ಸಾಲಭಾದೆ ತಾಳಲಾರದೆ ರೈತನೊರ್ವ ನೆಣಿಗೆ ಶರಣು

ಗುತ್ತಲ:

ಸಾಲಭಾದೆ ತಾಳಲಾರದೆ ರೈತನೊರ್ವ ನೆಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುತ್ತಲ ಸಮೀಪದ ಕುರಗೂಂದ ಗ್ರಾಮದಲ್ಲಿ ನಡೆದಿದೆ.
ಮೃತ ವ್ಯಕ್ತಿ ದ್ಯಾಮಪ್ಪ ತಂದೆ ಗುಡ್ಡಪ್ಪ ಹೊಟ್ಟೆಪ್ಪನವರ(35) ಎಂದು ಗುರುತಿಸಲಾಗಿದೆ. ಮೃತ ವ್ಯಕ್ತಿಯ ಹಾವೇರಿ ಎಲ್&ಟಿ ಫೈನಾನ್ಸ್‍ನಲ್ಲಿ ಸಾಲ ಮಾಡಿ ಮಹಿಂದ್ರಾ ಟ್ರಾಕ್ಟರ್ ಹೊಂದಿದ್ದ, ಸಮರ್ಪಕ ಮಳೆ ಬಾರದೆ ಸಾಲ ಹೇಗೆ ತೀರಿಸುವುದು ಎಂದು ಹೆದರಿ ಸ್ವಂತ ಜಮೀನನಲ್ಲಿ ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತನ ಕುಟುಂಬದ ಮೂಲಗಳು ತಿಳಿಸಿವೆ ಈ ಕುರಿತು ಗುತ್ತಲ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಎ.ಎಸ್.ಐ ಎ.ಬಿ ಗೌಡನಾಯ್ಕರ್ ಸಿಬ್ಬಂದಿ ಬೇಟಿ ನೀಡಿ ಪರಿಶೀಲಿಸಿದರು.

Recent Articles

spot_img

Related Stories

Share via
Copy link