ತಿಪಟೂರು
ನಗರದ ಸತ್ಯಕುಮಾರ್ ರಿಲೀಫ್ ಫೌಂಡೇಶನ್ ಮತ್ತು ಕುಮಾರ ಆಸ್ಪತ್ರೆಯ ಡಾ. ಶ್ರೀಧರ್‍ರವರು ಇಲ್ಲಿ ತಮ್ಮ ನಿಸ್ವಾರ್ಥ ಸೇವೆಯನ್ನು ಸಲ್ಲಿಸುವುದರ ಜೊತೆಗೆ ಕೊಡಗು ನೆರೆಪೀಡಿತರಿಗಾಗಿ ಒಂದು ಲಾರಿಯಲ್ಲಿ ಅಗತ್ಯ ಸಾಮಾನು ಸರಂಜಾಮುಗಳನ್ನು ತಮ್ಮ ಕೆಲವು ಉತ್ಸಾಹಿ ಯುವಕರ ತಂಡದೊಂದಿಗೆ ಕುಶಾಲನಗರ, ಸೋಮವಾರಪೇಟೆಯ ಸುತ್ತಮುತ್ತಲಿನ ಕೆಲವುಹಳ್ಳಿಗಳಿಗೆ ಹೋಗಿ, ಅವುಗಳನ್ನು ಸ್ವತಃ ತಮ್ಮ ತಂಡದ ಜೊತೆ ಅಡುಗೆ ತಯಾರಿಸಿ ಕೊಟ್ಟು, ಅಲ್ಲಿನ ಜನರಿಗೆ ವೈದ್ಯಕೀಯ ಚಿಕಿತ್ಸೆಯನ್ನು ನೀಡವುದರ ಮೂಲಕ ತಮ್ಮ ನಿಸ್ವಾರ್ಥ ಸೇವೆಯನ್ನು ಸಲ್ಲಿಸಿದ್ದಾರೆ.