ಚಳ್ಳಕೆರೆ
ತಾಲ್ಲೂಕಿನ ವೇದಾವತಿ ನದಿಪಾತ್ರದಲ್ಲಿರುವ ಗೊರ್ಲತ್ತು, ಕಲಮರಹಳ್ಳಿ, ನಾರಾಯಣಪುರ ಮುಂತಾದ ಗ್ರಾಮಗಳ ನದಿಪಾತ್ರದಲ್ಲಿ ಸರ್ಕಾರ ಈಗಾಗಲೇ ಮರಳನ್ನು ಟೆಂಡರ್‍ದಾರರ ಮೂಲಕ ದಾಸ್ತಾನು ಮಾಡಲಾಗಿದ್ದು, ಅವುಗಳ ಪರಿಶೀಲನೆ ನಡೆಸಿ ಪರ್ಮಿಟ್ ವಿತರಿಸುವ ನಿಟ್ಟಿನಲ್ಲಿ ಉಪವಿಭಾಗಾಧಿಕಾರಿ ಪ್ರಸನ್ನಕುಮಾರ್ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಮರಳು ಯಾರ್ಡ್‍ನಲ್ಲಿದ್ದ ಸಿಬ್ಬಂದಿಯವರನ್ನು ವಿಚಾರಿಸಿದಲ್ಲದೆ, ಯಾವುದೇ ಕಾರಣಕ್ಕೂ ಪರ್ಮಿಟ್ ಇಲ್ಲದ ಮರಳನ್ನು ಸಾಗಾಣಿಕೆ ಮಾಡುವಂತಿಲ್ಲ. ಮರಳು ತುಂಬಿಕೊಳ್ಳಲು ಯಾವುದೇ ವಾಹನ ಬಂದರೂ ಅವುಗಳ ಮಾಹಿತಿ ಪಡೆದು ಸಂಬಂಧಪಟ್ಟ ಅಧಿಕಾರಿಗೆ ತಿಳಿಸಿ ಪರ್ಮಿಟ್ ನೀಡುವಾಗ ಸಂಬಂಧಪಟ್ಟ ವಾಹನಗಳ ದಾಖಲಾತಿ ಪ್ರತಿಯನ್ನು ಪರಿಶೀಲಿಸಿ ನೀಡುವಂತೆ ಸೂಚಿಸಿದರು.
ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ ಮಾತನಾಡಿ, ಮರಳು ಯಾರ್ಡ್‍ಗಳಲ್ಲಿ ಕಂದಾಯ ಇಲಾಖೆ ಸಿಬ್ಬಂದಿಯೊಂದಿಗೆ ಪೊಲೀಸ್‍ರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಸಹ ಉಪಸ್ಥಿತರಿದ್ದು, ಪರಿಶೀಲನೆ ನಡೆಸುವರು. ಈಗ ಹಾಲಿ ಇರುವ ಮರಳನ್ನು ಟೆಂಡರ್ ಮೂಲಕವೇ ವಿತರಣೆ ಮಾಡಲಾಗುವುದು. ಕಂದಾಯ ಇಲಾಖೆ ಅಧಿಕಾರಿಗಳು ಯಾವುದೇ ರೀತಿಯಲ್ಲಿ ಅಕ್ರಮ ಮರಳು ಸಾಗಾಟವಾಗದಂತೆ ಎಚ್ಚರಿಕೆ ವಹಿಸಿದ್ದಾರೆಂದರು. ಕಂದಾಯಾಧಿಕಾರಿ ಶಾಂತಪ್ಪ, ಪಿಎಸ್‍ಐ ನೂರ್ ಆಹಮ್ಮದ್, ಗ್ರಾಮಲೆಕ್ಕಿಗ ಹಿರಿಯಪ್ಪ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
