ಸಾರ್ವಜನಿಕರಿಗೆ ಅಡ್ಡಿಯಾಗುವುದಾದರೆ ಧಾರ್ಮಿಕ ಕೇಂದ್ರಗಳನ್ನೂ ಒಡೆದು ಹಾಕಿ: ಜಿ.ಜಿ.ಚಂದ್ರಣ್ಣ

 ಕಂಪ್ಲಿ:

      ರಸ್ತೆ ಅಗಲೀಕರಣದ ಕಾಮಗಾರಿಯಲ್ಲಿ ಧಾರ್ಮಿಕ ಮನೋಭಾವನೆಗೆ ಒತ್ತುಕೊಟ್ಟು ತಾರತಮ್ಯ ಮಾಡಬಾರದೆಂದು ಜಿ.ಜಿ.ಚಂದ್ರಣ್ಣ ಅವರು ಒತ್ತಾಯಿಸಿದರು. ಅವರು ಇಲ್ಲಿನ ಪುರಸಭೆ ಪಕ್ಕದ ಬಿಎಸ್‍ವಿ ಶಾಲೆಯ ಆವರಣದಲ್ಲಿ ಭಾನುವಾರ ಬೆಳಿಗ್ಗೆ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಭೆಯ ನೇತೃತ್ವವಹಿಸಿ ಮಾತನಾಡುತ್ತಿದ್ದರು.

      ರಸ್ತೆ ಅಗಲೀಕರಣ ಕಾಮಗಾರಿ ಪುರಸಭೆ ಗೊತ್ತುವಳಿ ಅನ್ವಯ ಸಾಗಬೇಕು.ಮಠ ಮಂದಿರ ಮಸೀದಿ ಮತ್ತು ಚರ್ಚ್‍ಗಳಂತಹ ಯಾವುದೇ ಧಾರ್ಮಿಕ ಸಂಸ್ಥೆಗಳು ಸಾರ್ವಜನಿಕರಿಗೆ ಅಡ್ಡಿಯಾಗುವುದಾದರೆ ಯಾವುದೇ ಒತ್ತಡಕ್ಕೆ ಮಣಿಯದೆ ಪುರಸಭೆಯಲ್ಲಿನ ಠರಾವ್ ಪ್ರಕಾರ ತೆರವುಗೊಳಿಸಬೇಕು. ಅಂಬೇಡ್ಕರ್ ವೃತ್ತದಿಂದ ಸೇತುವೆತನಕದ ಅಗಲೀಕರಣದ ಅಳತೆ ಒಂದೇ ಆಗಿರಬೇಕು. ಯಾವುದೇ ಕಾರಣಕ್ಕೂ ಧಾರ್ಮಿಕ ನೆಪದಲ್ಲಿ ರಿಯಾಯ್ತಿ ತೋರುವಂತಿಲ್ಲ. ಶಾಸಕ ಜೆ.ಎನ್.ಗಣೇಶ್ ಅವರು ಈ ಕುರಿತು ಮುತುವರ್ಜಿವಹಿಸಬೇಕು. ಯಾರ ಮನಸ್ಸಿಗೂ ನೋವಾಗದಂತೆ ರಸ್ತೆ ಮಧ್ಯದಿಂದ ಎರಡು ಬದಿಗೂ ಸಮನಾದ ಅಳತೆಯಲ್ಲಿ ಅಗಲೀಕರಣಗೊಳ್ಳಬೇಕು. ಕೆಲವಡೆಗಳಲ್ಲಿ ಹೆಚ್ಚು ಕಡಿಮೆ ಅಳತೆಯಲ್ಲಿ ಅಗಲೀಕರಣಗೊಳ್ಳುವ ಕುರಿತು ಜನತೆ ಆತಂಕ ವ್ಯಕ್ತಪಡಿಸಿದ್ದಾರೆ. ಜನತೆಯ ಆಕ್ರೋಶಕ್ಕೆ ಶಾಸಕರು, ಪುರಸಭಾಡಳಿತ ಅವಕಾಶ ಮಾಡಿಕೊಡಬಾರದೆಂದು ಅವರು ಸಭೆಯಲ್ಲಿ ಹೇಳಿದರು.

      ಇದೇ ಆ.14ರ ಸಂಜೆಯಿಂದ ಈತನಕವೂ ಇಲ್ಲಿನ ಕೋಟೆಯ ತುಂಗಭದ್ರಾ ನದಿ ಸೇತುವೆ ಮೇಲೆ ಬಸ್ಸುಗಳ ಓಡಾಟ ಸ್ಥಗಿತಗೊಂಡಿದ್ದು ಬಡ ಜನತೆ ದುಬಾರಿ ಹಣ ತೆತ್ತು ಆಟೊಗಳ ಮೂಲಕ ಗಂಗಾವತಿಗೆ ಸಾಗಬೇಕಾಗಿದೆ. ಈಶಾನ್ಯವಾಹಿನಿಯವರು ಕೂಡಲೇ ಈ ಕುರಿತು ಜಾಗೃತಿವಹಿಸಿ ಜನರ ಮತ್ತು ವಿದ್ಯಾರ್ಥಿಗಳ ಪ್ರಯಾಣಕ್ಕಾಗಿ ಸೇತುವೆ ಮೇಲೆ ಮಿನಿ ಕ್ಯಾಬ್ ಹೊರಡಿಸಬೇಕು. ನ್ಯಾಯ ಸಮ್ಮತ ರಸ್ತೆ ಅಗಲೀಕರಣ ಮತ್ತು ಸೇತುವೆ ಮೇಲಿನ ಪ್ರಯಾಣದ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇದೇ ಆ.30ರಂದು ಬೆಳಿಗ್ಗೆ 10ಗಂಟೆಗೆ ಅಂಬೇಡ್ಕರ್ ವೃತ್ತದಲ್ಲಿ ಪಟ್ಟಣದ ಸರ್ವ ಪ್ರಗತಿಪರ ಸಂಘಟನೆಗಳೊಂದಿಗೆ ಮತ್ತು ಜನತೆಯ ಸಹಕಾರದೊಂದಿಗೆ ಪ್ರತಿಭಟನೆ ಹಮ್ಮಿಕೊಂಡಿದೆ ಎಂದು ಹೇಳಿದರು.

      ಸಭೆಯಲ್ಲಿ ಜಿ.ರಾಮಣ್ಣ, ಬಿ.ಸಿದ್ದಪ್ಪ, ವಿ.ಗೋವಿಂದರಾಜು, ಎ.ರೇಣುಕಪ್ಪ, ಬಿ.ನಾಗೇಂದ್ರ, ಬಿ.ದೇವೇಂದ್ರ, ಬಿ.ಕೆ.ವಿರುಪಾಕ್ಷಿ, ಎಲ್.ಭಗವಾನ್, ಬಿ.ಶೆಕ್ಷಾವಲಿ, ಪಿ.ಬ್ರಹ್ಮಯ್ಯ ಸೇರಿ ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link