ಗುತ್ತಲ:
ಪಟ್ಟಣದ ಶ್ರೀಹೇಮಗಿರಿ ಚನ್ನಬವೇಶ್ವರರ ಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ ಸುಮಂಗಲೆಯರ ಪೂರ್ಣ ಕುಂಭೋತ್ಸವ ಕಾರ್ಯಕ್ರಮ ಸೋಮವಾರ ನೆರವೇರಿತು.
ಬೆಳಿಗ್ಗೆ ಶ್ರೀಹೇಮಗಿರಿಮಠದಿಂದ ನಂದಿಕೋಲು, ಸಮ್ಮಾಳ, ಭಜನಾ ಮೇಳಗಳೊಂದಿಗೆ ಹೊರಟ ಪೂರ್ಣ ಕುಂಭದ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪುನಃ ಶ್ರೀ ಮಠವನ್ನು ತಲುಪಿ ಸಂಪನ್ನಗೊಂಡಿತು. ಶ್ರೀಹೇಮಗಿರಿಮಠದಲ್ಲಿನ ವಿಶೇಷ ಪೂಜೆಯ ನಂತರ ನೂತನ ಕಲ್ಯಾಣ ಮಂಟಪದ ನಿವೇಶನದಲ್ಲಿ ಅನ್ನಸಂತರ್ಪಣೆ ಜರುಗಿತು. ಮೆರವಣಿಗೆಯಲ್ಲಿ ನಂದಿಕೋಲು, ಭಜನಾ ಮೇಳ ಹಾಗೂ ಸಮಾಳ ಹಾಗೂ ನೂರಾರು ಮಹಿಳೆಯರು, ಶ್ರೀ ಮಠದ ಭಕ್ತರು, ಹೇಮಗಿರಿ ಚನ್ನಬಸವೇಶ್ವರರ ಶ್ರಾವಣ ಮಾಸದ ಪೂರ್ಣ ಕುಂಭೋತ್ಸವ ಸಮಿತಿಯ ಸದಸ್ಯರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಮೆರವಣಿಗೆಯಲ್ಲಿ ಐರಣಿಯ ಆನೆ ಎಲ್ಲರ ಗಮನ ಸೆಳೆಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ