ಚಿಕ್ಕಮಗಳೂರು:
ಕಳೆದ ಎರಡು ತಿಂಗಳಿನಿಂದ ಸುರಿಯುತ್ತಿರುವ ಭಾರಿ ಮಳೆಯ ಅಬ್ಬರ ಮುಗಿದ ಬಳಿಕ ಸೂರ್ಯನನ್ನು ನೋಡಿ ಮಲೆನಾಡಿಗರಿಗೆ ಆತಂಕವೆಲ್ಲಾ ದೂರಾಗಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಪಂಚಾಂಗದ ಪ್ರಕಾರ ಪುನರ್ವಸು ಮಳೆ ಆರಂಭವಾದಾಗಿನಿಂದ ಪುನರ್ವಸು, ಕುಂಭದ್ರೋಣ ಹಾಗೂ ಆಶ್ಲೇಷ ಮಳೆಯ ಅಬ್ಬರಕ್ಕೆ ಕಂಗಾಲಾಗಿದ್ದ ಮಲೆನಾಡಿಗರು ಸೂರ್ಯನನ್ನೆ ನೋಡಿರಲಿಲ್ಲ. ಇಂದು ಬೆಳಗ್ಗೆಯಿಂದ ಸೂರ್ಯನನ್ನು ಕಂಡು ಮಲೆನಾಡಿಗರ ಮೊಗದಲ್ಲಿ ನಗು ಮೂಡಿದೆ. ನಿನ್ನೆಯಿಂದ ಮಳೆಯ ಪ್ರಮಾಣ ಸಂಪೂರ್ಣ ಕಡಿಮೆಯಾಗಿದ್ದು, ಮಲೆನಾಡಿಗರು ಮಳರಾಯನಿಗೆ ಉಘೇ ಎಂದಿದ್ದಾರೆ.
