ತುರುವೇಕೆರೆ :
ದೇವಾಲಯದ ಬೀಗ ಹೊಡೆದು ಲಕ್ಷಕ್ಕೂ ಹೆಚ್ಚು ಹಣ ಹಾಗೂ ಒಡವೆಗಳನ್ನು ಕಳ್ಳರು ದೋಚಿ ಪರಾರಿಯಾಗಿರುವ ಘಟನೆ ತಾಲ್ಲೂಕಿನ ಕೊಂಡಜ್ಜಿ ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ.
ತಾಲ್ಲೂಕಿನ ದಂಡಿನಶಿವರ ಹೋಬಳಿಯ ಕೊಂಡಜ್ಜಿ ಗ್ರಾಮದ ಶ್ರೀರೇಣುಕಾ ಎಲ್ಲಮ್ಮ ಹಾಗೂ ಈಶ್ವರ ದೇವಸ್ಥಾನಗಳಿಗೆ ಭಾನುವಾರ ರಾತ್ರಿ ಕಳ್ಳರು ನುಗ್ಗಿ, ಬಾಗಿಲ ಬೀಗ ಒಡೆದು ದೇವಾಲಯದಲ್ಲಿದ್ದ ಹುಂಡಿ ಹಣ ಹಾಗೂ ದೇವರ ಮೇಲಿದ್ದ ಒಡವೆ ಸೇರಿದಂತೆ 1 ಲಕ್ಷದ 25 ಸಾವಿರಕ್ಕೂ ಹೆಚ್ಚಿನ ಹಣವನ್ನು ದೋಚಿದ್ದಾರೆ. ಈಶ್ವರ ದೇವಸ್ಥಾನ ಹಾಗೂ ಪ್ರಹ್ಲಾದ್ ಎಂಬುವವರ ಮನೆಗೆ ಅವರು ಊರಿನಲ್ಲಿಲ್ಲದ ವೇಳೆ ಕಳ್ಳರು ನುಗ್ಗಿದ್ದರೂ ಸಹ ಯಾವುದೇ ವಸ್ತುಗಳು ಸಿಗದೆ ಹಾಗೆಯೇ ವಾಪಸ್ಸಾಗಿದ್ದಾರೆ.
ಬೆಳಗ್ಗೆ ವಿಷಯ ತಿಳಿದ ಗ್ರಾಮದ ಮುಖಂಡರು ದಂಡಿನಶಿವರ ಪೊಲೀಸ್ ಠಾಣೆಗೆ ವಿಷಯ ತಿಳಿಸಲಾಗಿ ಎಎಸ್‍ಐ ಶಿವಲಿಂಗಯ್ಯ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿದ್ದು, ಗ್ರಾಮದ ಜನತೆ ಈ ಘಟನೆಯಿಂದ ಭಯಭೀತರಾಗಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
