ವಿದ್ಯಾರ್ಥಿಗಳಿಗೆ ಉಚಿತ ಆರೋಗ್ಯ ಶಿಬಿರ

ಹಿರಿಯೂರು :

        ಭಾರತೀಯ ರೆಡ್‍ಕ್ರಾಸ್‍ಸಂಸ್ಥೆ, ರೋಟರಿಸಂಸ್ಥೆಗಳು ಆರ್ಥಿಕತೆಯ ದುರ್ಬಲರ ಆರೋಗ್ಯ ರಕ್ಷಣೆಯಲ್ಲಿ ಶಿಬಿರಗಳನ್ನು ನಡೆಸುತ್ತಾ ಸಮಾಜಮುಖಿಯಾಗಿ ಸದಾಮುಂಜಾಗ್ರತೆಯಲ್ಲಿರುವುದು ಸಂತೋಷದ ಸಂಗತಿ ಎಂಬುದಾಗಿ ತಾಲ್ಲೂಕು ದಂಡಾಧಿಕಾರಿಗಳು ಹಾಗೂ ರೆಡ್‍ಕ್ರಾಸ್‍ಸಂಸ್ಥೆ ಅಧ್ಯಕ್ಷರಾದ ಜೆ.ಸಿ.ವೆಂಟೇಶಯ್ಯ ಹೇಳಿದರು.

        ನಗರದ ವಾಣಿಸಕ್ಕರೆ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಭಾರತೀಯ ರೆಡ್‍ಕ್ರಾಸ್, ರೋಟರಿ ಕ್ಲಬ್, ವಾಣಿ ಸಕ್ಕರೆ ಸರ್ಕಾರಿ ಪದವಿ ಪೂರ್ವಕಾಲೇಜು, ವಾಣಿಸಕ್ಕರೆ ರೋಟ್ರ್ಯಾಕ್ಟ್, ಜಿಲ್ಲಾಆರೋಗ್ಯಾಧಿಕಾರಿಗಳ ಕಛೇರಿ, ಸಾರ್ವಜನಿಕಆಸ್ಪತ್ರೆ ಹಿರಿಯೂರು, ಇವರುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ನೇತ್ರ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

         ವಾಣಿ ಕಾಲೇಜು ಪ್ರಾಂಶುಪಾಲರಾದ ಡಿ.ಧರಣೇಂದ್ರಯ್ಯ ಮಾತನಾಡಿ, ಇಂದಿನ ವಿದ್ಯಾರ್ಥಿಗಳೇ ನಾಳಿನ ಭಾವಿಪ್ರಜೆಗಳು, ತಾವುಗಳು ಸೇವಾಮನೋಭಾವನೆ ಹೊಂದುವ ಮೂಲಕ ನಾಡಿನ ಜನರ ಸೇವೆ ಮಾಡಬೇಕು. ಅದಕ್ಕಾಗಿ ಈ ಸಂಸ್ಥೆಗಳು ನಮ್ಮ ಕಾಲೇಜಿನಲ್ಲಿ ಯುವರೆಡ್‍ಕ್ರಾಸ್, ಸ್ಕೌಟ್ಸ್ ಅಂಡ್ ಗೈಡ್ಸ್, ಕಾಲೇಜು ರೋಟ್ರ್ಯಾಕ್ಟ್ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಸೇವಾಸ್ಪೂರ್ತಿ ತುಂಬಲು ಮುಂದಾಗಿರುತ್ತಾರೆ ಎಂದರು.

           ಈ ಕಾರ್ಯಕ್ರಮದಲ್ಲಿ ರೆಡ್‍ಕ್ರಾಸ್‍ಚೇರ್ಮನ್ ಹೆಚ್.ಎಸ್.ಸುಂದರ್‍ರಾಜ್, ರೋಟರಿಅಧ್ಯಕ್ಷ ಎಂ.ಎಸ್.ರಾಘವೇಂದ್ರ, ಕಾರ್ಯದರ್ಶಿ ಹೆಚ್.ವೆಂಕಟೇಶ್, ಬಿ.ಕೆ.ನಾಗಣ್ಣ, ಕಾಲೇಜು ದೈಹಿಕಶಿಕ್ಷಕರು ತಿಪ್ಪೇಸ್ವಾಮಿ, ಸ್ಕೌಟ್ಸ್‍ಅಂಡ್‍ಗೈಡ್ಸ್‍ನ ಶಶಿಕಲಾರವಿಶಂಕರ್, ಕಲ್ಲೇಶ್, ನಾಗಸುಂದರಮ್ಮ, ಸುಬ್ಬಣ್ಣಶೆಟ್ಟಿ, ಉಮಾರಾಜಶೇಖರ್, ಹೆಚ್.ಎಸ್.ಪ್ರಶಾಂತ್, ಚಂದ್ರವದನ, ಸತ್ಯಮೂರ್ತಿ, ರೋಟರಿಯ ಹೆಚ್.ಆರ್.ಶಂಕರ್, ನಾಗರಾಜ್, ರೆಡ್‍ಕ್ರಾಸ್‍ನ ಪಿ.ಆರ್.ಸತೀಶ್‍ಬಾಬು, ಹಿರಿಯೂರು ಸರ್ಕಾರಿ ಆಸ್ಪತ್ರೆಯ ವಿ.ಎಚ್.ಓ ಡಾ||ವೆಂಕಟೇಶ್ ಮತ್ತು ಸಿಬ್ಬಂದಿಗಳಾದ ನೇತ್ರಪರೀಕ್ಷಕ ತಿಪ್ಪೇಸ್ವಾಮಿ ಹಾಗೂ ಕಾಲೇಜಿನ ಸ್ಕೌಟ್‍ಅಂಡ್‍ಗೈಡ್ಸ್‍ನ ವಿದ್ಯಾರ್ಥಿಗಳು ಸೇರಿದಂತೆ ಅನೇಕರು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap