ಸಂಸ್ಕಾರಯುತ ವ್ಯಕ್ತಿತ್ವವನ್ನು ರೂಪಿಸುವುದು ಶಿಕ್ಷಣದ ಉದ್ದೇಶ

ಹಾನಗಲ್ಲ :

              ಸಂಸ್ಕಾರಯುತ ವ್ಯಕ್ತಿತ್ವವನ್ನು ರೂಪಿಸುವುದು ಶಿಕ್ಷಣದ ಉದ್ದೇಶ, ತರಗತಿ ಪಠ್ಯಕ್ರಮವನ್ನು ಅಭ್ಯಸಿಸುವುದರ ಜೊತೆಗೆ ಸಾಮಾಜಿಕ ಕಳಕಳಿಯ ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳನ್ನು ಅನುಭವಶಾಲಿಗಳ್ನನಾಗಿಸಿ ಸಂಸ್ಕಾರಯುತ ನಾಗರೀಕರನ್ನಾಗಿ ಪರಿವರ್ತಿಸುತ್ತವೆ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ಕೆರಿಮತ್ತಿಹಳ್ಳಿಯ ಸಮಾಜಕಾರ್ಯ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರಶಾಂತ ಎಚ್.ವಾಯ್. ನುಡಿದರು.
               ಪಟ್ಟಣದ ಶ್ರೀ ಕುಮಾರೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತಣಾಡಿದ ಅವರು, ಆತ್ಮವಿಶ್ವಾಸವುಳ್ಳವರು ಇತಿಹಾಸ ನಿರ್ಮಿಸುತ್ತಾರೆ ಈ ಆತ್ಮವಿಶ್ವಾಸ ಬರುವುದು ಓದಿನಿಂದ. ಶಾಲಾ-ಕಾಲೇಜುಗಳು ದೇವಾಲಯಗಳಾದರೆ ಗ್ರಂಥಾಲಯವು ಗರ್ಭಗುಡಿಯಂತೆ ಆದ್ದರಿಂದ ಗ್ರಂಥಾಲಯದ ಸದುಪಯೋಗ ಪಡೆದು ಅಲ್ಲಿರುವ ಅನೇಕ ಪುಸ್ತಕಗಳನ್ನು ಓದಿ ತಮ್ಮ ಅನುಭವವನ್ನು ಹೆಚ್ಚಿಸಿಕೊಂಡು ಆತ್ಮವಿಶ್ವ್ವಾಸವನ್ನು ಗಟ್ಟಿಗೊಳಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
              ಸಂಸ್ಥೆಯ ಅಧ್ಯಕ್ಷ ಎ.ಎಸ್.ಬಳ್ಳಾರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಶಿಸ್ತು ಮತ್ತು ಸಮಯದ ಸದುಪಯೋಗ ಪಡಿಸಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವುದರ ಮೂಲಕ ಜೀವನದಲ್ಲಿ ಯಶಸ್ಸು ಕಾಣಬೇಕು ಎಂದರು.
                 ಪ್ರಾಚಾರ್ಯ ಪ್ರೊ. ಸಿ. ಮಂಜುನಾಥ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಷ್ಟ್ರಕವಿ ಕುವೆಂಪುರವರ ಕವಿವಾಣಿಯಂತೆ ವಿದ್ಯಾರ್ಥಿಗಳು ಭತ್ತ ತುಂಬುವ ಚೀಲಗಳಾಗದೇ, ಭತ್ತ ಬೆಳೆಯುವ ಗದ್ದೆಗಳಾಗಬೇಕು ಅಂದರೆ ಜ್ಞಾನಾರ್ಜನೆಯ ಜೊತೆಗೆ ಕೌಶಾಲ್ಯಾಭಿವೃದ್ಧಿಯತ್ತ ಗಮನ ಹರಿಸಬೇಕು ಹಾಗೂ ವಿದ್ಯಾರ್ಥಿ ಜೀವನ ನಿಜವಾಗಲೂ ಬಂಗಾರದ ಜೀವನವಲ್ಲ ಆದರೆ ಇದು ಕಬ್ಬಿಣದ ಕಡಲೆಯ ಜೀವನ ಏಕೆಂದರೆ ಇಲ್ಲಿ ಯಾರು ಪರಿಶ್ರಮವಹಿಸಿ ತಪ್ಪಿಸ್ಸಿನ ರೂಪದಲ್ಲಿ ವಿದ್ಯಾರ್ಜನೆಗೈದು ಯಶಸ್ವಿಯಾಗುತ್ತಾರೋ ಅವರಿಗೆ ಮುಂದಿನ ಜೀವನ ಬಂಗಾರಮವಾಗಿಸಿಕೊಳ್ಳಲು ಸಾಧ್ಯ ಎಂದರು.
ಸಂಸ್ಥೆಯ ಉಪಾಧ್ಯಕ್ಷ ಪಿ.ವಾಯ್.ಗುಡಗುಡಿ ಒಕ್ಕೂಟದ ಪದಾಧಿಕಾರಿಗಳಾಗಿ ಆಯ್ಕೆಯಾದವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ಕರ್ನಾಟಕ ವಿಶ್ವವಿದ್ಯಾಲಯದ 2016-17ನೇ ಸಾಲಿನ ಬಿ.ಎ. ಪರೀಕ್ಷೆಯಲ್ಲಿ ವಿಶ್ವವಿದ್ಯಾಲಯಕ್ಕೆ 6ನೇ ರ್ಯಾಂಕ ಪಡೆದ ಕಾಲೇಜಿನ ವಿದ್ಯಾರ್ಥಿನಿ ಎಸ್.ಜಿ. ಪೂರ್ಣಿಮಾ ಅವರನ್ನು ಸನ್ಮಾನಿಸಲಾಯಿತು.
            ಕಾರ್ಯಕ್ರಮದಲ್ಲಿ ನಿರ್ದೇಶಕರುಗಳಾದ ಮಹೇಶ ಕಾಗಿನೆಲ್ಲಿ, ಹನುಮಂತಪ್ಪ ಮಲಗುಂದ, ರಾಮಣ್ಣ ತಿತ್ತಿ, ವಿದ್ಯಾರ್ಥಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿಗಳಾದ ಅರುಣ ಹುಳ್ಳಿಕಾಶಿ ಮತ್ತು ರಂಜಿತಾ ಕೆಂಗಣ್ಣನವರ ಪಾಲ್ಗೊಂಡಿದ್ದರು.
ವಿದ್ಯಾರ್ಥಿನಿ ಚಿತ್ಕಲಾ ಪಾಟೀಲ ಪ್ರಾರ್ಥನೆ ಹಾಡಿದರು. ಜಿ. ಭರತ್‍ಕುಮಾರ ಸ್ವಾಗತಿಸಿದರು. ವಿದ್ಯಾರ್ಥಿ ಒಕ್ಕೂಟದ ಕಾರ್ಯಾಧ್ಯಕ್ಷ ಡಾ. ಎಂ.ಎಚ್. ಹೊಳಿಯಣ್ಣನವರ ಪ್ರಾಸ್ತಾವಿಕ ನುಡಿದರು. ಎನ್.ಎಸ್.ಎಸ್. ಅಧಿಕಾರಿ ಡಾ. ಪ್ರಕಾಶ ಹೊಳೇರ ಅತಿಥಿಗಳನ್ನು ಪರಿಚಯಿಸಿದರು. ಕೀರ್ತನಾ ಪೂಜಾರ ಮತ್ತು ಅಕ್ಷತಾ ಕೂಡಲಮಠ ಕಾರ್ಯಕ್ರಮ ನಿರೂಪಿಸಿದರು. ವೀಣಾ ಹಿರೇಮಠ ವಂದಿಸಿದರು.

Recent Articles

spot_img

Related Stories

Share via
Copy link