ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಬಸವಣ್ಣ.ತಹಶೀಲ್ದಾರ್ ಶಿವಾರಾಜು.

ಕೊರಟಗೆರೆ

     ಸಮಾಜದಲ್ಲಿಗೌರವಯುತವಾಗಿ ಪ್ರತಿಯೊಬ್ಬರೂ ಬದುಕಬೇಕು ಎಂಬ ಆಶಯದೊಂದಿಗೆ 12ನೇ ಶತಮಾನದಲ್ಲೇ ಸಮ ಸಮಾಜನಿರ್ಮಾಣಕ್ಕೆ ನಾಂದಿ ಹಾಡಿದವರುಜಗಜ್ಯೋತಿ ಬಸವಣ್ಣನವರುಆವರಆದರ್ಶ ತತ್ವಗಳು ಇಂದಿನ ಯುವ ಪೀಳಿಗೆಗೆ ಅತ್ಯವಶ್ಯಕಎಂದು ತಹಶೀಲ್ದಾರ್ ಶಿವರಾಜು ತಿಳಿಸಿದರು.

     ಅವರು ಪಟ್ಟಣದ ತಹಶೀಲ್ದಾರ್ ಕಛೇರಿ ಸಭಾಂಗಣದಲ್ಲಿತಾಲೂಕು ಆಡಳಿತ ಹಾಗೂ ತಾಲೂಕು ವೀರಶೈವ ಸಮಾಜ ಏರ್ಪಡಿಸಿದ್ದ ಜಗಜ್ಯೋತಿ ಬಸವೇಶ್ವರಜಯಂತಿಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಸಮಾಜದಲ್ಲಿ ಹುಟ್ಟಿ ಸಮಾಜಕ್ಕಾಗಿಜೀವನ ಮುಡುಪಾಗಿಟ್ಟು ಧಾರ್ಮಿಕವಾಗಿ, ಸಮಾಜಿಕವಾಗಿ ಮತ್ತು ಸಾಹಿತ್ಯಾತ್ಮಕವಾಗಿಕ್ರಾಂತಿ ಮಾಡಿ ಸಮಾಜದಅವ್ಯವಸ್ಥೆಯನ್ನುತಿದ್ದುವ ಮೂಲಕ ಬಸವಣ್ಣನವರರು ನಮ್ಮೊಂದಿಗೆಅಮರರಾಗಿ ಉಳಿದಿದ್ದಾರೆ ಎಂದಅವರು ತುಳಿತಕ್ಕೆ ಒಳಗಾದವರನ್ನು ಮೇಲೆತ್ತಲು ಬಸವಣ್ಣನವರುಕಾಯಕವೇ ಕೈಲಾಸ ಪರಿಕಲ್ಪನೆಯನ್ನು ಪ್ರತಿಯೊಬ್ಬರಲ್ಲೂ ಮಾಡುವಂತೆ ಮಾಡುವಲ್ಲಿ ಯಶಸ್ವಿಯಾದವರು, ವೃತ್ತಿಗನುಗುಣವಾಗಿಜಾತಿ ವ್ಯವಸ್ಥೆ ನಿರ್ಮಾಣವಾಗಿದೆ, ಮನುಷ್ಯರೆಲ್ಲಾ ಸರ್ವ ಸಮಾನರುಎಂದು ಸಾರಿದ ಸಮಾಜ ಸುಧಾರಕರುಎಂದು ತಿಳಿಸಿದಿರು.

         ಕ್ಷೇತ್ರ ಶಿಕ್ಷಣಾದಿಕಾರಿ ಗಂಗಾಧರ್ ಮಾತನಾಡಿ ಬಸವಣ್ಣನವರು ಮಾತಿಗಿಂತಕೃತಿಯಲ್ಲಿ ಹೆಚ್ಚು ನಂಬಿಕೆ ಇಟ್ಟವರು, ತಮ್ಮ ಜೀವಿತದ ಅಲ್ಪಕಾಲಾವದಿಯಲ್ಲಿ ಲೋಕಕಲ್ಯಾಣಕ್ಕಾಗಿ ಪ್ರಜಾಪ್ರಭುತ್ವ ಮಾದರಿಯಲ್ಲಿ ಶ್ರಮಿಸಿದವರು, ಸಾಮಾಜಿಕಆರ್ಥಿಕ, ಧಾರ್ಮಿಕ ಕ್ರಾಂತ್ರಿ ಯಿಂದಾಗಿ ಜಡ್ಡುಗಟ್ಟಿದ ಸಮಾಜಕ್ಕೆ ಹೊಸ ಆಯಾಮ ನೀಡಿದವರು, ವಚನಗಳು ಅಚ್ಚಕನ್ನಡದಲ್ಲಿದ್ದು, ಕನ್ನಡಕಟ್ಟುವಕಾಯಕಕ್ಕೆ ಹೆಚ್ಚು ಶಕ್ತಿ ತುಂಬಿದರುಎಂದು ತಿಳಿಸಿದರು.

        ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ಸಿದ್ದಮಲ್ಲಪ್ಪ ಮಾತನಾಡಿ ಬಸವಣ್ಣನವರು ತಮ್ಮ ವಚನಗಳ ಮೂಲಕವೇ ಜನರಲ್ಲಿದ್ದಂತಹ ಮೂಡನಂಬಿಕೆಗಳ ವಿರುದ್ದ ಹೋರಾಡಿ ಕ್ರಾಂತಿ ಯೋಗಿ ಮಹಾ ಮಾನವತಾವಾದಿಯಾದ ಅವರು ಶಿವ ಶರಣರಾಗಲು ಯಾವುದೇ ಜಾತಿ-ಧರ್ಮ, ಜನಾಂಗಕ್ಕೆ ಸೇರಬೇಕಿಲ್ಲ ಯಾರು ಸಮಾನತೆ, ಕಾಯಕ ತತ್ವಗಳು ಪಾಲಿಸುವ ಯಾರು ಬೇಕಾದರೂ ಶಿವ ಶರಣರಾಗಬಹುದು ಅವರ ದೃಷ್ಠಿಕೊನವಾಗಿತ್ತು ಎಂದ ಅವರು ಇಂತಹವರ ಅದ್ದೂರಿ ಜಯಂತಿಗೆ ನೀತಿ ಸಂಹಿತೆ ಅಡ್ಡಿಯಾಗಿದ್ದು, ಮುಂದಿನ ದಿನಗಳಲ್ಲಿ ಪಟ್ಟಣದ ಲ್ಲಿಅದ್ದೂರಿಯಾಗಿ ನಡೆಸುವುದಾಗಿ ತಿಳಿಸಿದರು. ಶಿವಾನಂದ ಮಾತನಾಡಿ 12ನೇ ಶತಮಾನದಲ್ಲಿ ಲಿಂಗತಾರತಮ್ಯ ಮತ್ತು ಅಸ್ಪಶ್ಯತೆ ವಿರುದ್ದ ಹೋರಾಟ ನಡೆಸಿದ ಮಹಾನ್ ನಾಯಕರಾಗಿದ್ದು, ಡಾ.ಬಿ.ಆರ್.ಅಂಬೇಡ್ಕರ್‍ರವರು ರಚಿಸಿದ ಸಂವಿಧಾನದಲ್ಲಿ ಬಸವಣ್ಣನವರ ಅನೇಕ ತತ್ವಗಳು ಒಳಗೊಂಡಿದೆ ಎಂದರು.

        ಕಾರ್ಯಕ್ರಮದಲ್ಲಿ ಪ.ಪಂ.ಸದಸ್ಯ ಪ್ರದೀಪ್‍ಕುಮಾರ್, ತಾ.ಪಂ.ಕಾರ್ಯ ನಿರ್ವಹಣಾದಿಕಾರಿ ಶಿವಪ್ರಕಾಶ್, ರೇಷ್ಮೆಇಲಾಖೆಯ ಸಹಾಯಕನಿದೇರ್ಶಕ ಲಕ್ಷ್ಮೀನರಸಯ್ಯ, ಕಂದಾಯಇಲಾಖೆಯ ಶ್ರೀರಂಗಯ್ಯ, ನರಸಿಂಹಮೂರ್ತಿ, ರಾಜು, ಸೂರ್ಯಪ್ರಕಾಶ್, ಬಿಇಓ ಕಛೇರಿಯತಾಲೂಕುದೈಹಿಕ ಶಿಕ್ಷಣಾದಿಕಾರಿ ವಜೀರ್‍ಖಾನ್ ಸಮಾಜದ ಮುಖಂಡರುಗಳಾದ ಪರ್ವತಯ್ಯ, ಕೆ.ಎನ್.ಸುರೇಶ್, ಕಿರಣ್‍ಕುಮಾರ್ ಸೇರಿದಂತೆಇನ್ನಿತರರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link