ತುಮಕೂರು:
ನಗರದ ಕಲ್ಪತರುವನದ ಶ್ರೀ ಶನೈಶ್ಚರ ಸ್ವಾಮಿಒ ಸೇವಾ ಚಾರಿಟಲ್ ಟ್ರಸ್ಟ್ ವತಿಯಿಂದ ಸೆಪ್ಟೆಂಬರ್ 3ರ ಸೋಮವಾರ ಬೆಳಗ್ಗೆ 10 ಗಂಟೆಗೆ ಶ್ರೀ ಶನೈಶ್ಚರ ಸ್ವಾಮಿಯ ಉತ್ಸವವನ್ನು ಹಮ್ಮಿಕೊಳ್ಳಲಾಗಿದ್ದು, ಉದ್ಘಾಟನೆಯನ್ನು ಬೆಲಗೂರಿನ ಶ್ರೀ ಅವಧೂತ ಸದ್ಗುರು ಬಿಂದು ಮಾಧವಶರ್ಮ ಸ್ವಾಮಿಗಳು ನೆರವೇರಿಸುವರು. ನಂತರ ಸ್ವಾಮಿಯ ಉತ್ಸವವು ತುಮಕೂರಿನ ರಾಜಬೀದಿಗಳಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ನೆರವೇರಲಿದೆ. ಶ್ರಾವಣ ಮಾಸದ ಶನಿವಾರದಂದು ಭಕ್ತಾದಿಗಳಿಂದ ಅನ್ನಸಂತರ್ಪಣೆ ನಡೆಯಲಿದೆ.








