ಸಿರುಗುಪ್ಪ :
ಸರ್ಕಾರಿ ಕಾಲೇಜ್‍ಗಳಲ್ಲಿ ವಿದ್ಯಾರ್ಥಿಗಳಿಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುತ್ತಿದ್ದು ವಿದ್ಯಾರ್ಥಿಗಳು ಸರ್ಕಾರಿ ಕಾಲೇಜ್‍ಗಳಲ್ಲಿ ಪ್ರವೇಶ ಪಡೆದು ಸರಕಾರ ನೀಡುವ ಸೌಲಭ್ಯಗಳ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಶಾಸಕ ಎಂ.ಎಸ್.ಸೋಮಲಿಂಗಪ್ಪ ಕರೆ ನೀಡಿದರು.
ತಾಲೂಕಿನ ತೆಕ್ಕಲಕೋಟೆಯ ಶ್ರೀಮತಿ ಹೊನ್ನೂರಮ್ಮ ಎಂ.ಸಿದ್ದಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ 2018-19ನೇ ಶೈಕ್ಷಣಿಕ ಸಾಲಿನ ವಿವಿಧ ಸಮಿತಿಗಳ ರಚನೆ, ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘ ಉದ್ಘಾಟಿಸಿ ಮಾತನಾಡಿದ ಅವರು ಕಾಲೇಜಿಗೆ ಅವಶ್ಯವಾದ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ನೀಡಲಾಗುವುದು ಕುಡಿಯುವ ನೀರಿನ ಸೌಲಭ್ಯಕ್ಕಾಗಿ ಪ್ರತ್ಯೇಕ ಪೈಪ್ ಲೈನ್ ಅಳವಡಿಸಿಕೊಡಲಾಗುವುದು, ಕಾಲೇಜ್ ಸುತ್ತಾ ಕಾಂಪೊಂಡ್ ನಿಮಿಸಿಕೊಡಲಾಗುವುದು, ಕಾಲೇಜಿನ ಅಭಿವೃದ್ಧಿ ಕಾರ್ಯಗಳಿಗಾಗಿ ಶಾಸಕರ ಅನುದಾನದಿಂದ ಐದು ಲಕ್ಷ ಅನುದಾನ ನೀಡುವ ಭರವಸೆ ನೀಡಿದರು.
ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ಸಾಂಬಶಿವ ದಳವಾಯಿ ಅವರು ನಾಟಕದ ವಿವಿಧ ಪ್ರಕಾರಗಳು ಹಾಗೂ ಅಭಿನಯದ ಆಯಾಮಗಳ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು.
ಇದೆ ಸಂದರ್ಭದಲ್ಲಿ ಪ್ರಾಂಶುಪಾಲ ಡಾ.ವೈಜನಾಥ ಸಗರ ಮಠ, ಉಪನ್ಯಾಸಕರಾದ ಡಾ.ಮಾನಕರಿ ಶ್ರೀನಿವಾಸಾಚಾರ್ಯ, ಮಲ್ಲಿಕಾರ್ಜುನ ಶೆಟ್ಟಿ, ಡಾ.ಬಿ.ವೀರೇಶ್, ಎ.ಎಸ್.ಬಸವರಾಜ್, ತೇಜಸ್ವಿನಿ, ಸಾವಿತ್ರಿ, ಸವಿತಾ, ಸರಸ್ವತಿ, ಡಿ.ದೊಡ್ಡ ಭಾಷಾ, ಮನೋಹರ, ಸಣ್ಣ ಪಾಲಯ್ಯ ಫಕ್ಕೀರಪ್ಪ, ಕಾಳಿಂಗ ನಾಯಕ, ಮುದುಕಪ್ಪ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾಲೇಜಿನ ಹಳೆಯ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ