ತುಮಕೂರು:
ಗುಬ್ಬಿಯ ಚನ್ನಬಸವೇಶ್ವರ ತಾಂತ್ರಿಕ ಮಹಾವಿದ್ಯಾಲಯದಲ್ಲಿ ವಿವಿಧ ಇಂಜಿನಿಯರಿಂಗ್ ವಿಭಾಗಗಳಲ್ಲಿ 2018-19ನೇ ಸಾಲಿನಲ್ಲಿ ಕ್ಯಾಂಪಸ್ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಿದೆ.
2018-19ನೇ ಸಾಲಿನಲ್ಲಿ ಸಿ.ಐ.ಟಿ ಕಾಲೇಜಿನಲ್ಲಿ 7ನೇ ಸೆಮಿಸ್ಟರ್ ವಿದ್ಯಾಭ್ಯಾಸ ಮಾಡುತ್ತಿರುವ ವಿವಿಧ ಎಂಜಿನಿಯರಿಂಗ್ ವಿಭಾಗಗಳ ವಿದ್ಯಾರ್ಥಿಗಳ ಕ್ಯಾಂಪಸ್ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಿದ್ದು, ಈ ದಿಸೆಯಲ್ಲಿ ಎಂಫಸಿಸ್ ಕಂಪನಿಯ ಹೆಚ್.ಆರ್.ಗಳು ಕಾಲೇಜಿಗೆ ಭೇಟಿ ನೀಡಿ, ಸಿ.ಐ.ಟಿ ಕಾಲೇಜಿನ ಆರ್ಹ ವಿದ್ಯಾರ್ಥಿಗಳನ್ನು ತಮ್ಮ ಭಾವಿ ಮಾನವ ಸಂಪನ್ಮೂಲಗಳನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ.
2018-19ನೇ ಸಾಲಿನಲ್ಲಿ ಸಿ.ಐ.ಟಿ ಕಾಲೇಜು 20ಕ್ಕೂ ಹೆಚ್ಚು ಕಂಪನಿಗಳನ್ನು ಕ್ಯಾಂಪಸ್ ಸೆಲೆಕ್ಷನ್ ಪ್ರಕ್ರಿಯೆಗಾಗಿ ಆಮಂತ್ರಿಸಿದ್ದು, ಈ ತಿಂಗಳ ಅಂತ್ಯಕ್ಕೆ 3 ವಿವಿಧ ಕಂಪನಿಗಳು ಭೇಟಿ ನೀಡಲಿವೆ ಎಂದು ಕಾಲೇಜಿನ ಉದ್ಯೋಗಾಧಿಕಾರಿಗಳಾದ ಡಾ:ಪ್ರಸನ್ನ ಕುಮಾರ್ ರವರು ಮತ್ತು ಕಾಲೇಜಿನ ಉಪ ಪ್ರಾಂಶುಪಾಲರು ಮತ್ತು ಸಿ.ಎಸ್.ಇ ವಿಭಾಗದ ಮುಖ್ಯಸ್ಥರೂ ಆದ ಡಾ:ಶಾಂತಲರವರುಗಳು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು ಹಾಗೂ ಕಾಲೇಜಿನ ಟ್ರೈನಿಂಗ್ & ಪ್ಲೇಸ್‍ಮೆಂಟ್ ವಿಭಾಗದ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು.
2018-19ನೇ ಸಾಲಿನಲ್ಲಿ ಎಂಫಸಿಸ್ ಕಂಪನಿಯ ಕ್ಯಾಂಪಸ್ ಸೆಲೆಕ್ಷನ್‍ನಲ್ಲಿ ಆಯ್ಕೆಯಾದ ಸಿ.ಐ.ಟಿ ಕಾಲೇಜಿನ ವಿದ್ಯಾರ್ಥಿಗಳಿಗೆ ಚನ್ನಬಸವೇಶ್ವರ ತಾಂತ್ರಿಕ ಮಹಾವಿದ್ಯಾಲಯದ ಅಧ್ಯಕ್ಷರಾದ ಜಿ.ಎಸ್ ಬಸವರಾಜ್, ಕಾರ್ಯದರ್ಶಿಗಳಾದ ಜಿ.ಬಿ ಜ್ಯೋತಿಗಣೇಶ್‍ರವರು ಹಾಗೂ ಕಾಲೇಜಿನ ನಿರ್ದೇಶಕರಾದ ಮತ್ತು ಪ್ರಾಂಶುಪಾಲರಾದ ಡಾ: ಡಿ.ಎಸ್. ಸುರೇಶ್‍ರವರು ಅಭಿನಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ