ನವದೆಹಲಿ:
ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುವ ಸುಳ್ಳು ಸುದ್ದಿಗಳ ಮೇಲೆ ಕಣ್ಣಿಟ್ಟಿರಿ. ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿಯನ್ನು, ಅಥವಾ ಕೊಳಕು ಸುದ್ದಿಯನ್ನು ಹರಡಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಕಾರ್ಯಕರ್ತರಿಗೆ ಹೇಳಿದ್ದಾರೆ.
ನಮೋ app ಮೂಲಕ ಪಕ್ಷದ ಕಾರ್ಯಕರ್ತರೊಂದಿಗೆ ಮಾತನಾಡಿದ ಮೋದಿ, ‘ಸಾಮಾಜಿಕ ಮಾಧ್ಯಮಗಳ ಮೂಲಕ ಸರ್ಕಾರದ ವಿವಿಧ ಯೋಜನೆಗಳನ್ನು ಜನರಿಗೆ ತಲುಪಿಸಿ. ಸರ್ಕಾರದ ಸಾಧನೆಗಳ ಬಗ್ಗೆ ತಿಳಿಹೇಳಿ’ ಎಂದರು.
‘2019 ರ ಲೋಕಸಭಾ ಚುನಾವಣೆಗೆ ಸಾಮಾಜಿಕ ಮಾಧ್ಯಮವನ್ನು ಭೂಮಿಕೆಯನ್ನಾಗಿ ಬಳಸಿಕೊಳ್ಳಿ. ಆದರೆ ಇವುಗಳಲ್ಲಿ ಹರಿಯುವ ಸುಳ್ಳು ಸುದ್ದಿಯ ಬಗ್ಗೆ ಗಮನವಿರಲಿ’ ಎಂದು ಅವರು ಕಿವಿಮಾತು ಹೇಳಿದರು.
ಸಾಮಾಜಿಕ ಜಾಲತಾಣದಲ್ಲಿ ಬರುವ ಯಾವುದೋ ಒಂದು ಸುದ್ಧಿಯನ್ನು ಸುಳ್ಳೋ ನಿಜವೋ ಎಂದು ಪರೀಕ್ಷಿಸದೇ, ಫಾರ್ವರ್ಡ್ ಮಾಡುವುದರಿಂದ ಇದರಿಂದಾಗಿ ಸಮಾಜಕ್ಕೆ ಹಾನಿಯುಂಟಾದಂತಾಗುತ್ತದೆ’ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ