ಶಿಗ್ಗಾಂವ್
ತಾಲ್ಲೂಕಿನ ಸೋಮಾಪುರ ಗ್ರಾಮದ ಪ್ರಗತಿಪರ ರೈತರಾದ ಶ್ರೀ ಚಂದ್ರಪ್ಪ ರಾಮಪ್ಪ ಆರೇಗೋಪ್ಪ ಇವರ ಹೊಲದಲ್ಲಿ ಸಾವೆ ಬೆಳೆಯ ತಳಿಯಾದ ಡಿ.ಹೆಚ್.ಎಲ್.ಎಲ್.36-3 ರ ಕುರಿತು ಕ್ಷೇತ್ರೋತ್ಸವನ್ನು ದಿನಾಂಕ : 19.09.2018 ರಂದು ಹಮ್ಮಿಕೊಳ್ಳಲಾಗಿತ್ತು. ಕೃಷಿ ವಿಜ್ಞಾನ ಕೇಂದ್ರ, ಹನುಮನಮಟ್ಟಿಯ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ಡಾ. ಅಶೋಕ. ಪಿ. ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕೃಷಿ ವಿಜ್ಞಾನ ಕೇಂದ್ರದ ವಿವಿಧ ಚಟುವಟಿಕೆಗಳನ್ನು ರೈತರೊಂದಿಗೆ ಹಂಚಿಕೊಂಡರು.
ಅಲ್ಲದೇ ಸಾವೆಯಲ್ಲಿ ಹಮ್ಮಿಕೊಳ್ಳಲಾದ ಮುಂಚೂಣಿ ಪ್ರಾತ್ಯಕ್ಷಿಕೆಯಲ್ಲಿ ಅಳವಡಿಸಿಕೊಂಡ ತಂತ್ರಜ್ಞಾನಗಳ ಬಗ್ಗೆ ಮುಂದಿನ ದಿನಗಳಲ್ಲಿ ಪ್ರತಿಯೊಬ್ಬ ರೈತರು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ನೀಡಿದ ತಾಂತ್ರಿಕ ಮಾಹಿತಿಯನ್ನು ಅಳವಡಿಸಿಕೊಂಡು ಹೆಚ್ಚಿನ ಇಳುವರಿ ಪಡೆಯಬೇಕೆಂದು ಕರೆ ನೀಡಿದರು ಹಾಗೂ ಈ ಹೊಸ ಸಾವೆ ತಳಿಯನ್ನು ಇತರ ರೈತರಿಗೂ ಸಹ ತಲುಪಿಸಲು ಸಲಹೆ ನೀಡಿದರು. ಕೇಂದ್ರದ ಮಣ್ಣುವಿಜ್ಞಾನದ ತಜ್ಞರಾದ ಡಾ. ಕುಮಾರ ಬಿ. ಹೆಚ್. ಮಾತನಾಡಿ ಸಾವೆಯಲ್ಲಿ ಉತ್ತಮ ಇಳುವರಿ ಪಡೆಯಲು ಮಣ್ಣು ಪರೀಕ್ಷೆ ಹಾಗೂ ಮಣ್ಣಿನ ಆರೋಗ್ಯದ ಬಗ್ಗೆ ಮಹತ್ವವನ್ನು ತಿಳಿಸಿದರು.
ನಂತರ ಬೇಸಾಯಶಾಸ್ತ್ರ ತಜ್ಞರಾದ ಡಾ. ಶಿವಮೂರ್ತಿ ಡಿ. ಮಾತನಾಡಿ ಸಾವೆಯಲ್ಲಿ ಪೋಷಕಾಂಶಗಳ ನಿರ್ವಹಣೆ, ಬೇಸಾಯ ತಾಂತ್ರಿಕತೆ ಹಾಗೂ ಸಾವೆಯ ಮೌಲ್ಯವರ್ಧನೆ ಬಗ್ಗೆ ರೈತರಿಗೆ ಮಾಹಿತಿ ನೀಡಿದರು. ಕೇಂದ್ರದ ಕೀಟತಜ್ಞರಾದ ಡಾ. ಕೆ. ಪಿ. ಗುಂಡಣ್ಣವರ ಇವರು ರೈತರೊಂದಿಗೆ ಸಮಗ್ರ ಕೀಟ ಹಾಗೂ ರೋಗಗಳ ನಿರ್ವಹಣೆ ಬಗ್ಗೆ ಮಾಹಿತಿ ಹಂಚಿಕೊಂಡರು. ತಾಲ್ಲೂಕಿನ ಕೃಷಿ ಅಧಿಕಾರಿಯಾದ ಶ್ರೀ ವಿಜಯಕುಮಾರ ಅವರು ಮಾತನಾಡಿ ತಮ್ಮ ಇಲಾಖೆಯ ವಿವಿಧ ಯೋಜನೆಗಳ ಬಗ್ಗೆ ರೈತರಿಗೆ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಚಂದ್ರಪ್ಪ ರಾಮಪ್ಪ ಆರೇಗೋಪ್ಪ ಹಾಗೂ ಪ್ರಗತಿ ಪರ ರೈತರಾದ ಸಂತೋಷ ಲಾಭಗೊಂಡ, ಆನಂದ ಬಡಿಗೇರ, ಶಿವಪ್ಪ ಭಜಂತ್ರಿ ರವರು ಈ ಹೊಸ ಸಾವೆ ತಳಿಗಳ ಬಗ್ಗೆ ತಮ್ಮ ಅನುಭವವನ್ನು ಇರತ ರೈತರಿಗೆ ಹಂಚಿಕೊಂಡರು ಹಾಗೂ ಈ ತಳಿಯನ್ನು ಮುಂದಿನ ದಿನಗಳಲ್ಲಿ ಅಳವಡಿಸಿಕೊಳ್ಳಬೇಕೆಂದು ಹೇಳಿದರು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ರಾಜು ಜಂಗಳಪ್ಪನವರ ನೇರವೇರಿಸಿದರು ಮತ್ತು ಈ ಕಾರ್ಯಕ್ರಮದ ಸ್ವಾಗತ ಭಾಷಣ ಹಾಗೂ ವಂದನಾರ್ಪಣೆಯನ್ನು ಕೇಂದ್ರದ ಬೇಸಾಯಶಾಸ್ತ್ರ ವಿಜ್ಞಾನಿಯಾದ ಡಾ. ಶಿವಮೂರ್ತಿರವರು ನಡೆಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ಸುಮಾರು 50 ಜನ ರೈತರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ