ಧರಣಿ ಸಂರಕ್ಷಿಸದಿದ್ದರೆ ನಮ್ಮನ್ನು ರಕ್ಷಿಸುವವರ್ಯಾರು : ಶಾರದಾ ಕೊಪ್ಪದ

 ತಿಪಟೂರು

        ನಗರೀಕರಣ ಬೆಳೆದಂತೆ ಮನುಷ್ಯನು ತನ್ನ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಭೂಮಿಯನ್ನು ಸಾದ್ಯವಾದಷ್ಟು ಮಟ್ಟಿಗೆ ನಾಶಮಾಡುತ್ತಿದ್ದಾನೆ, ಇದನ್ನು ಧರಣಿಯನ್ನು ಸಚಿರಕ್ಷಿಸದಿದ್ದರೆ ನಮ್ಮನ್ನು ರಕ್ಷಿವವರ್ಯಾರು, ಅದಕ್ಕೋಸ್ಕರವಾದರು ಭೂಮಿ ರಕ್ಷಿಸಿ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಶಾರದಾ ಕೊಪ್ಪದ ತಿಳಿಸಿದರು.

      ನಗರದ ತಾಲೂಕು ಪಂಚಾಯಿತಿ ಆವರಣದಲ್ಲಿ ಶನಿವಾರ ನಡೆದ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಕೃಷಿ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಭೂ ಸಂರಕ್ಷಣಾ ದಿನಾಚರಣೆ ಅಂಗವಾಗಿ ಕಾನೂನು ಅರಿವು ನೆರವು ಸಾಕ್ಷರತಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹವಾಮಾನ ವೈಪರೀತ್ಯ, ತಾಪಮಾನ ಏರಿಕೆ ಪರಿಣಾಮ ಭೂಮಿಯು ನಾಶವಾಗುತ್ತಿದ್ದು, ಜೀವಸಂಕುಲ ಬದುಕುವುದು ಕಷ್ಟಕರವಾಗುತ್ತಿದೆ. ಆದ್ದರಿಂದ ಗಿಡಮರಗಳನ್ನು ಯಥೇಚ್ಚವಾಗಿ ಬೆಳೆಸುವ ಮೂಲಕ ಭೂಮಿಯನ್ನು ಸಂರಕ್ಷಿಸಬೇಕೆಂದರು.

       ತಹಸೀಲ್ದಾರ್ ಬಿ. ಆರತಿ ಮಾತನಾಡಿ ಗಾಂಧೀಜಿ ಹೇಳಿದಂತೆ ಪ್ರಕೃತಿಯು ಮಾನವನ ಆಸೆಗಳನ್ನು ಪೂರೈಸಬಲ್ಲದೇ ಹೊರತು ದುರಾಸೆ ಎಂದು ಹೇಳಿರುವಂತೆ ನಮ್ಮ ಆಸೆಗಳಿಗೆ ಪ್ರಕೃತಿಯನ್ನು ಹೆಚ್ಚಾಗಿ ಬಳಸಿದರೆ ಪ್ರಕೃತಿ ನಾಶವಾಗುತ್ತದೆ ಇದರಿಂದ ಸಕಲ ಜೀವರಾಶೀಗಳು ಇದರ ಪರಿಣಾಮವನ್ನು ಅನುಭವಿಸುವಂತಾಗುತ್ತದೆ ನಮ್ಮ ಮುಂದಿನ ಪೀಳಿಗೆಗಾದರೂ ನಾವು ಪರಿಸರವನ್ನು ಉಳಿಸಬೇಕು ಎಂದು ತಿಳಿಸಿದರು.

        ಕೊನೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಅನಿತಾ ಮಾತನಾಡಿ ಹೆಚ್ಚಿನ ಇಳುವರಿಗಾಗಿ ಭೂಮಿಗೆ ಇಲ್ಲಸಲ್ಲದ ಗೊಬ್ಬರವನ್ನು ಬಳಸಿ ಭೂಮಿಯನ್ನು ಹಾಳುಮಾಡುವುದಲ್ಲದೇ ಅದರಿಂದ ಬೆಳೆಯುವ ಬೆಳೆಯಿಂದ ಮಾನವನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ ಪರಿಸರ ಚಕ್ರದಲ್ಲಿ ನಾವೀಗ ಮತ್ತೆ ಉರುಳಿ ಸಾವಯವದತ್ತ ಮುಖಮಾಡಿದ್ದು ಒಳ್ಳೆಯ ಬೆಳವಣಿಗೆ ಎಂದರು.
ಕಾರ್ಯಕ್ರಮದಲ್ಲಿ ವಕೀಲರ ಸಂಘದ ಕಾರ್ಯದರ್ಶಿ ಎಂ.ಸಿ.ನಟರಾಜು ಸಿ.ಡಿ.ಪಿ.ಓ ಓಂಕಾರಪ್ಪ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಸುನೀಲ್, ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಶೇಖರ್ ಮತ್ತಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link