ಅಧಿಕ ಆಟೋ ದರ : ದೂರು ಕೊಟ್ಟರೆ ಕ್ರಮ

ತುಮಕೂರು

        ‘‘ಆಟೋರಿಕ್ಷಾದ ಚಾಲಕರು ಹೆಚ್ಚಿಗೆ ದರ ಕೇಳಿದಲ್ಲಿ ಸಂಬಂಧಪಟ್ಟ ಪೊಲೀಸ್ ಠಾಣೆಗೆ ದೂರು ನೀಡಿದಲ್ಲಿ ಅಗತ್ಯ ಕಾನೂನು ಕ್ರಮ ಜರುಗಿಸಲಾಗುವುದು’’ ಎಂದು ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ.

         ತುಮಕೂರು ನಗರದ ಚಿಕ್ಕಪೇಟೆ ನಿವಾಸಿ ಹಾಗೂ ವಕೀಲ ಎಸ್.ಜಯಸಿಂಹ ಅವರು ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿಗಳಿಗೆ ಸಲ್ಲಿಸಿದ್ದ ದೂರಿಗೆ ಸಂಬಂಧಿಸಿದಂತೆ ತುಮಕೂರು ನಗರ ಪೊಲೀಸ್ ಸರ್ಕಲ್ ಇನ್ಸ್‌ಪೆಕ್ಟರ್ ಅವರು ‘ಹಿಂಬರಹ’ (ನಂ:ಎ (ಟಿ) ಎಚ್.ಪೆಟ್ಸಿ: 57/2018, ದಿನಾಂಕ: 15-10-2018) ನೀಡಿದ್ದು, ಅದರಲ್ಲಿ ಈ ‘ರವಸೆ ನೀಡಲಾಗಿದೆ.

         ‘‘ಯಾವುದೇ ದೂರು ಬಾರದೇ ಇದ್ದಲ್ಲಿ ಹೆಚ್ಚಿಗೆ ದರ ಕೇಳುವ ಆಟೋರಿಕ್ಷಾ ಚಾಲಕರ ವಿರುದ್ಧ ಕ್ರಮ ಜರುಗಿಸಲು ಸಾಧ್ಯವಾಗುವುದಿಲ್ಲ’’ ಎಂದು ಇನ್ಸ್‌ಪೆಕ್ಟರ್ ಹೇಳಿದ್ದಾರೆ.

         ‘‘ಯಾವುದೇ ಸಾರ್ವಜನಿಕರಿಗೆ ಆಟೋರಿಕ್ಷಾ ಚಾಲಕರಿಂದ ತೊಂದರೆ ಉಂಟಾದಲ್ಲಿ ನೇರವಾಗಿ ಸಂಬಂಧಪಟ್ಟ ಪೊಲೀಸ್ ಠಾಣೆಗೆ ದೂರು ನೀಡಿ ರಕ್ಷಣೆ ಪಡೆಯಬಹುದಾಗಿರುತ್ತದೆ’’ ಎಂದು ಸರ್ಕಲ್ ಇನ್ಸ್‌ಪೆಕ್ಟರ್ ಸಲಹೆ ನೀಡಿದ್ದಾರೆ.
ಈವರೆಗೆ 3126 ಆಟೋಗಳಿಗೆ

ಟಿ.ಟಿ.ಪಿ. ಸಂಖ್ಯೆ

        ‘‘ದಿನಾಂಕ 28-08-2018 ರಂದು ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತುಮಕೂರು ನಗರದಲ್ಲಿ ಸಂಚರಿಸುತ್ತಿರುವ ಆಟೋರಿಕ್ಷಾಗಳ ವಿರುದ್ಧ ನೀವು ನೀಡಿರುವ ಅರ್ಜಿಯು ವಿಚಾರಣೆಗಾಗಿ ಈ ಕಚೇರಿಗೆ ಬಂದಿರುತ್ತದೆ. ನೀವು ನೀಡಿರುವ ಅರ್ಜಿಯ ಬಗ್ಗೆ ಕ್ರಮ ಜರುಗಿಸಿದ್ದು, ತುಮಕೂರು ನಗರದಲ್ಲಿ ಸಂಚರಿಸುತ್ತಿರುವ ಆಟೋರಿಕ್ಷಾಗಳಿಗೆ ಟಿ.ಟಿ.ಪಿ. ನಂಬರ್ ನೀಡಲಾಗುತ್ತಿದ್ದು, ಅನಧಿಕೃತ ಆಟೋರಿಕ್ಷಾಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತಿದೆ. ಇದುವರೆವಿಗೂ 3,126 ಆಟೋರಿಕ್ಷಾಗಳಿಗೆ ಟಿ.ಟಿ.ಪಿ. ನಂಬರ್ ನೀಡಲಾಗಿರುತ್ತದೆ. ಸದರಿ ಕಾರ್ಯವು ಪ್ರಗತಿಯಲ್ಲಿರುತ್ತದೆ’’ ಎಂದು ಸದರಿ ‘ಹಿಂಬರಹ’ದಲ್ಲಿ ಅರ್ಜಿದಾರರಾದ ವಕೀಲ ಎಸ್.ಜಯಸಿಂಹ ಅವರಿಗೆ ಉತ್ತರ ನೀಡಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link