ಸಿರುಗುಪ್ಪ ಡಾ.ಬಾಬು ಜಗಜೀವನ ರಾಮ್ 112ನೇ ಜನ್ಮದಿನಾಚರಣೆ

ಸಿರುಗುಪ್ಪ

     ದೇಶದ ಅಭಿವೃದ್ಧಿಗೆ ಶ್ರಮಿಸಿದ ಮಹಾನೀಯರ ಜಯಂತಿಯನ್ನು ಶ್ರದ್ಧೆಯಿಂದ ಆಚರಿಸೋಣ ಎಂದು ತಹಶಿಲ್ದಾರ್ ದಯಾನಂದ ಪಾಟೀಲ್ ಹೇಳಿದರು.

     ಸಿರುಗುಪ್ಪ ನಗರದ ತಾಲೂಕು ಪಂಚಾಯತ್ ಸಭಾಭವನದಲ್ಲಿ ಕರ್ನಾಟಕ ಸರಕಾರ ತಾಲೂಕು ಆಡಳಿತ ಸಮಾಜ ಕಲ್ಯಾಣ ಇಲಾಖೆಯು ಹಸಿರು ಕ್ರಾಂತಿಯ ಹರಿಕಾರ ರಾಷ್ಟ್ರೀಯ ನಾಯಕ ಭಾರತದ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನರಾಂ ಅವರ 112ನೇ ಜನ್ಮ ದಿನಾಚರಣೆ ಶುಕ್ರವಾರ ಬಾಬು ಜಗಜೀವನರಾಮ್ ಭಾವಚಿತ್ರಕ್ಕೆ ಪುಷ್ಪಮಾಲೆ ಅರ್ಪಿಸಿ ದೀಪ ಬೆಳಗಿಸಿ ಮಾತನಾಡಿ ಈ ಕಾರ್ಯಕ್ರಮ ಅದ್ಧೂರಿಯಾಗಿ ಆಚರಿಸಬೇಕಿತ್ತು ಆದರೆ ಲೋಕಸಭಾ ಚುನಾವಣೆ 2019 ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಸಾಂಕೇತಿಕವಾಗಿ ಸರಳವಾಗಿ ಜಯಂತಿಯನ್ನು ಸಮತಾ ದಿನವನ್ನಾಗಿ ಆಚರಿಸಲಾಗಿದೆ ದೇಶದ ಸರ್ವಾಂಗೀಣ ಶ್ರೇಯೋಭಿವೃದ್ಧಿಗೆ ನೀಡಿದ ಇವರ ಕೊಡುಗೆ ಅಪಾರ ಜಗಜೀವನ್ ರಾಮ್- ಅಂಬೇಡ್ಕರ್ ಮತ್ತಿತರ ಮಹಾನೀಯರ ಸಿದ್ಧಾಂತ ಆದರ್ಶಗಳನ್ನು ಪಾಲಿಸಬೇಕು ಎಂದರು.

      ಸಮಾಜ ಕಲ್ಯಾಣ ಇಲಾಖೆಯ ಗ್ರೇಡ್-2 ಸಹಾಯಕ ನಿರ್ದೇಶಕರಾದ ಶಾಶು? ಮೋದಿನ್ ಸಾಬ್ ಆರಂಭದಲ್ಲಿ ಸರ್ವರನ್ನು ಸ್ವಾಗತಿಸಿ ಮಾತನಾಡಿ ಭಾರತದ ಸಾರ್ವಭೌಮತೆ ಅಖಂಡತೆ ಮತ್ತು ಏಕತೆಯನ್ನು ಎತ್ತಿ ಹಿಡಿಯುವುದು ಮತ್ತು ಕಾಪಾಡುವುದು ಪ್ರತಿಯೊಬ್ಬ ಭಾರತೀಯನ ಸಂವಿಧಾನ ಬದ್ಧ ಮೂಲ ಕರ್ತವ್ಯ ಎಂದರು.

       ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶಿವಪ್ಪ ಸುಭೇದಾರ್, ಹಿಂದುಳಿದ ವರ್ಗಗಳ ಅಲ್ಪಸಂಖ್ಯಾತರ ವಿಸ್ತರಣಾಧಿಕಾರಿ ಶ್ಯಾಮಪ್ಪ, ಲೋಕಶಿಕ್ಷಣ ನಿರ್ದೇಶನಾಲಯ ಸಾಕ್ಷರತಾ ಮಿಷನ್ ಪ್ರಾಧಿಕಾರ ಸದಸ್ಯ ಎ.ಅಬ್ದುಲ್ ನಬಿ, ಬಾಬು ಜಗಜೀವನರಾಮ್ ದಲಿತ ಸಂಘರ್ಷ ಅಧ್ಯಕ್ಷರು ಎಚ್ ಬಿ ಗಂಗಪ್ಪ, ಅವರು ಜಗಜೀವನ್ ರಾಮ್ ಕುರಿತು ಉಪನ್ಯಾಸ ನೀಡಿದರು. ತಾಲ್ಲೂಕು ಕಚೇರಿಯ ಅನಿತಾ ಅವರು ಕಾರ್ಯಕ್ರಮ ನಿರೂಪಿಸಿದರು. ತಾಲ್ಲೂಕು ಪಂಚಾಯತ್, ತಾಲ್ಲೂಕು ಕಚೇರಿ, ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ,ಮತ್ತಿತರ ಇಲಾಖೆಗಳ ಅಧಿಕಾರಿಗಳು,ಸಿಬ್ಬಂದಿ ವರ್ಗದವರು,ಉಪಸ್ಥಿತರಿದ್ದರು.

      ಶಾಲಾ ಮಕ್ಕಳಿಂದ ನಾಡಗೀತೆ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಕಚೇರಿಯಲ್ಲಿ ಗ್ರೇಡ್-2 ಸಹಾಯಕ ನಿರ್ದೇಶಕರು ಶಾಶು? ಮೊದಿನ್ ಡಾ.ಬಾಬು ಜಗಜೀವನ್ ರಾಮ್ ಅವರ ಜನ್ಮದಿನ ಪ್ರಯುಕ್ತ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದರು ಸಿಬ್ಬಂದಿವರ್ಗದವರಿದ್ದರು

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

 

Recent Articles

spot_img

Related Stories

Share via
Copy link