ಸಸ್ಯಹಾರ ಸೇವನೆ ಆರೋಗ್ಯಕ್ಕೆ ಹಿತಕರ : ಮಾಂಸಾಹಾರ ಸೇವನೆ ಆರೋಗ್ಯಕ್ಕೆ ಹಾನಿಕರ

ಚಳ್ಳಕೆರೆ

                 ಕರುಣಾಮಯಿಯಾದ ಭಗವಂತ ಜೀವರಾಶಿಯನ್ನು ಸೃಷ್ಠಿಸುವಾಗ ಯಾವುದೇ ಬೇದಭಾವದವಿಲ್ಲದೆ ಎಲ್ಲರಿಗೂ ಸಮಾನವಾದ ಅವಕಾಶವನ್ನು ನೀಡಿದ್ಧಾನೆ. ಪ್ರತಿನಿತ್ಯ ನಾವು ನಮ್ಮದೇಯಾದ ಸುಂದರ ಬದುಕನ್ನು ಕಟ್ಟಿಕೊಂಡಂತೆ ಪ್ರಾಣಿಗಳೂ ಸಹ ತಮ್ಮದೇಯಾದ ರೀತಿಯಲ್ಲಿ ಬದುಕುತ್ತಿವೆ. ಆದರೆ, ಮೂಕ ಪ್ರಾಣಿಗಳನ್ನು ಕೊಂಡು ಅದರ ಮಾಂಸಾಹಾರವನ್ನು ಸೇವಿಸುವ ಮೂಲಕ ಪ್ರಾಣಿಗಳ ಸಂಕುಲಕ್ಕೆ ಅಪಾಯವನ್ನುಂಟು ಮಾಡುತ್ತಿದ್ದು ಇದನ್ನು ನಿಯಂತ್ರಿಸುವಲ್ಲಿ ಎಲ್ಲರೂ ನೆರವಾಗಬೇಕೆಂದು ಮಾಂಸಾಹಾರ ತ್ಯಜಿಸಿ, ಶಾಖಾ ಆಹಾರ ಸೇವಿಸಿ ಜನ ಜಾಗೃತಿ ಜಾಥದ ಮುಖ್ಯಸ್ಥರಾದ ಶ್ರೀಮತಿ ದಿವ್ಯ ಮತ್ತು ಶ್ರೀನಿವಾಸ್‍ಚಾರ್ಯ ಮನವಿ ಮಾಡಿದ್ದಾರೆ.

                   ಅವರು, ಶುಕ್ರವಾರ ಇಲ್ಲಿನ ಪಿರಮಿಡ್ ಧ್ಯಾನ ಕೇಂದ್ರದ ಆವರಣದಿಂದ ಹೊರಟ ಜನಜಾಗೃತಿ ಜಾಥಕ್ಕೆ ಚಾಲನೆ ನೀಡಿ ಮಾತನಾಡಿದರು. ಪಿರಮಿಡ್ ಧ್ಯಾನ ಕೇಂದ್ರದ ಮುಖ್ಯಸ್ಥರಾದ ಬ್ರಹ್ಮಶ್ರೀ ಸುಭಾಸ್ ಪತ್ರಿಜೀಯವರ ಮಾರ್ಗದರ್ಶನದಲ್ಲಿ ಈ ಯಾತ್ರೆಯನ್ನು ಹಮ್ಮಿಕೊಂಡಿದ್ದು, ಆಂಧ್ರಪ್ರದೇಶದ ತೆಲಂಗಾಣದಿಂದ ಪ್ರಾಣಿಗಳ ಉಳಿವಿಗಾಗಿ ಈ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.

                   ರಾಜ್ಯದಾದ್ಯಂತ ಈ ಯಾತ್ರೆಯನ್ನು ನಡೆಸುವ ಮೂಲಕ ಪ್ರಾಣಿ ಸಂಕುಲದ ರಕ್ಷಣೆಗೆ ಮುಂದಾಗಿದ್ದೇವೆ. ಸಾರ್ವಜನಿಕರೂ ಸಹ ತಮ್ಮ ಮಾಂಸಾಹಾರವನ್ನು ತ್ಯಜಿಸಿ ಶಾಖಾ ಹಾರದ ಕಡೆ ಹೆಚ್ಚು ಗಮನ ನೀಡಬೇಕು. ಶಾಖಾಹಾರದಿಂದ ಮನುಷ್ಯನ ಆರೋಗ್ಯ ಉತ್ತಮಗೊಳ್ಳುತ್ತದೆ. ಯಾವುದೇ ರೀತಿಯ ಕಾಯಿಲೆಗಳು ಮನುಷ್ಯನನ್ನು ಆಕ್ರಮಿಸಲು ಸಾಧ್ಯವಿಲ್ಲವೆಂದರು.

                    ತಾಲ್ಲೂಕು ಸಂಚಾಲಕ ಎ.ಸಿ.ನಾಗೇಂದ್ರನ್ ಮಾತನಾಡಿ, ಮಾಂಸಾಹಾರ ತ್ಯಜಿಸಿ ಸಸ್ಯಹಾರಕ್ಕೆ ಒತ್ತು ನೀಡಿ ಜನಜಾಗೃತಿ ಅಂದೋಲನವನ್ನು ನಗರದ ಪ್ರಮುಖ ರಸ್ತೆಗಳಲ್ಲಿ ಹಮ್ಮಿಕೊಳ್ಳಲಾಗಿದೆ. ನಗರಸಭೆ ವ್ಯಾಪ್ತಿಯ ಎಲ್ಲಾ ವಾರ್ಡ್‍ಗಳಲ್ಲೂ ಸಹ ಜಾಗೃತಿ ಜಾಥವನ್ನು ನಡೆಸಲಾಗುವುದು. ಸಾರ್ವಜನಿಕರು ಶಾಖಾಹಾರದ ಕಡೆ ಹೆಚ್ಚು ಗಮನ ನೀಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ತಿಪ್ಪೇಸ್ವಾಮಿರೆಡ್ಡಿ, ಅನಿತಾ, ವತ್ಸಲ, ಸುಧಾಕರ, ಗೋವಿಂದರಾಜು, ರಘು, ಜಗದೀಶ್‍ಚಾರಿ, ವಿವಿಎಸ್ ನಾಗರಾಜು ಮುಂತಾದವರು ಭಾಗವಹಿಸಿದ್ದರು.

Recent Articles

spot_img

Related Stories

Share via
Copy link
Powered by Social Snap