ಸಾಲಮನ್ನಾ ಜೊತೆ ಋಣಮುಕ್ತ ಕಾಯಿದೆಯಿಂದ ನಮ್ಮದು ರೈತಪರ ಸರ್ಕಾರ : ಡಿಸಿಎಂ

ಕೊರಟಗೆರೆ

            ರಾಜ್ಯ ಸಮ್ಮಿಶ್ರ ಸರ್ಕಾರ ರೈತರ ಸಾಲ ಮನ್ನಾ ಬೆನ್ನಲ್ಲೇ ಋಣ ಮುಕ್ತ ಕಾಯಿದೆಯನ್ನು ಜಾರಿಗೆ ತಂದು ಕಾಂಗ್ರೆಸ್ ಮತ್ತು ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ರೈತರ ಪರವಾಗಿದೆ ಎಂಬುದನ್ನು ಮತ್ತೊಮ್ಮೆ ನಿರೂಪಿಸಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದರು.

           ಕೊರಟಗೆರೆ ಪಟ್ಟಣದಲ್ಲಿ ಜಿಲ್ಲಾ ಪಂಚಾಯಿತಿ ವತಿಯಿಂದ ಸೋಮವಾರ ಏರ್ಪಡಿಸಲಾಗಿದ್ದ ತಾಲ್ಲೂಕು ಮಟ್ಟದ ಐಇಸಿ ಮತ್ತು ಗಂಗಾ ಕಲ್ಯಾಣ ಯೋಜನೆಯಡಿ ರೈತರಿಗೆ ಮೋಟಾರ್ ಪಂಪು ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

           ಗಂಗಾ ಕಲ್ಯಾಣ ಯೋಜನೆಯಡಿ ಕೊರಟಗೆರೆ ರೈತರಿಗೆ ಅಂಬೇಡ್ಕರ್ ಅಭಿವೃದ್ದಿ ನಿಗಮದಿಂದ ಪರಿಶಿಷ್ಟ ಜಾತಿಯ 75 ರೈತರಿಗೆ, ವಾಲ್ಮೀಕಿ ಅಭಿವೃದ್ದಿ ನಿಗಮದಿಂದ ಪರಿಶಿಷ್ಟ ಪಂಗಡದ 10 ರೈತರಿಗೆ, ಹಿಂದುಳಿದ ಸಮುದಾಯದ 10 ರೈತರಿಗೆ, ಅಲ್ಪಸಂಖ್ಯಾತ ಒಬ್ಬ ರೈತರಿಗೆ ಸೇರಿ 96 ರೈತರಿಗೆ ನೀಡಲಾಗಿದೆ. ಇನ್ನುಳಿದ 106 ಜನ ರೈತರಿಗೆ ಇನ್ನೊಂದು ವಾರದೊಳಗೆ ಮೋಟಾರ್‍ಪಂಪು ವಿತರಣೆ ಮಾಡುತ್ತೇವೆ. ರೈತರು ಯೋಚನೆ ಮಾಡುವ ಅಗತ್ಯವಿಲ್ಲ ಎಂದು ತಿಳಿಸಿದರು.

           ರಾಜ್ಯದ 17 ಜಿಲ್ಲೆಯಲ್ಲಿ ಮುಂಗಾರು ಮಳೆ ಕೈಕೊಟ್ಟಿರುವ ಪರಿಣಾಮ ಕುಡಿಯುವ ನೀರಿಗೂ ಬರಗಾಲ ಎದುರಾಗಿದೆ. 89 ತಾಲ್ಲೂಕುಗಳನ್ನು ಬಡಪೀಡಿತ ಪ್ರದೇಶಗಳೆಂದು ಈಗಾಗಲೇ ಘೋಷಣೆ ಮಾಡಲಾಗಿದೆ. ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ರಾಜ್ಯದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರು ಜಾನುವಾರುಗಳ ರಕ್ಷಣೆ ಮಾಡಿಕೊಳ್ಳಲು ಪರದಾಡುತ್ತಿದ್ದಾರೆ. ತಾಲ್ಲೂಕು ಮಟ್ಟದ ಅಧಿಕಾರಿ ವರ್ಗ ಕಾರ್ಯಪ್ರವೃತ್ತರಾಗಿ ಕೆಲಸ ನಿರ್ವಹಿಸಬೇಕು ಎಂದು ಎಚ್ಚರಿಕೆ ನೀಡಿದರು.

            ಸಂಸದ ಮುದ್ದಹನುಮೆಗೌಡ ಮಾತನಾಡಿ ರೈತರು ಆರ್ಥಿಕವಾಗಿ ಸ್ವಾವಲಂಬನೆ ಜೀವನ ರೂಪಿಸಿಕೊಳ್ಳಲು ಸರಕಾರ ಯೋಜನೆಯನ್ನು ಬಳಸಿಕೊಳ್ಳಬೇಕು. ತಮ್ಮ ಕುಟುಂಬಕ್ಕೆ ಆರ್ಥಿಕ ಶಕ್ತಿಯನ್ನು ನೀಡುವ ವ್ಯಕ್ತಿಗಳಾಗಿ ರೈತರು ಬೆಳೆದು ನಿಲ್ಲಬೇಕು. ಆರ್ಥಿಕವಾಗಿ ಲಾಭ ತರುವಂತಹ ಬೆಳೆಗಳನ್ನು ಬೆಳೆದು ರೈತರು ಆರ್ಥಿಕ ಸಂಕಷ್ಟದಿಂದ ಹೊರಗೆ ಬರಬೇಕು. ಸಮಾಜದ ಅಶಕ್ತ ಜನರ ರಕ್ಷಣೆಗಾಗಿ ಋಣಮುಕ್ತ ಕಾಯಿದೆಯನ್ನು ರಾಜ್ಯ ಸರಕಾರ ಜಾರಿಗೆ ತರುತ್ತಿದೆ ಎಂದರು.

            ಜಿಪಂ ಸಿಇಓ ಅನಿಸ್ ಕಣ್ಮಣಿ ಜಾಯ್ ಮಾತನಾಡಿ, ತುಮಕೂರು ಜಿಲ್ಲೆಯಲ್ಲಿ 13 ಲಕ್ಷ ಮಾನವ ದಿನಗಳಾಗಿದೆ. ಕೊರಟಗೆರೆಯಲ್ಲಿ 58 ಸಾವಿರ ಮಾತ್ರವಾಗಿ ಕೊನೆಯ ಸ್ಥಾನ ಪಡೆದಿದೆ. ಇನ್ನೆರಡು ತಿಂಗಳಲ್ಲಿ ಮಾನವ ದಿನಗಳು ಕೊರಟಗೆರೆಯಲ್ಲಿ ಪೂರ್ಣವಾಗಲು ಅಧಿಕಾರಿಗಳಿಗೆ ಜನಪ್ರತಿನಿಧಿಗಳ ಸಹಕಾರ ಅಗತ್ಯವಾಗಿದೆ. ಕೇಂದ್ರ ಸರಕಾರದ ಯೋಜನೆಯನ್ನು ಪ್ರತಿಯೊಂದು ತಾಲ್ಲೂಕಿನಲ್ಲಿ ಎರಡು ಕಾರ್ಯಕ್ರಮ ಆಯೋಜನೆ ಮಾಡಿ ಅರಿವು ಮೂಡಿಸುತ್ತೇವೆ ಎಂದು ತಿಳಿಸಿದರು.

            ಕಾರ್ಯಕ್ರಮದಲ್ಲಿ ಡಿಸಿ ರಾಕೇಶ್‍ಕುಮಾರ್, ಡಿಸಿಪಿ ಡಾ.ರೂಪರಾಣಿ, ಎಸಿ ವೆಂಕಟೇಶಯ್ಯ, ಜಿಪಂ ಸದಸ್ಯೆ ಪ್ರೇಮಾ, ಶಿವರಾಮಯ್ಯ, ತಾಪಂ ಅಧ್ಯಕ್ಷ ಕೆಂಪರಾಮಯ್ಯ, ಉಪಾಧ್ಯಕ್ಷೆ ನರಸಮ್ಮ, ಸದಸ್ಯರಾದ ಜ್ಯೋತಿ, ಟಿ ಸಿ ರಾಮಯ್ಯ, ಪಪಂ ಸದಸ್ಯ ಬಲರಾಮಯ್ಯ, ಓಬಳರಾಜು, ತಹಸೀಲ್ದಾರ್ ನಾಗರಾಜು, ಬಿಇಓ ಚಂದ್ರಶೇಖರ್, ಪಿಡ್ಲ್ಯೂಡಿ ಜಗದೀಶ್, ಕೃಷಿ ಇಲಾಖೆಯ ನೂರ್‍ಆಜಾಂ, ಸಿಪಿಐ ಮುನಿರಾಜು, ಪಿಎಸ್‍ಐ ಮಂಜುನಾಥ, ಸಂತೋಷ್ ಸೇರಿದಂತೆ ಇತರರು ಉಪಸ್ಠರಿದರು .

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link