ಕೊಟ್ಟೂರು
ಮಾಜಿ ಶಾಸಕ ಶಿರಾಜ್‍ಶೇಖ್ ರನ್ನು ಕಾಂಗ್ರೇಸ್ ಪಕ್ಷದಿಂದ ಉಚ್ಚಾಟನೆಗೊಳಿಸಬೇಕೆಂದು ಆಗ್ರಹಿಸಿ ಇಲ್ಲಿನ ಪಟ್ಟಣ ಪಂಚಾಯಿತಿ ಸದಸ್ಯರು ಮತ್ತು ಅಂಜುಮನ್ ಸಮಿತಿಯವರು ಒತ್ತಾಯಿಸಿದರು.
ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಟಿ ನಡೆಸಿದ ಇವರುಗಳು ಯಾವುದೇ ಪಕ್ಷಕ್ಕೆ ನಿಷ್ಟೆಯಾಗಿರದೆ ಸದಾ ಪಕ್ಷದ್ರೋಹ ಕೆಲಸ ವೆಸಗುತ್ತಿರುವ ಶಿರಾಜ್‍ಶೇಖ್ ಖಂಡಿತ ಕಾಂಗ್ರೆಸ್ ಪಕ್ಷಕ್ಕೆ ಅನಿವಾರ್ಯವಲ್ಲ ಎಂಬುದನ್ನು ಪಕ್ಷದ ವರಿಷ್ಟರು ಅರಿತುಕೊಂಡು ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಸ್ಥಾನದಿಂದ ಶಿರಾಜ್‍ಶೇಖರನ್ನು ಬದಲಾಯಿಸಬೇಕು ಎಂದು ಆಗ್ರಹ ಪಡಿಸಿದರು.
ಈ ಹಿಂದೆ ಯಾವ ಯಾವ ಪಕ್ಷದಲ್ಲಿ ಇದ್ದರೂ ಎಂಬುದು ಜಿಲ್ಲೆಯ ಜನತೆಗೆ ಗೊತ್ತಿರುವ ವಿಷಯ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಶಾಸಕ ಭೀಮಾನಾಯ್ಕರ ವಿರುದ್ಧ ಪಕ್ಷೇತರ ಅಭ್ಯರ್ಥಿಯೊಬ್ಬರ ಪ್ರಚಾರ ಕೈಗೊಂಡು ಪಕ್ಷದ್ರೋಹವೆಸಗಿರುವ ಶಿರಾಜ್‍ಶೇಖರು ಎಷ್ಟರ ಮಟ್ಟಿಗೆ ಕಾಂಗ್ರೆಸ್ಸಿಗೆ ನಿಷ್ಟಾವಂತರು ಎಂಬುದನ್ನು ಸಾಬೀತು ಪಡಿಸಬೇಕು.
ಶಾಸಕ ಎಸ್.ಭೀಮಾನಾಯಕರು ಶಿರಾಜ್‍ಶೇಖರನ್ನು ಪಕ್ಷದಿಂದ ಉಚ್ಛಾಟಿಸುವಂತೆ ಒತ್ತಾಯಿಸಿದ್ದರಲ್ಲಿ ಯಾವುದೇ ದುರುದ್ದೇಶವಿಲ್ಲ. ಕೇವಲ ಸ್ವಹಿತ ರಕ್ಷಣೆಯ ವಿಷಯವನ್ನೇ ಪ್ರತಿಪಾದಿಸಿಕೊಂಡು ಪಕ್ಷದ ಹಿತವನ್ನು ಬಲಿಕೊಡುತ್ತಾ ಶಿರಾಜ್‍ಶೇಖ್ ಬಂದಿದ್ದಾರೆ ಎಂದು ಇವರುಗಳು ದೂರಿದರು.
ಕ್ಷೇತ್ರದ ಶಾಸಕರ ಮೇಲೆ ಹಿಡಿತ ಸಾಧಿಸುವುದನ್ನೇ ದೊಡ್ಡ ಸಾಧನೆ ಎಂದು ಹೇಳಿಕೊಳ್ಳುತ್ತಿರುವ ಸ್ವಾರ್ಥಿ ಶಿರಾಜ್‍ಶೇಖ್ ಜನತೆಗೆ ಇನ್ನೆಷ್ಟರ ಮಟ್ಟಿಗೆ ಸಾಮಾಜಿಕ ನ್ಯಾಯ ಒದಗಿಸಬಲ್ಲರು ಎಂದು ಅವರುಗಳು ಪ್ರಶ್ನೆ ಮಾಡಿದರು.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಉಗ್ರಪ್ಪನವರು ಲೋಕಸಭಾ ಚುನಾವಣೆಯಲ್ಲಿ ಗೆಲ್ಲಬೇಕಿದ್ದು ಈ ಕಾರಣಕ್ಕಾಗಿ ಶಿರಾಜ್‍ಶೇಖರನ್ನು ಕೈಬಿಡಬೇಕು. ಕ್ಷೇತ್ರದಲ್ಲಿ ಅವರನ್ನು ಜೊತೆ ಕರೆದುಕೊಂಡು ಬರಬಾರದು ಎಂದು ಅವರುಗಳು ಒತ್ತಾಯಿಸಿದರು.
ಕೇವಲ ಸ್ವಾ ಹಿತ ಶಕ್ತಿಯನ್ನು ಪ್ರತಿಪಾದಿಸಿಕೊಂಡು ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತಗಳಿಗೆ ತಿಲಾಂಜಲಿ ನೀಡುತ್ತಿರುವ ಶಿರಾಜ್‍ಶೇಖ ಇನ್ನೆಂದಿಗೂ ಕಾಂಗ್ರೇಸ್ ಪಕ್ಷಕ್ಕೆ ನಿಷ್ಟರಲ್ಲ ಅವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಛಾಟಿಸಬೇಕು. ಈ ವಿಷಯದಲ್ಲಿ ಶಾಸಕ ಭೀಮಾನಾಯ್ಕರ ಬೆಂಬಲಕ್ಕೆ ನಾವೆಲ್ಲರೂ ಕೈ ಜೋಡಿಸುತ್ತೇವೆ ಎಂದು ಅವರುಗಳು ಹೇಳಿದರು.
ಎಪಿಎಂಸಿ ಅಧ್ಯಕ್ಷ ಬೂದಿ ಶಿವಕುಮಾರ್, ಪಟ್ಟಣ ಪಂಚಾಯಿತಿ ಸದಸ್ಯರಾದ ತೋಟದ ರಾಮಣ್ಣ, ಹಳ್ಳಿ ವಿದ್ಯಾಶ್ರೀ, ಕೆ. ಹನುಮವ್ವ, ಭಾರತೀ ಪಾಟೇಲ್, ಎಲ್.ಲಕ್ಷ್ಮೀ, ಸಾವಿತ್ರಮ್ಮ ಪ್ರಕಾಶ್, ಟಿ.ಜಗದೀಶ್, ಅಂಜಿನಮ್ಮ ವಿರೂಪಾಕ್ಷಿ, ಶೈಲಜ ರಾಜೀವ್, ಪ್ರಕಾಶ್, ಅಂಜುಮನ್ ಕಮಿಟಿ ಗೌರವಾಧ್ಯಕ್ಷ ಗಫೂರ್ ಸಾಬ್, ಟಿಪ್ಪು ಸುಲ್ತಾನ ಕಮಿಸಿ ಕಾಯದರ್ಶಿ ಸೈಫುಲ್ಲಾ, ಮುಖಂಡರಾದ ನಜೀರ್, ಕೆ.ಎಂ. ಸಲೀಂ, ನಬೀ, , ಪ.ಪಂ. ಮಾಜಿ ಅಧ್ಯಕ್ಷ ಅನಿಲ್ ಹೊಸಮನಿ ಮತ್ತಿತರರು ಇದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ