ಚಳ್ಳಕೆರೆ
ಶಿಕ್ಷಣ ಎಂಬುವುದು ಸಮಾಜದಲ್ಲಿ ಪರಿವರ್ತನೆ ತರುವಂತಹ ಸರ್ವಶಕ್ತಿ ಸಾಧನವಾಗಿದೆ. ಶಿಕ್ಷಣವೇ ಇಲ್ಲದ ಸಮಾಜವನ್ನು ಊಹಿಸಿಕೊಳ್ಳಲು ಕಷ್ಟವಾಗುತ್ತದೆ. ಕಲುಷಿತಗೊಂಡ ಸಮಾಜವನ್ನು ಶಿಕ್ಷಣದಿಂದ ಮಾತ್ರ ಶುದ್ದೀಕರಿಸಲು ಸಾಧ್ಯ. ಶಿಕ್ಷಕರ ಸಮೂಹ ನಾಡಿನ ಜನರ ಕಲ್ಯಾಣವನ್ನು ಬಯಸುವ ಮನಸ್ಸುಳ್ಳವರಾಗಬೇಕು. ನೀವು ನೀಡುವ ಶಿಕ್ಷಣದಿಂದ ಮಾತ್ರ ನಾವು ಸಮಾಜದಲ್ಲಿ ಪ್ರಗತಿ ಕಾಣಲು ಸಾಧ್ಯವಾಗುತ್ತದೆ. ಶಿಕ್ಷಕ ವೃತ್ತಿ ಪವಿತ್ರವಾದದ್ದು ಹಾಗೂ ಘನತೆವುಳ್ಳದ್ದಾಗಿದ್ದು, ಇದನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಎಲ್ಲಾ ಶಿಕ್ಷಕರು ಚಿಂತನೆ ನಡೆಸಬೇಕೆಂದು ಶಾಸಕ ಟಿ.ರಘುಮೂರ್ತಿ ತಿಳಿಸಿದರು.
ಅವರು, ಬುಧವಾರ ಇಲ್ಲಿನ ಗುರುಭವನದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಹಯೋಗದಲ್ಲಿ ಡಾ.ಸರ್ವಪಲ್ಲಿ ರಾಧಕೃಷ್ಣ ಜನ್ಮ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರತಿನಿತ್ಯವೂ ಶಿಕ್ಷಕನು ಮಾಡುವ ಪ್ರತಿಯೊಂದು ಕಾರ್ಯವೂ ಶ್ರೇಷ್ಠ ಮಟ್ಟದ್ದಾಗಿರುತ್ತದೆ. ನೀವು ನೀಡುವ ಶಿಕ್ಷಣ ಸಮಾಜದ ಪರಿವರ್ತನೆಗೆ ನಾಂದಿಯಾಗುತ್ತದೆ. ಬೇರೆ ಎಲ್ಲಾ ಕಾರ್ಯಗಳಿಗಿಂತ ಶಿಕ್ಷಕರುನಿರ್ವಹಿಸುವ ಕಾರ್ಯ ಹೆಮ್ಮೆ ಪಡುವಂತದ್ದು. ನಾನು ಕಳೆದ ಆರು ವರ್ಷಗಳಿಂದ ಈ ಕ್ಷೇತ್ರದ ಶಾಸಕನಾಗಿ ಕಾರ್ಯನಿರ್ವಹಿಸಲು ಶಿಕ್ಷಕರ ಸಮೂಹವೇ ನನಗೆ ಪ್ರೇರಣೆ. ಸಮಾಜದಲ್ಲಿ ಯಾವುದೇ ಉನ್ನತ್ತ ಸ್ಥಾನಮಾನ ಹೊಂದಿದ ಆ ವ್ಯಕ್ತಿ ತನಗೆ ಜ್ಞಾನದ ಬೆಳಕನ್ನು ನೀಡಿದ ಶಿಕ್ಷಕರನ್ನು ಗೌರವಿಸುವ ವೈಶಾಲತೆಯನ್ನು ಹೊಂದಿರುತ್ತಾನೆ. ಅದು ಶಿಕ್ಷಕರಿಗೆ ಸದಾಕಾಲ ಸಲ್ಲುವ ಅತ್ಯುತನ್ನತ ಗೌರವವಾಗಿದೆ. ಶಿಕ್ಷಕರ ಯಾವುದೇ ರೀತಿಯ ಸಮಸ್ಯೆಗಳಿದ್ದಲ್ಲಿ ಅದಕ್ಕೆ ಸ್ಪಂದಿಸುವ ಭರವಸೆಯನ್ನು ಅವರು ನೀಡಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ವಿಶ್ರಾಂತ ಕುಲ ಸಚಿವ ಡಾ.ಶ್ರೀಕಾಂತ್ ಕೂಡಿಗಿ ಮಾತನಾಡಿ, ಶಿಕ್ಷಕ ವೃತ್ತಿಯ ಬಗ್ಗೆ ಯಾವುದೇ ಸಮಾಜ ಕೀಳು ಭಾವನೆಯನ್ನು ತಾಳದೇ ಇರಲು ಪ್ರಮುಖ ಕಾರಣ ಅವರು ನೀಡುವ ಜ್ಞಾನದ ಬೆಳಕು. ಇತ್ತೀಚಿನ ದಿನಗಳಲ್ಲಿ ಮಾತ್ರ ಶಿಕ್ಷಕ ಮತ್ತು ವಿದ್ಯಾರ್ಥಿಗಳ ನಡುವಿನ ವಿಶ್ವಾಸ ಕುಂಠಿತವಾಗುತ್ತಿದೆ ಎಂಬ ಭಾವನೆ ಇದೆ. ಆದರೆ, ಇತಿಹಾಸದ ಪುಟಗಳನ್ನು ನೋಡಿದಾಗ ಶಿಕ್ಷಕ ಸಮುದಾಯಕ್ಕೆ ಸಿಗುವಂತಹ ಅಮೂಲ್ಯವಾದ ಗೌರವ ಯಾರಿಗೂ ಸಿಗುತ್ತಿಲ್ಲ. ಶಿಕ್ಷಕರು ತಮ್ಮ ಜ್ಞಾನದ ಸಂಪತ್ತನ್ನು ವಿದ್ಯಾರ್ಥಿಗಳಿಗೆ ನೀಡುವಲ್ಲಿ ಯಾವುದೇ ಬೇದಭಾವ ಏಣಿಸಬಾರದು. ವಿದ್ಯಾರ್ಥಿ ದೆಸೆಯಲ್ಲಿ ಅವನ ಸಾಮಥ್ರ್ಯವನ್ನು ಅರಿತು ಶಿಕ್ಷಣ ನೀಡಲಾಗಿರುತ್ತದೆ. ಆದರೆ, ರಾಜಕೀಯ ಹಾಗೂ ಸರ್ಕಾರಿ ಅಧಿಕಾರಿಗಳಾದ ಅಲ್ಲಿನ ವ್ಯವಸ್ಥೆಗಳಿಗೆ ಅನುಗುಣವಾಗಿ ಆತ ಬದಲಾಗುತ್ತಾನೆ. ಆತನು ಮಾಡುವ ಎಲ್ಲಾ ಲೋಪದೋಷಗಳು ಶಿಕ್ಷಕರು ನೀಡಿದ ಶಿಕ್ಷಣದಿಂದ ಎಂದು ತಿಳಿದರೆ ತಪ್ಪಾಗುತ್ತದೆ. ಯಾವುದೇ ಶಿಕ್ಷಕ ತನ್ನ ವಿದ್ಯಾರ್ಥಿ ಉತ್ತಮ ದಾರಿಯತ್ತಲೇ ನಡೆಯಬೇಕೆಂಬ ಮಹದಾಸೆಯನ್ನು ಹೊಂದಿರುತ್ತಾನೆಂದರು.
ಪ್ರಾಸ್ತಾವಿಕವಾಗಿ ಮಾತನಾಡಿ, ಎಲ್ಲರನ್ನೂ ಸ್ವಾಗತಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್.ವೆಂಕಟೇಶಪ್ಪ, ಪ್ರತಿಯೊಬ್ಬ ಶಿಕ್ಷಕರೂ ತಮ್ಮ ವೃತ್ತಿ ಪಾವಿತ್ರತೆಗೆ ದಕ್ಕೆಯಾಗದಂತೆ ಕಾರ್ಯನಿರ್ವಹಿಸಬೇಕಿದೆ. ಇದು ಸಮಾಜದಲ್ಲಿ ನಡೆಯುವ ಎಲ್ಲಾ ಚಟುವಟಿಕೆಗಳು ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ನಾವು ನೀಡು ಶಿಕ್ಷಣವೇ ಮೂಲ ಪ್ರೇರಣೆ. ಶಿಕ್ಷಕ ತನ್ನ ಕಾರ್ಯವನ್ನು ದಕ್ಷ ಮತ್ತು ಪ್ರಾಮಾಣಿಕತೆಯಿಂದ ನಿರ್ವಹಿಸಿದಾಗ ಮಾತ್ರ ಇಂತಹ ಜಯಂತಿಗಳ ಆಚರಣೆಗೆ ವಿಶೇಷ ಅರ್ಥ ಬರುತ್ತದೆ. ಶಿಕ್ಷಕ ಎಂದರೆ ಕೇವಲ ಪಾಠ ಮಾಡುವುದಷ್ಟೇಯಲ್ಲ ಪ್ರಸ್ತುತ ಸ್ಥಿತಿಯನ್ನು ಸದೃಢಗೊಳಿಸುವ ದೃಷ್ಟಿಯಲ್ಲೂ ಕಾರ್ಯನಿರ್ವಹಿಸಬೇಕಾಗುತ್ತದೆ. ಶಿಕ್ಷಕರು ರಾಜಕೀಯ ಕ್ಷೇತ್ರದಿಂದ ದೂರವಿದ್ದಲ್ಲಿ ಮಾತ್ರ ಅವರ ಗೌರವ ಮತ್ತಷ್ಟು ಹೆಚ್ಚುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಸೇವೆಯಿಂದ ನಿವೃತ್ತಿ ಹೊಂದಿದ ಸುಮಾರು 35ಕ್ಕೂ ಹೆಚ್ಚು ಶಿಕ್ಷಕರನ್ನು ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ 5 ಜನ ಶಿಕ್ಷಕರನ್ನು ಶಿಕ್ಷಕರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕ್ರೀಡಾಕೂಟದಲ್ಲಿ ವಿಜೇತರಾದ ಶಿಕ್ಷಕರಿಗೆ ಬಹುಮಾನಗಳನ್ನು ಶಾಸಕ ಟಿ.ರಘುಮೂರ್ತಿ ವಿತರಿಸಿದರು. ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಸರ್ಕಾರಿ ನೌಕರರ ಸಂಘದ ವತಿಯಿಂದ ಶಾಸಕ ಟಿ.ರಘುಮೂರ್ತಿಂiÀiವರನ್ನು ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಟಿ.ಎನ್.ಕೋಟೆ ಮುಖ್ಯ ಶಿಕ್ಷಕ ಕೆ.ಎಸ್.ಸುರೇಶ್, ಹೊಳಲ್ಕೆರೆ ಬಿಆರ್‍ಸಿ ಆರ್.ಹನುಮಂತರಾಯ, ವಿಷಯ ಪರಿವೀಕ್ಷಕ ಗೋವಿಂದಪ್ಪನವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ಪಿ.ಶಶಿರೇಖಾ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಕವಿತಾರಾಮಣ್ಣ, ಉಪಾಧ್ಯಕ್ಷೆ ತಿಪ್ಪಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಗಿರಿಯಪ್ಪ, ತಾಲ್ಲೂಕು ಪಂಚಾಯಿತಿ ಸದ¸ದ್ಯರಾದ ಜಿ.ವೀರೇಶ್, ಸಣ್ಣ ಸೂರಯ್ಯ, ಸಮರ್ಥರಾಯ, ಗದ್ದಿಗೆ ತಿಪ್ಪೇಸ್ವಾಮಿ, ಎಚ್.ಆಂಜನೇಯ, ಇ.ರಾಮರೆಡ್ಡಿ, ತಿಪ್ಪೇಸ್ವಾಮಿ, ಸುನಂದಮ್ಮ, ರತ್ನಮ್ಮ, ರಂಜಿತಾ, ಉಮಾ, ತಹಶೀಲ್ದಾರ್ ಟಿ.ಸಿ.ಕಾಂತರಾಜು, ಸಿಪಿಐ ಎನ್.ತಿಮ್ಮಣ್ಣ, ನಗರಸಭಾ ಸದಸ್ಯರಾದ ಜಿ.ಗೋವಿಂದ, ವಿರೂಪಾಕ್ಷಿ, ಎಂ.ಜೆ.ರಾಘವೇಂದ್ರ, ಸುಮಾ, ವೈ.ಪ್ರಕಾಶ್, ಜಿ.ಮಲ್ಲಿಕಾರ್ಜುನ, ಕವಿತಾ, ಶಿಕ್ಷಕರ ಸಂಘದ ಅಧ್ಯಕ್ಷ ಜಿ.ಟಿ.ವೀರಭದ್ರಪ್ಪ, ರಾಜಣ್ಣ, ಕೆ.ಪಿ.ಭೂತಯ್ಯ, ಬಿಆರ್‍ಸಿ ಮಂಜಣ್ಣ ಮುಂತಾದವರು ಭಾಗವಹಿಸಿದ್ದರು.