ಸಂತ್ರಸ್ತರಿಗೆ ರೊಟ್ಟಿ ಬಿಸ್ಕತ್ತು ಸಂಗ್ರಹ

 ಹಾವೇರಿ :

ಕೊಡಗು ಮಡಕೇರಿ ಮಂಗಳೂರು ಭಾಗದಲ್ಲಿ ಭೀಕರ ಮಳೆ ಸುರಿದು ಕಷ್ಟದಲ್ಲಿರುವ ಸಂತ್ರಸ್ತರಿಗೆ ರೊಟ್ಟಿ, ಬಿಸ್ಕತ್ತು ದಿನವಹಿ ಆಹಾರ ವಸ್ತುಗಳ ಜೊತೆಗೆ ಔಷಧಿಯನ್ನೂ ಕೊಟ್ಟು ಮಾನವೀಯ ಅನುಕಂಪಕ್ಕೆ ನಗರದ ಸಾಂಸ್ಕøತಿಕ ಸಂಘಟನೆಗಳು ತೊರಿದವು.
ನಗರದಲ್ಲಿನ ಬಸ್ಸ್ ನಿಲ್ದಾಣದಲ್ಲಿ ಖಾಸಗಿ ವಾಹಿನಿಯೊಂದು ಕರೆ ನೀಡಿದ ಹಿನ್ನೆಲೆಯಲ್ಲಿ ಈ ಅಲ್ಪ ಸಹಾಯವನ್ನು ನಗರದ ಧ್ವನಿ ಸ್ವಧಾರಾ ಮಹಿಳಾ ಸಾಂತ್ವನ ಕೇಂದ್ರ, ಭಾರತ ಜ್ಞಾನ ವಿಜ್ಞಾನ ಸಮಿತಿ, ಇಡಾರಿ ಸೇವಾ ಸಂಸ್ಥೆ ಹಾಗೂ ಸಾಹಿತಿ ಕಲಾವಿದರ ಬಳಗದ ಪ್ರತಿ ನಿಧಿಗಳು ಬೆಂಗಳೂರು ಮೂಲಕ ಕಳುಹಿಸಿ ಕೊಟ್ಟರು. ಹಾನಗಲ್ಲನ ಹುರಕಡ್ಲಿ ದಂಪತಿಗಳು ಔಷಧಿ ಮತ್ತು ಆಹಾರವನ್ನು ಬಂದು ವಿತರಿಸಿದ್ದು ವಿಶೇಷವಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಇಡಾರಿ ಸಂಸ್ಥೆಯ ಪರಿಮಳಾ ಜೈನ್ ಇದೊಂದು ನೊಂದವರಿಗಾಗಿ ಅಳಿಲು ಸೇವೆ ಮಾತ್ರ ಎಂದರು. ಸಿಆರ್ ಮಾಳಗಿ, ಶ್ರೀಮತಿ ರೇಣುಕಾ ಗುಡಿಮನಿ, ಕರಿಯಪ್ಪ ಹಂಚಿನಮನಿ, ಜಿಎಂ ಓಂಕಾರಣ್ಣನವರ, ವಿಜಯಕುಮಾರ ದೊಡ್ಡಮನಿ, ಪೃಥ್ವಿರಾಜ ಬೆಟಗೇರಿ ಮತ್ತು ಹಿರಿಯ ಸಾಹಿತಿ ಸತೀಶ ಕುಲಕರ್ಣಿ ಮುಂತಾದವರು ಇದ್ದರು.

Recent Articles

spot_img

Related Stories

Share via
Copy link