ಸಿರಿಗೆರೆ
ಗ್ರಾಮದ ಗ್ರಾಮ ಪಂಚಾಯಿತಿಯಲ್ಲಿ 2018-19ನೇ ಸಾಲಿನ ಮೋದಲನೆ ವಿಶೇಷ ಗ್ರಾಮ ಸಭೆ ಮತ್ತು 2017-18ನೇ ಸಾಲಿನ ಜಮಾ ಬಂದಿ ಬುದುವಾರ ಪಂಚಾಯಿತಿ ಸಭಾ ಭವನದಲ್ಲಿ ನಡೆಯಿತು.
ಈ ವೇಳೆ ಪಿಡಿಒ ರಾಮಪ್ಪ ಮಾತನಾಡಿ ವ್ಯಕ್ತಿಗತ ಕಾಮಗಾರಿಗಳು ಮಾಡಿಕೋಳ್ಳುವವರು ಭೂ ಅಭಿವೃದ್ದಿ, ತೋಟಗಾರಿಕೆ ಅಭಿವೃದ್ದಿ, ರೇಷ್ಮೆ ಅಭಿವೃದ್ದಿ, ಅರಣ್ಯಗಿಡ ನೆಡುವಿಕೆ, ಕುರಿ ದನದ ದೊಡ್ಡಿ,ರೈತರ ಕಣ, ಆಟದ ಮೈದಾನ ಕೃಷಿಹೊಂಡ, ಕೊಲವೆ ಬಾವಿಗಳ ಮರುಪೂರುಣ ಘಟಕಗಳು ಹಾಗೂ ಇತರೆ ಕಾಮಗಾರಿಗಳ ಸೌಲಭ್ಯಗಳು ಇದ್ದು ಸಾರ್ವಜನಿಕರು ಇವುಗಳನ್ನು ಸದುಪಯೋಪಡಿಸಿ ಕೊಳ್ಳಲು ಮುಂದಾಗಬೇಕು ಎಂದುರು
ನಂತರ 2017-18ನೇ ಸಾಲಿನ ಪಂಚಾಯಿತಿಯ ಅಯವ್ಯಯ ಖರ್ಚು ವೆಚ್ಚದ ಲೇಕ್ಕಪತ್ರಗಳನ್ನು ಸಭೆಯಲ್ಲಿ ಮಂಡಿಸಿದರು.ಇದೆವೇಳೆ ಸ್ಥಳಿಯ ಬಸ್ ನಿಲ್ದಾಣ ಕಾಮಗಾರಿ ಪ್ರಾರಂಭ ಮಾಡುವಂತೆ ಹಾಗೂ ಪಂಚಾಯಿತಿ ಮಳಿಗೆಗಳು ಪ್ರಾರಂಭ ದಿಂದ ಇಂದಿನವರಿಗೆ ಹೋಸ ಟೆಂಡೆರ್ ಕರಿದಿಲ್ಲಾ ಕೂಡಲೆ ಮರು ಟೆಂಡರ್ ಕರೆದು ಹೋಸಬರಿಗೆ ಅವಕಾಶ ಮಾಡಿಕೋಡಬೇಕು ಅದೆರೀತಿ ಹೊಸಹರಿಜನ ಕಲೋನಿಯಲ್ಲಿ ಸಿಸಿರಸ್ತೆ ನಿರ್ಮಾಣ ಮತ್ತು ಗ್ರಾಮದ ನಡಿವಿರಸ್ತೆಯಲ್ಲಿರುವ ನಾಗರಬಾವಿ ಜಾಗವನ್ನು ಅತಿಕ್ರಮಿಸಿರುವ ಖಾಸಗಿ ಶೆಡ್‍ಗಳನ್ನು ತೆರವುಗೋಳಿಸಿವಂತೆ ಸಾರ್ವ ಜನಿಕರು ಪಿಡಿಒ ರವರಿಗೆ ಮನವಿಗಳನ್ನು ಸಲ್ಲಿಸಿದರು.
ಮನವಿ ಸ್ವಿಕರಿಸಿ ಖಾಸಗಿ ಸೇಡ್‍ದರಾರಿಗೆ ತಕ್ಷಣ ನೋಟಿಸ್ ಜಾರಿ ಮಾಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಕೊಳ್ಳಿದ್ಯಾವಮ್ಮ ಪಾವಡಿನಾಯಕ, ಉಪಾಧ್ಯಕ್ಷ ಗೋಡೆಸಂಪತ್ ಕುಮಾರ,ಮಾಜಿ ಉಪಾಧ್ಯಕ್ಷ ಅಡಿವೆಯ್ಯಸ್ವಾಮಿ,ನರೇಗಾ ಅಧಿಕಾರಿ ನಿರ್ಮಾಲಾ, ಗ್ರಾಪಂ ಸದಸ್ಯರುಗಳು ಹಾಗೂ ಖಾಜಪೀರ್,ಹಳ್ಳಿಮರದ ವೀರೆಶ್,ನಾಗೇಂದ್ರ,ಶ್ರೀರಾಮ್, ಸಿಬ್ಬಂದಿಗಳು ಉಪಸ್ತಿತರು ಇದ್ದರು.