿತಾ ಸುತ್ತಕೋಟಿ ಮಾತನಾಡಿ ಭಕ್ತಿ, ಶಕ್ತಿ ಹಾಗೂ ಯುಕ್ತಿಯಿಂದ ಧರ್ಮಸ್ಥಾಪನೆ ಮಾಡಿದ ಶ್ರೀ ಕೃಷ್ಣನ ಜೀವನವೇ ಮನು ಕುಲಕ್ಕೆ ಆದರ್ಶಪ್ರಾಯವಾಗಿದೆ. ಭರತಭೂಮಿಯ ಶ್ರೇಷ್ಠತೆ ಶ್ರೀ ಕೃಷ್ಣನ ಜೀವನಾದರ್ಶದಲ್ಲಿ ಅಡಗಿದೆ. ನಮ್ಮ ಭವ್ಯ, ದಿವ್ಯ ಸಂಸ್ಕøತಿಯ ರಕ್ಷಣೆಯಲ್ಲಿ ಮಹಿಳೆಯರ ಪಾತ್ರ ಬಹು ದೊಡ್ಡದಾಗಿದೆ. ಮನು ಕುಲ ರಕ್ಷಿಸಲು ಕಾಲಕಾಲಕ್ಕೆ ನಾನು ಅವತರಿಸುತ್ತೆನೆಂದು ಹೇಳಿದ ಶ್ರೀ ಕೃಷ್ಣನ ಜನ್ಮಾಷ್ಠಮಿಯು ಕೇವಲ ಒಂದು ಜನಾಂಗೆಕ್ಕೆ ಸಿಮಿತವಾಗದೇ ಸಮಾಜದಲ್ಲಿರುವ ಪ್ರತಿಯೊಬ್ಬರೂ ಇಂಥಹ ಕಾರ್ಯಕ್ರಮದಲ್ಲಿ ಸ್ವಯಂತನದಿಂದ ಭಾಗವಹಿಸಿ ಶ್ರೀ ಕೃಷ್ಣನ ಸಂದೇಶವನ್ನು ತಿಳಿದುಕೊಳ್ಳುವುದು ಬಹಳ ಅವಶ್ಯ. ಆದ್ದರಿಂದ ಮಹಿಳೆಯರು ತಮ್ಮ ಮಕ್ಕಳಿಗೆ ಇಂದಿನಿಂದಲೇ ಧರ್ಮ ಹಾಗೂ ಸಂಸ್ಕøತಿಯ ಬಗ್ಗೆ ಹೆಚ್ಚು ತಿಳಿಸಿ ಕೊಡುವ ಮೂಲಕ ಕೃಷ್ಣನ ಆದರ್ಶಗಳನ್ನು ಪಾಲಿಸಬೇಕಾಗಿದೆ ಎಂದರು.
ಉಪನ್ಯಾಸ ನೀಡಿದ ಎಂ.ಎಫ್.ಕರಿಯಣ್ಣನವರ ಮಾತನಾಡಿ ಶ್ರೀ ಕೃಷ್ಣ ಬಾಲಕನಿದ್ದ ಸಮಯದಲ್ಲಿ ಸಾಕಷ್ಟು ಲೀಲೆಗಳನ್ನು ತೊರುವ ಮೂಲಕ ಗೋವರ್ಧನವನ್ನು ಎತ್ತಿ ಜನತೆಯನ್ನು ರಕ್ಷಿಸುವಂತ ಮಹತ್ ಕಾರ್ಯವನ್ನು ಮಾಡುವ ಮೂಲಕ ಅಂದಿನಿಂದಲೇ ಸಮಾಜ ಹಾಗೂ ಧರ್ಮದ ಕಾರ್ಯವನ್ನು ಮುಂದುವರಿಸಿದ್ದನ್ನು ಕಾಣಬಹುದಾಗಿದೆ. ಪ್ರತಿಯೊಬ್ಬ ಮಾತೆಯರು ಜಾಗೃತರಾಗಿ ಮನೆಯಲ್ಲಿನ ಮಕ್ಕಳಿಗೆ ಉತ್ತಮ ಸಂಸ್ಕಾರವನ್ನಿತ್ತು, ಸಂಸ್ಕøತಿಯ ಹಿರಿಮೆ ಗರಿಮೆಗಳನ್ನು ತಿಳಿಸಿ ಅನುಷ್ಟಾನಿಸುವ ಮೂಲಕ ಸವಾಲುಗಳನ್ನು ಎದುರಿಸಲು ಪಣ ತೊಡಬೇಕಿದೆ. ಸಮಾಜದ ರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದ್ದು, ಈ ದಿಶೆಯಲ್ಲಿ ನಮ್ಮೇದರು ಉದ್ಭವಿಸಲಿರುವ ಸಣ್ಣ ಸಣ್ಣ ಕಾರ್ಯಗಳನ್ನು ಶ್ರದ್ಧೆ, ನಿಷ್ಠೆಯಿಂದ ಎದುರಿಸಬೇಕಾಗಿದೆ ಎಂದರು. ಇದೇ ಸಂದರ್ಭದಲ್ಲಿ ಸಮಾಜದ ವಿವಿಧ ರಂಗದಲ್ಲಿ ಸಾಧನಗೈದವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಹಶೀಲದಾರ ಜಯಣ್ಣ ತಳವಾರ ವಹಿಸಿದ್ದರು. ವೇದಿಕೆಯಲ್ಲಿ ಜಿ.ಪಂ.ಸದಸ್ಯರಾದ ಅನುಸೂಯಾ ಕುಳೇನೂರ, ಸುಮಂಗಲಾ ಪಟ್ಟಣಶೆಟ್ಟಿ, ಪುರಸಭೆ ಉಪಾಧ್ಯಕ್ಷೆ ದ್ರಾಕ್ಷಾಯಣೆಮ್ಮ ಪಾಟೀಲ, ರಮೇಶ ಸುತ್ತಕೋಟಿ, ಶಿವಬಸಪ್ಪ ಕುಳೇನೂರ, ವಿರೇಂದ್ರ ಶೆಟ್ಟರ, ರವಿ ಪಟ್ಟಣಶೆಟ್ಟಿ, ಬಸನಗೌಡ್ರ ಸಣ್ಣಗೌಡ್ರ, ನಾರಾಯಣಪ್ಪ ಕರ್ನೂಲ, ಮಂಜಣ್ಣ ಭೋವಿ, ನಾಗರಾಜ ಹಾವನೂರ, ಪುಟ್ಟಪ್ಪ ಕಿತ್ತೂರ, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಎ.ಟಿ.ಜಯಕುಮಾರ ಸೇರಿದಂತೆ ಮೊದಲಾದವರು ಪಾಲ್ಗೊಂಡಿದ್ದರು. ಪ್ರಕಾಶ ಕೊರಮರ ಹಾಗೂ ಮಕ್ಕಳು ಪ್ರಾರ್ಥಿಸಿದರು. ಸಿ.ಎಂ.ತಂಗೌಡ್ರ ಸ್ವಾಗತಿಸಿ, ಸಿ.ಎಸ್.ದೊಡ್ಡಗೌಡ್ರ ವಂದಿಸಿದರು.