ಸಾರ್ವಜನಿಕ ಸೇವೆಯಲ್ಲಿ ಬಿಎಸ್‍ಎನ್‍ಎಲ್: ನರೇಶ್‍ರೆಡ್ಡಿ

ಮಧುಗಿರಿ:

            ಬಿಎಸ್‍ಎನ್‍ಎಲ್ ದೂರವಾಣಿ ಸಂಪರ್ಕ ಮತ್ತು ಸೇವೆಯಲ್ಲಿ ಸಾರ್ವಜನಿಕರಿಗೆ ಉತ್ತಮವಾದ ಸೇವೆ ಒದಗಿಸುತ್ತಿದೆ ಎಂದು ರೀಟೆಲ್ ಮ್ಯಾನೇಜರ್ ನರೇಶ್ ರೆಡ್ಡಿ ತಿಳಿಸಿದರು.

             ಅವರು ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ವಿವಿಧ ಯೋಜನೆಗಳ ಮಾಹಿತಿ ಜಾಥಾದಲ್ಲಿ ಪಾಲ್ಗೊಂಡು ಮಾತನಾಡಿ, ಗ್ರಾಹಕರಿಗಾಗಿಯೇ ಸಂಸ್ಥೆ ಅನೇಕ ಯೋಜನೆಗಳನ್ನು ರಿಯಾಯಿತಿ ದರದಲ್ಲಿ ನೀಡುತ್ತಿದ್ದು, ಇದರ ಸದುಪಯೋಗವನ್ನು ಬಳಸಿಕೊಂಡು ಬಿಎಸ್‍ಎನ್‍ಎಲ್ ಸಂಸ್ಥೆಯನ್ನು ಬೆಳೆಸುವಂತೆ ತಿಳಿಸಿದರು.

             ಜಾಥಾ ಉದ್ಘಾಟಿಸಿದ ಪತ್ರಕರ್ತ ಹಾಗೂ ಗ್ರಾಹಕ ಪಿ.ಎಂ.ಉಮೇಶ್ ಮಾತನಾಡಿ, ಖಾಸಗಿ ಸಂಸ್ಥೆಗಳೊಂದಿಗೆ ಸ್ಪರ್ಧೆಗಿಳಿಯದೆ ನೌಕರರು ಉತ್ತಮ ಸೇವೆ ನೀಡುವುದರ ಮೂಲಕ ಕೆಲಸ ಮಾಡಿದರೆ ಯಶಸ್ಸುಗಳಿಸಲು ಸಾಧ್ಯ ಎಂದು ನುಡಿದು, ಬಿಎಸ್‍ಎನ್‍ಎಲ್ ಉತ್ತಮ ಯೋಜನೆಗಳನ್ನು ನೀಡುತ್ತಿರುವುದನ್ನು ಶ್ಲಾಘೀಸಿದರು.

             ಮಧುಗಿರಿ ಎಸ್‍ಡಿಇ ಮೂಡಲಗಿರಿಯಪ್ಪ, ಸಿಬ್ಬಂದಿಗಳಾದ ಶಿವಕುಮಾರ್, ವೆಂಕಟಸ್ವಾಮಿ, ಈಶ್ವರಯ್ಯ, ಜಗದೀಶ್, ರಾಮರೆಡ್ಡಿ, ರಾಮಕೃಷ್ಣ, ಮಂಜುನಾಥ್, ನರಸಿಂಹ, ಉಮೇಶ್ ಇತರರಿದ್ದರು.

              ಮಧುಗಿರಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆದು ಸಾರ್ವಜನಿಕರಿಗೆ ವಿವಿಧ ಯೋಜನೆ, ರಿಯಾಯಿತಿಗಳ ಬಗ್ಗೆ ಅರಿವು ಮೂಡಿಸಲಾಯಿತು. 

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link