ತಿಪಟೂರು
ಸಾಧನೆಯ ಸಾರ್ಥಕ ಸೇವಾ ಜೀವನಕ್ಕೆ ವಿದ್ಯೆ ಮತ್ತು ಪ್ರಜ್ಞಾವಂತಿಕೆ ಭದ್ರ ಬುನಾದಿ ಎಂದು ಪ್ರಾಂಶುಪಾಲರಾದ ಡಾ. ನಂದೀಶಯ್ಯನವರು ಕೆ.ಐ.ಟಿ ಮ್ಯೆಕಾನಿಕಲ್ ವಿಭಾಗದಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್ ಅಸೋಸಿಯೇಶನ್ ಮತ್ತು ತಾಂತ್ರಿಕ ವಿಷಯಗಳ ಚರ್ಚೆ ಕಾರ್ಯಕ್ರಮವನ್ನು ಉದ್ಘಾಟನೆಯನ್ನು ಮಾಡುತ್ತಾ ತಿಳಿಸಿದರು.
ಪ್ರಾಂಶುಪಾಲರಾದ ಡಾ. ನಂದಿಶಯ್ಯನವರು ಮಾತನಾಡುತ್ತಾ ವಿದ್ಯಾರ್ಥಿಗಳ ಜ್ಞಾನ ವಿಕಾಸದ ಬಗ್ಗೆ ಅವರ ಪ್ರಗತಿಪಥವನ್ನು ಮುಟ್ಟಲು ಯಾವ ಯಾವ ಹಂತದಲ್ಲಿ ಯಾವ ರೀತಿ ಅಧ್ಯಯನ ಮಾಡಬೇಕು, ವಿದ್ಯಾರ್ಜನೆಯ ಜೊತೆ ಜೊತೆಗೆ ಕ್ರೀಡೆ, ಕಲೆ, ಯೋಗ ಮತ್ತು ಸದೃಢ ಆರೋಗ್ಯವನ್ನು ಪಡೆದುಕೊಂಡು ಸಕ್ರಿಯ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಅಗತ್ಯವಿದೆ, ವಿನಾಕಾರಣ ಸಮಯವನ್ನು ವ್ಯಯಮಾಡದೆ ಸುಸಜ್ಜಿತವಾದ ಗ್ರಂಥಾಲಯದಲ್ಲಿರುವ ಸುಮಾರು 60 ಸಾವಿರ ಪುಸ್ತಕಗಳನ್ನು ಬಳಸಿಕೊಂಡು ತಮ್ಮ ಜ್ಞಾನ ಭಂಡಾರವನ್ನು ಹೆಚ್ಚಿಸಿಕೊಂಡು ಸುಸಂಸ್ಕøತರಾಗಿ ಹಾಗೂ ಸಾಧನೆಯ ಸಾರ್ಥಕ ಸೇವಾ ಜೀವನಕ್ಕೆ ವಿದ್ಯೆ ಮತ್ತು ಪ್ರಜ್ಞೆ ಭದ್ರ ಬುನಾದಿಯಾಗಬೇಕೆಂದು ತಿಳಿಸಿದರು.
ಮೈಸೂರಿನ ಯುಟೆಕ್ ತಾಂತ್ರಿಕ ಮುಖ್ಯಸ್ಥರಾದ ನಿತ್ಯಾನಂದ.ಬಿ.ಎಸ್ ಮಾತನಾಡುತ್ತಾ ಯಾಂತ್ರಿಕ ವಿಭಾಗದ ಆಟೋಮಿಷನ್ ಇಂಡಸ್ಟ್ರೀಸ್ 4ಜಿ ಮತ್ತು 3 ಡಿ ಪ್ರಿಂಟಿಂಗ್ ಎಂಬ ವಿಷಯದ ಬಗ್ಗೆ ವಿವರಣೆ ನೀಡಿ ತಮ್ಮಲ್ಲಿರುವ ಜ್ಞಾನವನ್ನು ವಿದ್ಯಾರ್ಥಿಗಳಿಗೆ ಹಂಚಿಕೊಂಡು ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಸಮಯವನ್ನು ಹೇಗೆ ಸದ್ವಿನಿಯೋಗ ಮಾಡಿಕೊಳ್ಳಬೇಕೆಂದು ತಿಳಿಸಿದರು.
ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಡಾ. ಓ.ಎಸ್.ಕಿರಣ್ ಮತ್ತು ಟಿ.ಎಸ್.ಸಿದ್ಧಲಿಂಗಪ್ರಸಾದ್‍ರವರ ಮಾರ್ಗದರ್ಶನದಲ್ಲಿ ಮಾಡಿದ ಪ್ರಾಜೆಕ್ಟ್ ಆದ ರೈಲ್ವೆ ಕ್ಲೀನಿಂಗ್ ಮಿಷನ್ ಮತ್ತು ಸೋಲಾರ್‍ನಿಂದ ಓಡುವ ಸೈಕಲ್ ಪ್ರಾಜೆಕ್ಟ್‍ಗೆ ವಿ.ಟಿ.ಯು ಬೆಳಗಾವಿಯಿಂದ ಮಾನ್ಯತೆ ಪಡೆದಿದೆ. ಮತ್ತು ಹೆಗ್ಗಳಿಕೆಯ ವಿಷಯವೆಂದರೆ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗಕ್ಕೆ 30 ಲಕ್ಷ ರೂಪಾಯಿಗಳ ಅನುದಾನವನ್ನು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿಯಿಂದ ಉನ್ನತ ಮಟ್ಟದ ಪ್ರಯೋಗಾಲಯಕ್ಕಾಗಿ ಅನುದಾನ ಬಂದಿದೆ. ಇವುಗಳನ್ನು ಸದುಪಯೋಗಪಡಿಸಿಕೊಂಡು ವಿದ್ಯಾರ್ಥಿಗಳು ಜ್ಞಾನವನ್ನು ವೃದ್ಧಿಸಿಕೊಳ್ಳಲು ಕರೆ ನೀಡಿದರು.