ಹಾವೇರಿ :
ಜಿಲ್ಲೆಯ ಹಿರೇಕೆರೂರು ತಾಲೂಕಿನ ಕೋಡಮಗ್ಗಿ ಗ್ರಾಮದ ಬಳಿ ಸಂಶಯಾಸ್ಪದ ರೀತಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಕುಮಾರ ಯಲವದಹಳ್ಳಿ ಎಂಬುವರ ಜಮೀನಿನಲ್ಲಿ ಪತ್ತೆಯಾಗಿದ್ದು, ನಾಲ್ವತ್ತರಿಂದ ನಾಲ್ವತ್ತೈದು ವಯಸ್ಸಿನವನಿದ್ದಾನೆ ಎನ್ನಲಾಗುತ್ತಿದೆ.ಮೃತದೇಹದ ಪಕ್ಕದಲ್ಲಿ ವಿಷದ ಬಾಟಲಿ ಕಂಡು ಬಂದಿದ್ದು,ಸ್ಥಳಕ್ಕೆ ಹಿರೇಕೆರೂರು ಠಾಣೆ ಪೊಲೀಸರ ಭೇಟಿ, ಹಿರೇಕೆರೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿಕೋಂಡಿದ್ದಾರೆ.