ಸಮಾಜ ಸೇವೆಗೂ ರೆಡ್‍ಕ್ರಾಸ್ ಮುಂದಾಗಲಿ

ದಾವಣಗೆರೆ:

      ರಕ್ತದಾನ ಶಿಬಿರ, ಆರೋಗ್ಯ ಶಿಬಿರಗಳ ಜೊತೆಗೆ ಸಾಮಾಜಿಕ ಸೇವಾ ಕಾರ್ಯಗಳನ್ನೂ ರೆಡ್‍ಕ್ರಾಸ್ ಸಂಸ್ಥೆ ಕೈಗೊಳ್ಳಲಿ ಎಂದು ಬಾಪೂಜಿ ವಿದ್ಯಾಸಂಸ್ಥೆ ನಿರ್ದೇಶಕರಾದ ಕಿರವಾಡಿ ಗಿರಿಜಮ್ಮ ಅಭಿಪ್ರಾಯಪಟ್ಟರು.

     ಇಲ್ಲಿನ ಎಂಸಿಸಿ ಬಿ ಬ್ಲಾಕಿನ ಐಎಂಎ ಹಾಲ್‍ನಲ್ಲಿ ಶನಿವಾರ ನಡೆದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ವಾರ್ಷಿಕ ಮಹಾಸಭೆಯಲ್ಲಿ ಮಾತಾನಾಡಿದ ಅವರು, ಒಂದು ಸಂಸ್ಥೆ ಬೆಳೆಯಲು ಧನ ಸಹಾಯ ಜೊತೆಗೆ ಸಮಾಜಮುಖಿಯಾಗಿ ಕೆಲಸ ನಿರ್ವಹಿಸುವ ಕೈಗಳುಬೇಕು ಎಂದರು.

      ಸಂಸ್ಥೆ ಬೆಳೆಯಲು ಕೇವಲ ಒಬ್ಬರಿಂದ ಸಾಧ್ಯವಿಲ್ಲ. ಸಾರ್ವಜನಿಕರು, ಒಳ್ಳೆಯ ಸೇವಾ ಮನಸ್ಸಿದ್ದವರೂ ಬೇಕು. ರೆಡ್ ಕ್ರಾಸ್ ಸಂಸ್ಥೆ ಬಹಳ ವರ್ಷಗಳಿಂದ ದಾವಣಗೆರೆಯಲ್ಲಿ ರಕ್ತದಾನ ಶಿಬಿರ, ರಕ್ತದ ಗುಂಪು ತಪಾಸಣೆ, ಆರೋಗ್ಯ ಶಿಬಿರದಂತಹ ಸೇವಾ ಕಾರ್ಯ ಮಾಡುತ್ತಾ ಬಂದಿದ್ದು, ಸಂಸ್ಥೆ ಬೆಳವಣಿಗೆಗೆ ದಾನಿಗಳ, ಸಾರ್ವಜನಿಕರ, ಸಹಕಾರ ಅವಶ್ಯಕ. ಈ ರೆಡ್ ಕ್ರಾಸ್ ಸಂಸ್ಥೆಯಲ್ಲಿ ಯುವಕರ ತಂಡದ ಜೊತೆಗೆ ತಜ್ಞ ವೈದ್ಯರುಗಳು ಸೇವೆ ಸಲ್ಲಿಸುತ್ತಿದ್ದು, ದಾನಿಗಳು ಸಹಕಾರ ನೀಡಿದರೆ ಉತ್ತಮ ಸೇವಾ ಕೆಲಸಗಳನ್ನು ನಿರ್ವಹಿಸಲು ಅನುಕೂಲವಾಗುತ್ತದೆ. ಪ್ರತಿಯೊಬ್ಬರೂ ಸಹಾ ತಮ್ಮ ಕೈಲಾದ ಅಳಿಲು ಸೇವೆ ಸಲ್ಲಿಸಿ ಆಗ ನಿಮ್ಮ ಮನಸ್ಸಿಗೆ ತೃಪ್ತಿ ಸಿಗುತ್ತದೆ ಎಂದು ಹೇಳಿದರು.

      ಸಂಸ್ಥೇ ಛೇರ್ಮನ್ ಡಾ.ಎ.ಎಂ.ಶಿವಕುಮಾರ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ಈ ಸಮಾರಂಭದಲ್ಲಿ ಎಲ್ಲರಿಗೂ ಕೂಡಾ ಸೇವೆ ಮಾಡಬೇಕು, ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂದು ಹಿರಿಯ, ಕಿರಿಯ ದಾನಿಗಳು ಬಂದಿದ್ದೀರಿ. ನಿವ್ಮ್ಮಂತಹ ದಾನಿಗಳ ಸಹಕಾರ ನಮಗೆ ಅವಶ್ಯಕ ಎಂದರು.

      ಸಂಸ್ಥೆ ಹಿರಿಯ ಸದಸ್ಯರಾದ ಜಿ.ಬಿ.ಸಿದ್ದಪ್ಪ ಮಾತನಾಡಿದರು. ಹಿರಿಯ ಸದಸ್ಯರಾದ ಮಹಾಲಿಂಗಪ್ಪ, ಪೂಲ್‍ಚಂದ್ ಷಾ ತಮ್ಮ ಅಭಿಪ್ರಾಯ, ಅನಿಸಿಕೆ ವ್ಯಕ್ತಪಡಿಸಿದರು. ನಿವೃತ್ತ ಕಾರ್ಯದರ್ಶಿ ಕೆ.ಎಸ್.ದೇವರಾಜ, ಜಿ.ಬಿ.ಸಿದ್ದಪ್ಪ, ದಾನಿ ವೀರಭದ್ರರಾವ್, ಮಾಜಿ ಛೇರ್ಮನ್ ಡಾ.ಬಿ.ಟಿ.ಅಚ್ಯುತ್, ದಾನಿಗಳಾದ ಕಾರ್ಗಿಲ್ ಇಂಡಿಯಾ ಪ್ರೈ.ಲಿ.ವ್ಯವಸ್ಥಾಪಕರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಹಲವು ದಾನಿಗಳು ರಕ್ತವಿಭಜಕ ಘಟಕ ನಿರ್ಮಾಣಕ್ಕೆ ಧನ ಸಹಾಯ ಮಾಡಿದರು.

      ಸಂಸ್ಥೆ ವೈಸ್ ಛೇರ್ಮನ್ ಉಮೇಶ ಶೆಟ್ಟಿ ಲೆಕ್ಕ ಪತ್ರ ಮಂಡಿಸಿದರು. ಖಜಾಂಚಿ ಗೌಡ್ರು ಚನ್ನಬಸಪ್ಪ ವಾರ್ಷಿಕ ವರದಿ ಓದಿದರು. ಡಿ.ಎಸ್.ಸಿದ್ದಣ್ಣ ಎಲ್ಲರನ್ನೂ ವಂದಿಸಿದರು. ಅನಿಲ್ ಬಾರೆಂಗಳ್ ನಿರೂಪಿಸಿದರು. ಸಂಸ್ಥೆ ಕಾರ್ಯದರ್ಶಿ ಮಂಜುನಾಥ, ಸಹ ಕಾರ್ಯದರ್ಶಿ ಡಿ.ಎಸ್.ಸಾಗರ್, ಸದಸ್ಯರಾದ ಡಾ.ಗಣೇಶ ಇಡಗುಂಜಿ, ಡಾ.ಮಹೇಶ, ಡಾ.ಎ.ಕೆ.ರುದ್ರಮುನಿ, ಆದಿಕೇಶವ ಪ್ರಕಾಶ, ಮಾಜಿ ಕಾರ್ಯದರ್ಶಿಗಳಾದ ಡಾ.ಎ.ಎಂ.ಮಲ್ಲಿಕಾರ್ಜುನಪ್ಪ, ನಿವೃತ್ತ ಡಿವೈಎಸ್ಪಿ ಕೆ.ಪಿ.ಚಂದ್ರಪ್ಪ, ರವಿನಾರಾಯಣ್, ಪುಟ್ಟಮ್ಮ ಮಹಾರುದ್ರಯ್ಯ, ಜನಮಿಡಿತ ಸಂಪಾದಕ ಜಿಎಂಆರ್ ಆರಾಧ್ಯ, ಪತ್ರಕರ್ತ ಶಿವಕುಮಾರ, ಡಾ.ಮಲ್ಲಿಕಾರ್ಜುನ ಜವಳಿ, ಹಿರಿಯ ನಾಗರೀಕರ ಇಲಾಖೆ ಶಶಿಧರ ಭಾಗವಹಿಸಿದ್ದರು. 

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap