ಗುತ್ತಲ:
ಸ್ಥಳೀಯ ಪ್ರಸಿದ್ಧ ವಿರಭದ್ರೇಶ್ವರ ದೆವಸ್ಥಾನದಲ್ಲಿ ಮಂಗಳವಾರ ನಡೆದ ಅಗ್ನಿಕುಂಡ ಜಾತ್ರಾ ಮಹೋತ್ಸವದಲ್ಲಿ ನೂರಾರು ಭಕ್ತರು ಅಗ್ನಿಕುಂಡವನ್ನು ಹಾರುವ ಮೂಲಕ ಭಕ್ತಿ ಭಾವ ಮೆರೆದರು.
ದೇವಸ್ಥಾನದಿಂದ ಬೆಳಿಗ್ಗೆ ಪ್ರಾರಂಭವಾದ ಶ್ರೀ ವೀರಭದ್ರೇಶ್ವರ ದೇವರ ಪಲ್ಲಕ್ಕಿ ಮೆರವಣೆಗೆಯಲ್ಲಿ ನಾಡಿನ ನಾನಾ ಭಾಗಗಳಿಂದ ಆಗಮಿಸಿದ್ದ ಪುರುವಂತರು ಒಡಪುಗಳನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಹೇಳುತ್ತಾ ಸಾಗಿ ಸಂಜೆವೇಳೆಗೆ ದೇವಸ್ಥಾನಕ್ಕೆ ಬಂದ ನಂತರ ಅಗ್ನಿಕುಂಡ ಪ್ರವೇಶಿಸುವ ಮುನ್ನ ಸಂಪ್ರದಾಯದಂತೆ ಪೂಜಾ ವಿಧಿವಿಧಾನಗಳನ್ನು ನೇರೆವೇರಿಸುವ ಮೂಲಕ ಅಗ್ನಿಕುಂಡ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಅಗ್ನಿಕುಂಡದಲ್ಲಿ ಪುರುವಂತರಲ್ಲದೇ ನೂರಾರು ಭಕ್ತರು ಹಾಗೂ ಬಾಲಕರು ಹಾಯುವ ಮೂಲಕ ಭಕ್ತಿ ಮೆರೆದರು.
ಅಗ್ನಿಕುಂಡ ಕಾರ್ಯಕ್ರಮದ ನಂತರ ಜಾತ್ರಾಮೋಹತ್ಸವಕ್ಕೆ ಆಗಮಿಸಿದ ಸಹಸ್ರಾರು ಭಕ್ತರು ಶ್ರೀ ವೀರಭದ್ರೇಶ್ವರ ದೇವರ ದರ್ಶನ ಪಡೆದರು ಕಾರ್ಯಕ್ರಮದ ಅಂಗವಾಗಿ ಅನ್ನಸಂತರ್ಪಣೆಯನ್ನು ಹಮ್ಮಿಕೊಳ್ಳಲಾಗಿತ್ತು.
ನಾಲಿಗೆಯಲ್ಲಿ ನೂರಾರು ಮೀಟರ ದಾರ: ಅಗ್ನಿಕುಂಡ ಜಾತ್ರಾಮಹೋತ್ಸವದ ಅಂಗವಾಗಿ ನಡೆದ ಪುರುವಂತರ ಮೆರೆವಣೆಗೆಯಲ್ಲಿ ಅಜ್ಜಯ್ಯನ ಮಠದ ಹತ್ತಿರ ಪುರುವಂತರು ಒಡಪುಗಳನ್ನು ಹೇಳುತ್ತಿರುವಾಗ ಪುರುವಂತನೊಬ್ಬ ನೂರಾರು ಮೀಟರ ಉದ್ದದ ದಾರವನ್ನು ಉದ್ದನೆಯ ದಪ್ಪವಾದ ಸೂಜಿಯಲ್ಲಿ ಪೋಣಿಸಿದ್ದ ನಾಲಿಗೆಗೆ ಚುಚ್ಚಿಕೊಳ್ಳುತ್ತಿದ್ದಂತೆ ಎಲ್ಲೆಡ ಹರ ಹರ ಮಹಾದೇವ ಎಂಬ ಜಯಘೋಷ ಮತ್ತು ಶ್ರೀ ವೀರಭದ್ರೇಶ್ವರ ದೇವರ ಜಯಘೋಷಗಳು ಮೊಳಗಿದವು.
ಸಮಾಳದ ಶಭ್ದಕ್ಕೆ ತಕ್ಕಂತೆ ದಾರವನ್ನು ಎಳೆಯುತ್ತಾ ಪುರುವಂತರು ಕುಣಿಯುತ್ತಿದ್ದರೆ ನೋಡುಗರು ಜಯಕಾರ ಹಾಕುತ್ತಲೇ ಇದ್ದರು. ಗಮನ ಸೆಳೆದ ಗಜರಾಜ: ಮೆರೆವಣಿಗೆಗೆ ಆಗಮಿಸಿದ್ದ ಆನೆಯ ವಿವಿಧ ಭಂಗಿಗಳು ದೇವಸ್ಥಾನದ ಮುಂದೆ ಅದು ದೇವರಿಗೆ ಮಾಡುತ್ತಿದ್ದ ಪ್ರಣಾಮ ಎಲ್ಲರ ಗಮನ ಸೆಳೆದರು.ಮಕ್ಕಳಿಗೆ ಆನೆಯನ್ನು ಹತ್ತಿರದಿಂದ ನೋಡಿವ ಭಾಗ್ಯ ಸಿಕ್ಕಿತು.
