ಸಮಾಜದಲ್ಲಿ ಸಮಾನತೆಯ ಸಾರವನ್ನು ಎಲ್ಲಾ ಸಮುದಾಯಕ್ಕೆ ನೀಡಿದ ಜೆಡಿಎಸ್ ಪಕ್ಷಕ್ಕೆ ಬೆಂಬಲ ನೀಡಿ

ಚಳ್ಳಕೆರೆ

              ಸಮಾಜದಲ್ಲಿ ಎಲ್ಲರಿಗೂ ಸಮಾನತೆಯ ಆಧಾರದ ಮೇಲೆ ಸೌಲಭ್ಯಗಳು ದೊರೆಯುವಂತಾಗಬೇಕು ಎಂಬುವುದನ್ನು ಕಾರ್ಯರೂಪಕ್ಕೆ ತಂದಿದ್ದೇ ಜೆಡಿಎಸ್ ಪಕ್ಷ. ನಗರಸಭಾ ಚುನಾವಣೆಯಲ್ಲಿ ಹೆಚ್ಚು ಸಮಸ್ಯೆಗಳಿಗೆ ಸ್ಪಂಧಿಸುವ ಸಮರ್ಥ ಯುವ ಅಭ್ಯರ್ಥಿಗಳು ಚುನಾವಣೆ ಕಣದಲ್ಲಿದ್ದು, ಮತದಾರ ಬಂಧುಗಳು ವಾರ್ಡ್‍ಗಳ ಅಭಿವೃದ್ಧಿಗಾಗಿ ಯುವ ಜನಾಂಗವನ್ನು ಬೆಂಬಲಿಸಬೇಕೆಂದು ನಗರದ 29ನೇ ವಾರ್ಡ್‍ನ ಜೆಡಿಎಸ್ ಅಭ್ಯರ್ಥಿ ಎಚ್.ಪ್ರಶಾಂತ್‍ಕುಮಾರ್(ಪಚ್ಚಿ) ಮತದಾರರಲ್ಲಿ ವಿನಂತಿಸಿದ್ದಾರೆ.

              ಅವರು, ಶನಿವಾರ ನಗರದ 29ನೇ ವಾರ್ಡ್‍ನಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಇದೇ ಮೊದಲ ಬಾರಿಗೆ ಸ್ಪರ್ಧಿಸುವ ಮೂಲಕ ರಾಜಕೀಯ ಕ್ಷೇತ್ರಕ್ಕೆ ಕಾಲಿಸಿರಿಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯೂ ಸೇರಿದಂತೆ ಜೆಡಿಎಸ್ ಪಕ್ಷದ ಬಹುತೇಕ ಎಲ್ಲಾ ಚುನಾವಣೆಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಿದ್ದು, ಕ್ಷೇತ್ರದ ಮತದಾರರ ಹಾಗೂ ಪಕ್ಷದ ಮುಖಂಡ ಒತ್ತಾಯದ ಮೇರೆಗೆ 29ನೇ ವಾರ್ಡ್‍ನಿಂದ ಸ್ಪರ್ಧಿಸಿರುವುದಾಗಿ ಅವರು ತಿಳಿಸಿದರು. ಈಗಾಗಲೇ ಕಳೆದ ಮೂರು ದಿನಗಳಿಂದ ಕ್ಷೇತ್ರ ವ್ಯಾಪ್ತಿಯಲ್ಲಿ ವ್ಯಾಪಕ ಪ್ರಚಾರ ಕೈಗೊಂಡಿದ್ದು, ಈ ಬಾರಿ ಈ ವಾರ್ಡ್‍ನ ಎಲ್ಲಾ ಮತದಾರರು ಜೆಡಿಎಸ್ ಪಕ್ಷದ ಪರವಾಗಿ ಮತ ಚಲಾಯಿಸುತ್ತಾರೆಂದು ವಿಶ್ವಾಸ ನನಗೆ ಇದೆ ಎಂದರು. 

               ಈಗಾಗಲೇ 29ನೇ ವಾರ್ಡ್ ವ್ಯಾಪ್ತಿಯಲ್ಲಿ ಮನೆ ಮನೆಗೂ ಭೇಟಿ ನೀಡಿ ಮಹಿಳೆಯರು ಮತ್ತು ಯುವ ಮತದಾರರನ್ನು ವಿನಂತಿಸಿದ್ದೇನೆ. ಕ್ಷೇತ್ರದ ಮತದಾರರು ನನ್ನ ಮೇಲೆ ವಿಶ್ವಾಸವಿಟ್ಟು ಅತಿಹೆಚ್ಚು ಮತಗಳಿಂದ ನನ್ನನು ನಗರಸಭಾ ಸದಸ್ಯರಾಗಿ ಆಯ್ಕೆ ಮಾಡುತ್ತಾರೆಂಬ ವಿಶ್ವಾಸ ನನಗೆ ಇದೆ. ಕಳೆದ ಕೆಲವು ವರ್ಷಗಳಿಂದ 29ನೇ ವಾರ್ಡ್‍ನ ಹಲವಾರು ಮೂಲಭೂತ ಸಮಸ್ಯೆಗಳಿಂದ ಪ್ರಾಮಾಣಿಕವಾಗಿ ಸ್ಪಂದಿಸಿದ್ದೇನೆ. ಈ ಭಾಗದ ಮತದಾರರ ಹಲವಾರು ಭೇಡಿಕೆಗಳ ಬಗ್ಗೆ ನಿರಂತರ ಹೋರಾಟ ನಡೆಸಿದ್ದೇನೆ ಎಂದರು.
ರಾಷ್ಟ್ರೀಯ ಜೆಡಿಎಸ್ ಅಧ್ಯಕ್ಷರಾದ ಎಚ್.ಡಿ.ದೇವೇಗೌಡರು ತಮ್ಮ ಅಧಿಕಾರ ಅವಧಿಯಲ್ಲಿ ರಾಜ್ಯದ ಹಲವಾರು ಸಮಸ್ಯೆಗಳ ಬಗ್ಗೆ ಉತ್ತಮವಾಗಿ ಸ್ಪಂದಿಸಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಹ ರಾಜ್ಯದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಪ್ರಾದೇಶಿಕ ಪಕ್ಷಗಳಲ್ಲಿ ಜೆಡಿಎಸ್ ಪಕ್ಷ ಹೆಚ್ಚು ಶಕ್ತಿಯುತವಾಗಿದ್ದು, ನಗರದ ಅಭಿವೃದ್ಧಿಗೆ ಸಾಧ್ಯವಾದಷ್ಟು ಮಟ್ಟಿಗೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಲಿದೆ. ಕ್ಷೇತ್ರದ ಮತದಾರರು ಜೆಡಿಎಸ್ ಪಕ್ಷದ ಅಭ್ಯರ್ಥಿಯಾದ ನನಗೆ ಹೆಚ್ಚು ಮತಗಳನ್ನು ನೀಡುವ ಮೂಲಕ ಈ ವಾರ್ಡ್‍ನ ನಗರಸಭಾ ಸದಸ್ಯರಾಗಿ ಆಯ್ಕೆ ಮಾಡಲು ಸಹಕರಿಸಬೇಕೆಂದು ಮನವಿ ಮಾಡಿದರು. 

             ಜೆಡಿಎಸ್ ಜಿಲ್ಲಾಧ್ಯಕ್ಷ ಯಶೋಧರ, ತಾಲ್ಲೂಕು ಅಧ್ಯಕ್ಷ ಪಿ.ತಿಪ್ಪೇಸ್ವಾಮಿ, ಜೆಡಿಎಸ್‍ರಾಜ್ಯ ದುರೀಣ ಎಂ.ಭೀಮಪ್ಪ, ಕಾರ್ಯಾಧ್ಯಕ್ಷ ಹೆಗ್ಗೆರೆ ಆನಂದಪ್ಪ, ಯುವ ಉದ್ಯಮಿ ಕೆ.ಸಿ.ವೀರೇಂದ್ರ(ಪಪ್ಪಿ), ಪರಾಜಿತ ಎಂ.ರವೀಶ್‍ಕುಮಾರ್, ಕೆಜಿಎನ್.ಮುಜೀಬ್, ಸೋಮಶೇಖರಮಂಡಿಮಠ ಮುಂತಾದವರ ಸಹಕಾರ ಮತ್ತು ಮಾರ್ಗದರ್ಶನದಲ್ಲಿ ಚುನಾವಣೆಯಲ್ಲಿ ಜಯಗಳಿಸುವ ವಿಶ್ವಾಸವಿದೆ ಎಂದರು. ಈ ಸಂದರ್ಭದಲ್ಲಿ ನಾಗರಾಜುರೆಡ್ಡಿ, ಗೌಸ್‍ಫೀರ್, ತಿಮ್ಮಾರಾಜು, ಖಾದರ್‍ಭಾಷ, ಸಾರಾ, ಅನ್ವರ್ ಭಾಷ ಲಕ್ಷ್ಮಣ್ ಮುಂತಾದವರು ಇದ್ದರು.

Recent Articles

spot_img

Related Stories

Share via
Copy link