ಶ್ರೀ ಹಾಲಸ್ವಾಮಿಗಳ ಜಾತ್ರೆ : ಕುಸ್ತಿ ಪಂದ್ಯದಲ್ಲಿ ಸೆಣಸುತ್ತಿರುವ ಕುಸ್ತಿ ಪಟುಗಳು

ಹರಪನಹಳ್ಳಿ :

      ಪಟ್ಟಣದ ವಾಲ್ಮೀಕಿನಗರದಲ್ಲಿ ಶ್ರೀ ಹಾಲಸ್ವಾಮಿಗಳ ಜಾತ್ರೆ ಪ್ರಯುಕ್ತ ನಡೆದ ಪ್ರಥಮ ದಿನದ ಕುಸ್ತಿ ಪಂದ್ಯದಲ್ಲಿ 52 ಜೊತೆ ಕುಸ್ತಿಗಳು ನಡೆದವು.

      ಇಂದು ನಡೆದ ತುರಿಸಿನ ಪಂದ್ಯದಲ್ಲಿ ಬಿಜಾಪುರದ ಪೈಲ್ವಾನ್ ಸಿದ್ದಪ್ಪ ಹಾಗೂ ಬೆಳಗಾವಿಯ ಕಿರಣ ಅವರ ಮಧ್ಯ ನಡೆದು ಸಿದ್ದಪ್ಪ ವಿಜಯಶಾಲಿಯಾಗಿ ನಗದು 11 ಸಾವಿರ ಪಡೆದರು.

      ಜಾತ್ರಾ ಮಹೋತ್ಸವ ಅಂಗವಾಗಿ ಅರಸೀಕೆರೆ ರಸ್ತೆಯ ಮಠದ ಹೊಲದಲ್ಲಿ ಅ.23 ಮತ್ತು 24ರಂದು ಪ್ರಸಿದ್ಧ ಪೈಲ್ವಾನ್ ಅವರಿಂದ ಬಯಲು ಜಂಗೀ ಕುಸ್ತಿ ಸ್ಪರ್ಧೆ ನಡೆಯತ್ತಿದೆ. 24 ರಂದು ನಡೆಯವ ಕುಸ್ತಿ ಪಂದ್ಯಗಳಿಗೆ ಜಮಖಂಡಿ, ಬೆಳಗಾಂ ಹಾಗೂ ಇನ್ನೂ ಹಲವಾರು ಊರುಗಳಿಂದ ಪ್ರಸಿದ್ದ ಕುಸ್ತಿ ಪಟುಗಳು ಭಾಗವಹಿಸಲಿದ್ದು ನಗದು 50 ಸಾವಿರಕ್ಕೂ ಹೆಚ್ಚು ಬಹುಮಾನಗಳು ಪಡೆಯಲಿದ್ದಾರೆ.

      ಈ ಸಂದರ್ಭದಲ್ಲಿ ಮುಖಂಡರಾದ ಶಿರಹಟ್ಟಿ ಬಸವರಾಜ, ಮಂಡಕ್ಕಿ ಸುರೇಶ್, ನಿಟ್ಟೂರು ದೊಡ್ಡ ಹಾಲಪ್ಪ, ಮ್ಯಾಕಿ ದುರುಗಪ್ಪ, ಕವಸರ ಬಸವರಾಜ, ಧ್ಯಾಮಜ್ಜಿ ದೊಡ್ಡ ಹನುಮಂತಪ್ಪ, ಕೇದರಸ್ವಾಮಿ, ರೈತ ಸಂಘದ ದ್ಯಾಮಜಿ ಹನುಮಂತಪ್ಪ, ಆಲೂರು ಹನುಮಂತಪ್ಪ, ಗುಂಡಿ ಮಂಜುನಾಥ ಸೇರಿದಂತೆ ಮೂರು ಕೇರಿಯ ಸಮಸ್ತ ದೈವಸ್ಥರು ಉಪಸ್ಥಿತರಿದ್ದರು.

     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link