ಎಂ ಎನ್ ಕೋಟೆ
ಗುಬ್ಬಿ ತಾಲ್ಲೂಕಿನ ಸಾಗಸಂದ್ರ ಗ್ರಾಮದ ಶ್ರೀ ಭೂತಪ್ಪ ಸ್ವಾಮಿಯ ನೂತನ ದೇವಾಲಯದ ಪ್ರತಿಷ್ಠಾಪನಾ ಮಹೋತ್ಸವಕ್ಕೆ ಅದ್ದೂರಿಯಾಗಿ ನಡೆಯಿತು. ಸಾಗಸಂದ್ರ ಶ್ರೀ ಕೆಂಪಮ್ಮದೇವಿ, ಎಂ.ಎನ್ ಕೋಟೆ ಶ್ರೀ ಕೊಲ್ಲಾಪುರದಮ್ಮ ದೇವಿ, ಕೋಟೆ ಲಕ್ಷ್ಮೀರಂಗನಾಥಸ್ವಾಮಿ, ಅಳಿಲಘಟ್ಟ ವೆಂಕಟರಮಣಸ್ವಾಮಿ, ವೀರಭದ್ರೇಶ್ವರಸ್ವಾಮಿ, ಕಂತೇಸ್ವಾಮಿ, ಕಡವಿಗೆರೆ ಕರಿಯಮ್ಮ, ದೊಡ್ಡವೀರನಹಳ್ಳಿ ಶ್ರೀ ಕೊಲ್ಲಾಪುರದಮ್ಮ ದೇವರುಗಳ ಆಗಮನದೊಂದಿಗೆ ಊರಿನ ರಾಜಬೀದಿಗಳಲ್ಲಿ ಉತ್ಸವ ನಡೆಸಲಾಯಿತು. ಭೂತಪ್ಪಸ್ವಾಮಿ ದೇವಾಲಯದ ಪ್ರತಿಷ್ಠಾಪನೆಯಲ್ಲಿ ದೇವರುಗಳ ಸಮ್ಮುಖದಲ್ಲಿ ಪ್ರತಿಷ್ಠಾಪನೆ ಮಾಡಲಾಗಿತ್ತು. ಬೆಳಿಗ್ಗೆ ದೇವಾಲಯದಲ್ಲಿ ಹೋಮ ಹವನಗಳು 101 ಕುಂಭಾಭಿಷೇಕಗಳೊಂದಿಗೆ ವಿವಿಧ ಪೂಜಾ ಕಾರ್ಯಕ್ರಮಗಳು ಜರುಗಿದವು. ಭೂತಪ್ಪಸ್ವಾಮಿ ದೇವಾಲಯಕ್ಕೆ ಬೆಟ್ಟದಹಳ್ಳಿ ಗವಿಮಠಾಧ್ಯಕ್ಷ ಚಂದ್ರಶೇಖರಸ್ವಾಮೀಜಿ, ಶಿಡ್ಲೇಕೋಣ ಸಂಜಯ್ ಕುಮಾರ ಮಹಾಸ್ವಾಮಿಗಳು ಭೇಟಿ ನೀಡಿದರು.
ಈ ಕಾರ್ಯಕ್ರಮದಲ್ಲಿ ಮುಖಂಡರಾದ ರವಿಕುಮಾರ್, ದೊಡ್ಡಕೆಂಪಯ್ಯ, ಕೆಂಪರಾಜಣ್ಣ, ದೇವರಾಜು, ಸುದ್ದಣ್ಣ , ಮಂಜುನಾಥ್ , ಬಣ್ಣಗಾರ್ ಕೆಂಪಣ್ಣ ಇದ್ದರು.








