ಕೂಡ್ಲಿಗಿ:
ಸಾಲ ಬಾಧೆ ತಾಳಲಾರದೆ ಸಂಡೂರು ತಾಲ್ಲೂಕಿನ ಚಿಕ್ಕಕೆರೆಯಾಗಿನಹಳ್ಳಿ ಗ್ರಾಮದ ರೈತ ಜಿ. ಬಾಲಪ್ಪ(32) ಶನಿವಾರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ನನ್ನ ಮಗನಾದ ಜಿ. ಬಾಲಪ್ಪನು ತನ್ನ ಜಮೀನಿನಲ್ಲಿ ಬೆಳೆ ಬೆಳೆಯಲು ಬ್ಯಾಂಕುಗಳಲ್ಲಿ ಸಾಲ ಮಾಡಿದ್ದ. ಆದರೆ ಸಮರ್ಪಕವಾಗಿ ಮಳೆ ಇಲ್ಲದೆ ಬೆಳೆಗಳಲ್ಲ ಒಣಗಿ ಹೋಗುತ್ತಿದ್ದ ಕಂಡು ಬೇಸರಗೊಂಡಿದ್ದ. ಅತನಿಗೆ ಅನೇಕ ಬಾರಿ ಸಮಾದಾನ ಮಾಡಿದ್ದೆ. ಆದರೂ ಶನಿವಾರ ಬೆಳಿಗ್ಗೆ ಹೊಲದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ಇದನ್ನು ಕಂಡ ನಾವು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾನೆ ಎಂದು ಮೃತ ತಂದೆ ಕರಿಜನ್ಯಪ್ಪ ನೀಡಿದ ದೂರಿನಂತೆ ಭಾನುವಾರ ಕೂಡ್ಲಿಗಿ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
