ಸತ್ಯ ಹಾಗೂ ಅಹಿಂಸೆಯನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ನಮಗೆ ದೊರೆತಿರುವ ಸ್ವಾತಂತ್ರ ಅರ್ಥಪೂರ್ಣವಾಗಲಿದೆ : ಶಾಸಕ ವಿರೂಪಾಕ್ಷಪ್ಪ

ಬ್ಯಾಡಗಿ

                     ಪ್ರತಿಯೊಬ್ಬರೂ ಸತ್ಯ ಹಾಗೂ ಅಹಿಂಸೆಯನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ನಮಗೆ ದೊರೆತಿರುವ ಸ್ವಾತಂತ್ರ ಅರ್ಥಪೂರ್ಣವಾಗಲಿದೆ ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು.

                    ಅವರು ಸ್ಥಳೀಯ ತಾಲೂಕಾ ಕ್ರೀಡಾಂಗಣದಲ್ಲಿ 72ನೇ ಸ್ವಾತಂತ್ರ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು ಸ್ವಾತಂತ್ರವೆಂದರೆ ಅದು ಪ್ರಜಾತಂತ್ರ ವ್ಯವಸ್ಥೆಯ ಅಡಿಪಾಯ, ಒಬ್ಬರನ್ನೊಬ್ಬರೂ ಗೌರವಿಸುವ, ಸರ್ವ ಜನತೆಯ ಹಿತವನ್ನು ಕಾಯುವ ಮೂಲಭೂತ ಹಕ್ಕುಗಳನ್ನು ಹಾಗೂ ನ್ಯಾಯವನ್ನು ಎತ್ತಿಹಿಡಿಯುವಂತದ್ದಾಗಿದೆ, ಸ್ತ್ರಿಯರನ್ನು ಗೌರವಿಸುವ ಮತ್ತು ಸಹಿಷ್ಣುತೆಯನ್ನು ಉತ್ತೇಜಿಸುವಂತ ಕಾರ್ಯಗಳು ಪ್ರತಿಯೊಬ್ಬರಲ್ಲಿ ಮೂಡಿದಾಗ ಮಾತ್ರ ನಮಗೆ ದೊರೆತಿರುವ ಸ್ವಾತಂತ್ರ ಸಫಲವಾಗಲಿದೆ.

                   ಸತ್ಯ, ಅಹಿಂಸೆಯ ತತ್ವಾಧಾರದ ಮೇಲೆ ಪಡೆದುಕೊಂಡಿರುವ ಸ್ವಾತಂತ್ರ್ಯವನ್ನು ಸದುಪಯೋಗಪಡಿಸಿಕೊಳ್ಳುವ ಹೊಣೆಗಾರಿಕೆ ಪ್ರತಿಯೊಬ್ಬ ಭಾರತೀಯನ ಮೇಲಿದೆ, ಇದನ್ನರಿತುಕೊಂಡು ಯುವಜನತೆ ಸದೃಡ ಹಾಗೂ ಸುಂದರ ಭಾರತವನ್ನು ಕಟ್ಟಲು ಮುಂದಾಗಬೇಕಿದೆ ಎಂದರು.

                  ತಾ.ಪಂ.ಅಧ್ಯಕ್ಷೆ ಸವಿತಾ ಸುತ್ತಕೋಟಿ ಮಾತನಾಡಿ ನಮಗೆ ದೊರೆತಿರುವ ಸ್ವಾತಂತ್ರ ಅನೇಕರ ತ್ಯಾಗ, ಬಲಿದಾನದ ಫಲವಾಗಿದೆ. ಮಾಹಾತ್ಮಗಾಂಧಿ, ಜವಹಾರಲಾಲ್ ನೆಹರೂ, ಲಾಲಬಹದ್ದೂರ ಶಾಸ್ತ್ರಿ, ಹಾಗೂ ವಲ್ಲಭಾಯಿ ಪಟೇಲ ಸೇರಿದಂತೆ ಅನೇಕ ದೇಶ ಭಕ್ತರು ಸ್ವಾತಂತ್ರ ಗಳಿಸಲು ನೆತ್ತರು ಹರಿಸಿದ ಫಲವಾಗಿ ನಮಗೆ ಸ್ವಾತಂತ್ರ ದೊರೆಯಲು ಸಾಧ್ಯವಾಗಿದೆ. ತ್ಯಾಗ ಬಲಿದಾನದಿಂದ ಪಡೆದಸ್ವಾತಂತ್ರ್ಯವನ್ನು ಸ್ವೇಚ್ಛಾಚರಕ್ಕೆ ಉಪಯೋಗಿಸದೇ ದೇಶವನ್ನು ಅಭಿವೃದ್ಧಿಶೀಲ ರಾಷ್ಟ್ರವನ್ನಾಗಿಸುವ ನಿಟ್ಟಿನಲ್ಲಿಕಾರ್ಯೋನ್ಮುಖರಾಗಬೇಕಿದೆ.

                ಯುವಕರು ದೇಶ ಕಟ್ಟುವ ಕಾಯಕದಲ್ಲಿ ಮುಂದಾಗಬೇಕು. ಯುವಜನತೆ ಎಲ್ಲ ಧರ್ಮಗಳನ್ನು ಗೌರವಿಸುವ ಮುೂಲಕ ಎಲ್ಲ ಸಂಸ್ಕøತಿಗಳ ತಿರುಳನ್ನು ತಿಳಿದುಕೊಳ್ಳಬೇಕಿದೆ. ವಿವಿಧತೆಯಲ್ಲಿ ಏಕತೆ ಎಂಬುದು ನಮ್ಮ ದೇಶದ ಮಂತ್ರವಾಗಬೇಕು. ಜಾತಿ ಭೇದವಿಲ್ಲದ, ಲಿಂಗತಾರತಮ್ಯವಿಲ್ಲದ ಸರ್ವ ಧರ್ಮ ಸಮಾನ ಭಾವನೆಯನ್ನು ಪ್ರತಿಯೊಬ್ಬರೂ ಹೊಂದಬೇಕೆಂದರು.

                ಪುರಸಭಾ ಸದಸ್ಯ ಮುರಿಗೆಪ್ಪ ಶೆಟ್ಟರ ಮಾತನಾಡಿ ಬ್ರಿಟೀಷರ ಕಪಿ ಮುಷ್ಠಿಯಿಂದ ಸ್ವಾತಂತ್ರ್ಯ ಪಡೆಯಲು ಅನೇಕ ಹೋರಾಟಗಾರರು ತಮ್ಮಜೀವವನ್ನೇತ್ಯಾಗ ಮಾಡಿದ್ದಾರೆ, ಹೋರಾಟದ ಫಲವಾಗಿ ಸಿಕ್ಕಿರುವ ಸ್ವಾತಂತ್ರ್ಯವನ್ನುಉಳಿಸಿಕೊಳ್ಳುವ ಮಹತ್ತರ ಹೊಣೆಗಾರಿಕೆ ಇಂದಿನ ಯುವ ಪೀಳಿಗೆ ಗುರುತರಜವಾಬ್ದಾರಿಯಾಗಿದೆ ಎಂದರು.

                 ತಹಶೀಲದಾರ ಶಿವಶಂಕರ ನಾಯಕ ಧ್ವಜಾರೋಹಣ ನೆರವೇರಿಸಿ ಮಾತನಾಡಿ ವಿದ್ಯಾರ್ಥಿಗಳು ಹಾಗೂ ಯುವಜನಾಂಗ ದೇಶಾಭಿಮಾನ ಬೆಳೆಸಿಕೊಳ್ಳುವ ಮೂಲಕ ದೇಶದಉತ್ತಮ ಪ್ರಜೆಯಾಗಿ ಹೊರಹೊಮ್ಮಬೇಕು, ದೇಶವು ಯಾವುದೇ ಕ್ಷೇತ್ರದಲ್ಲಿ ಹಿಂದುಳಿದಿದ್ದರೆ ಯುವಶಕ್ತಿಯ ಸದ್ಭಳಕೆಯಾಗದಿರುವುದೇ ಅದಕ್ಕೆ ಪ್ರಮುಖಕಾರಣವಾಗಿದೆ, ಯುವಕರಿಂದ ಸದೃಢರಾಷ್ಟ್ರ ನಿರ್ಮಾಣ ಸಾಧ್ಯ, ಈ ನಿಟ್ಟಿನಲ್ಲಿಯುವಕರು ಬೇಜಬ್ದಾರಿ ವರ್ತನೆ ಯಿಂದ ಹೊರ ಬರುವ ಮೂಲಕ ದೇಶವನ್ನು ಮುನ್ನಡೆಸುವ ಹೊಣೆಯನ್ನು ಹೊರಬರಬೇಕಾಗಿದೆಎಂದರು.

                 ಕಾರ್ಯಕ್ರಮದ ಪೂರ್ವದಲ್ಲಿ ಎನ್‍ಸಿಸಿ, ಸ್ಕೌಟ್&ಗೈಡ್, ಸೇವಾದಳ ಸೇರಿದಂತೆ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ಆಕರ್ಷಕ ಪೆರೇಡ್ ನಡೆಯಿತು, ಇದೇ ಸಂದರ್ಭದಲ್ಲಿ ಸ್ವಾತಂತ್ರ್ಯಯೋಧರಾದ ಮಳ್ಳಪ್ಪ ಕೊಪ್ಪದ, ನಾಗಪ್ಪ ಕುಲಕರ್ಣಿ ಹಾಗೂ ನಿವೃತ್ ಸೈನಿಕರನ್ನು ಸನ್ಮಾನಿಸಿ ಗೌರವಿಸಲಾಯಿತು.

                 ವೇದಿಕೆಯಲ್ಲಿ ಪುರಸಭಾ ಅಧ್ಯಕ್ಷ ಬಸವಣ್ಣೆಪ್ಪ ಛತ್ರದ, ಉಪಾಧ್ಯಕ್ಷೆ ದ್ರಾಕ್ಷಾಯಣೆಮ್ಮ, ಜಿ.ಪಂ.ಸದಸ್ಯೆ ಸುಮಂಗಲಾ ಪಟ್ಟಣಶೆಟ್ಟಿ, ತಾ.ಪಂ.ಉಪಾಧ್ಯಕ್ಷೆಶಾಂತಮ್ಮ ದೇಸಾಯಿ, ಬಿಜೆಪಿ ತಾಲೂಕಾ ಅಧ್ಯಕ್ಷ ಶಂಕ್ರಣ್ಣ ಮಾತನವರ, ಕಾಂಗ್ರೆಸ್ ತಾಲೂಕಾ ಅಧ್ಯಕ್ಷ ಬೀರಣ್ಣ ಬಣಕಾರ, ರಮೇಶ ಸುತ್ತಕೋಟಿ, ರಾಮಣ್ಣ ಕೋಡಿಹಳ್ಳಿ, ದುರ್ಗೇಶ ಗೋಣೆಮ್ಮನವರ, ಸುರೇಶ ಅಸಾದಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

                 ಪಥಸಂಚಲನದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಶಾಲೆಗಳಿಗೆ ಬಹುಮಾನ ನೀಡಿಗೌರವಿಸಲಾಯಿತು, ಶಿಕ್ಷಕ ಪ್ರಕಾಶ ಕೊರಮರ ಹಾಗೂ ಶಾಲಾ ಮಕ್ಕಳು ನಾಡಗೀತೆ ಹೇಳಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥಸ್ವಾಮಿ ಸ್ವಾಗತಿಸಿದರು, ಶಿಕ್ಷಕ ಬಿ.ಎಫ್.ದೊಡ್ಮನಿ ನಿರೂಪಿಸಿದರು.ಕ್ಷೇತ್ರ ಸಮನ್ವಯಾಧಿಕಾರಿಎಂ.ಎಫ್.ಬಾರ್ಕಿ ವಂದಿಸಿದರು.

Recent Articles

spot_img

Related Stories

Share via
Copy link